ಮೈಸೂರು ಪಾಲಿಕೆಯ ಕಟ್ಟಡ ಪರವಾನಗಿ ಆನ್‍ಲೈನ್ ಸೇವೆ ಈಗ ಆಫ್‍ಲೈನ್!
ಮೈಸೂರು

ಮೈಸೂರು ಪಾಲಿಕೆಯ ಕಟ್ಟಡ ಪರವಾನಗಿ ಆನ್‍ಲೈನ್ ಸೇವೆ ಈಗ ಆಫ್‍ಲೈನ್!

March 18, 2021

ಮೈಸೂರು, ಮಾ.17- ಮೈಸೂರು ಮಹಾ ನಗರ ಪಾಲಿಕೆಯು ಭಾರೀ ಉತ್ಸಾಹದಿಂದ ಆರಂಭಿ ಸಿದ `ಕಟ್ಟಡ ಪರವಾನಗಿ’ ಆನ್‍ಲೈನ್ ಸೇವೆ ಈಗ `ಆಫ್‍ಲೈನ್’ ಆಗಿದೆ. ತಿಂಗಳ ಹಿಂದಷ್ಟೇ ಆರಂಭಿಸಿದ ಆನ್‍ಲೈನ್ ಸೇವೆ ಈಗ ಸ್ಥಗಿತ ವಾಗಿದೆ. ಕಟ್ಟಡ ನಿರ್ಮಾಣಕ್ಕೆ ಅತ್ಯಗತ್ಯವಾದ ಪರವಾನಗಿಯು ಆನ್‍ಲೈನ್ ಮೂಲಕವೇ ಸುಲಭ ವಾಗಿ ಸಿಗಲಿದೆ ಎಂಬ ವಿಶ್ವಾಸದಲ್ಲಿ ಅರ್ಜಿ ಸಲ್ಲಿಸಿದ್ದ ಜನರು ಈಗ ಪರದಾಡುವಂತಾಗಿದೆ. ಅಧಿಕಾರಿಗಳೂ ಸಹ ಆನ್‍ಲೈನ್-ಆಫ್‍ಲೈನ್ ಸೇವೆಗಳ ನಡುವೆ ಗೊಂದಲಕ್ಕೊಳಗಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ತಾಂತ್ರಿಕ ಸಮಸ್ಯೆಯಿಂದಾಗಿ ಆನ್‍ಲೈನ್ ಅರ್ಜಿಗಳನ್ನು ವಿಲೇವಾರಿ ಮಾಡಲಾಗದೇ ಕೈಚೆಲ್ಲಿರುವ ಅಧಿಕಾರಿಗಳು, ತಾಂತ್ರಿಕ ಸಮಸ್ಯೆ ಪರಿಹರಿಸಿಕೊಡುವಂತೆ ಸರಕಾರಕ್ಕೆ ಪತ್ರ ಬರೆದಿದ್ದಾರೆ. `ಬೇಗ ಸಮಸ್ಯೆ ಬಗೆಹರಿಸಿಕೊಡ ದಿದ್ದರೆ ಆಫ್‍ಲೈನ್‍ನಲ್ಲೇ ಪರವಾನಗಿ ನೀಡಲು ಅವಕಾಶ ನೀಡಬೇಕು’ ಎಂದÀು ಮನವಿ ಮಾಡಿದ್ದಾರೆ. ನೋಂದಾಯಿತ ಎಂಜಿನಿಯರ್ ಗಳು, ಕಟ್ಟಡ ಮಾಲೀಕರ ಪರವಾಗಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ ಪರವಾನಗಿಗಾಗಿ ಕಾದಿದ್ದಾರೆ. ನೂರಾರು ಅರ್ಜಿಗಳು ಸಲ್ಲಿಕೆ ಯಾದ ಬಳಿಕ ವಿಲೇವಾರಿಯಲ್ಲಿ ತಾಂತ್ರಿಕ ತೊಂದರೆ ಎದುರಾಗಿ ಸೇವೆ ಸದ್ಯ ಸ್ಥಗಿತ ಗೊಂಡಿದೆ. ಪರಿಣಾಮ ಮೂರು ವಾರಗಳಿಂದ ನೂರಾರು ಅರ್ಜಿಗಳು ಬಾಕಿಯಾಗಿವೆ. ಇದರಿಂದ ಕಟ್ಟಡ ನಿರ್ಮಾಣಕ್ಕೆ ಭಾರೀ ಅಡ್ಡಿಯಾಗಿದೆ ಎಂದು ಕಟ್ಟಡಗಳ ಮಾಲೀ ಕರು ಅಲವತ್ತುಕೊಂಡಿದ್ದಾರೆ.

Translate »