ಮೈಸೂರಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ  61 ಮಂದಿ ಡಿಎಲ್ ಅಮಾನತು
ಮೈಸೂರು

ಮೈಸೂರಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 61 ಮಂದಿ ಡಿಎಲ್ ಅಮಾನತು

March 18, 2021

ಮೈಸೂರು,ಮಾ.17-ನಗರದಲ್ಲಿ ಸಂಚಾರ ನಿಯಮ ಉಲ್ಲಂ ಘನೆ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು, ಇದನ್ನು ತಡೆ ಯುವುದಕ್ಕಾಗಿ ಚಾಲನಾ ಪರವಾನಗಿ (ಡಿಎಲ್) ಅಮಾ ನತು ಕಾರ್ಯ ಚುರುಕು ಗೊಂಡಿದೆ. ನಿಯಮ ಉಲ್ಲಂ ಘಿಸಿ ವಾಹನ ಚಾಲನೆ ಮಾಡು ವುದರಿಂದ ನಿತ್ಯ ಸಾವು-ನೋವು ಸಂಭವಿಸುತ್ತಿವೆ. ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಬಲಿಯಾಗಬೇಕಾದ ದುಸ್ಥಿತಿ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ಪೆÇಲೀಸರು ನಗರದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಹದಿಹರೆಯದ ಯುವಕರಿಂದ ಹಿಡಿದು ಮಧ್ಯವಯಸ್ಕ ರವರೆಗೂ ವಾಹನ ಚಲಾಯಿಸುವಾಗ ಮೊಬೈಲ್ ಬಳಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಕಳೆದ ವಾರ ಇದಕ್ಕಾ ಗಿಯೇ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ಸಂಚಾರ ಪೆÇಲೀಸರು ಮಾಡಿದ್ದರು. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದ 45 ಜನರನ್ನು ಒಂದೇ ದಿನ ಪತ್ತೆ ಮಾಡಿ ಅವರ ಡಿಎಲ್ ಅಮಾನತು ಮಾಡಲಾಗಿದೆ. 3 ದಿನಗಳ ಈ ಕಾರ್ಯಾಚರಣೆ ಯಲ್ಲಿ ಮೊಬೈಲ್ ಬಳಕೆಯಿಂದ 61 ಮಂದಿ ತಮ್ಮ ಡಿಎಲ್ ಕಳೆದು ಕೊಂಡರು. ಡಿಸೆಂಬರ್‍ನಿಂದ ಫೆಬ್ರವರಿವರೆಗಿನ ಅವಧಿಯಲ್ಲಿ ನಗರದಲ್ಲಿ ಅತಿವೇಗ ಚಾಲನೆಯ 3,429 ಪ್ರಕರಣ ದಾಖಲಾ ಗಿವೆ. ಏಕಮುಖ ಸಂಚಾರ ಮಾರ್ಗದಲ್ಲಿ ವಾಹನ ಚಲಾಯಿಸಿದ 1973 ಮಂದಿ ವಿರುದ್ಧವೂ ಪ್ರಕರಣ ದಾಖಲಾಗಿವೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದ್ದಕ್ಕೆ 425 ಹಾಗೂ ಸಂಚಾರ ಸಿಗ್ನಲ್ ಜಂಪ್ ಮಾಡಿದ್ದಕ್ಕೆ 395 ಪ್ರಕರಣ ದಾಖಲಾಗಿವೆ.

ಇದರಲ್ಲಿ ಜಂಪಿಂಗ್ ಟ್ರಾಫಿಕ್ ಸಿಗ್ನಲ್ ಹಾಗೂ ಗಾಡಿ ಓಡಿಸುವಾಗ ಮೊಬೈಲ್ ಬಳಕೆ ಎರಡರಿಂದಲೇ ಒಟ್ಟು 143 ಡಿಎಲ್ ಅಮಾನತು ಮಾಡಲಾಗಿದೆ. 2019ರಲ್ಲಿ ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ 3816 ಪ್ರಕರಣ ದಾಖಲಾಗಿದ್ದವು. ಆದರೆ, 2020ರಲ್ಲಿ ಕೊರೊನಾ ಪರಿಣಾಮ ವಾಹನಗಳ ಚಾಲನೆ ಕಡಿಮೆ ಇದ್ದುದರಿಂದ 890 ಪ್ರಕರಣಗಳು ದಾಖಲಾಗಿದ್ದವು.

Translate »