ಮೈಸೂರು ಸಂಚಾರ ಪೊಲೀಸರಿಗೆ ವೃತ್ತಿ ಕೌಶಲ್ಯ ತರಬೇತಿ ಕಾರ್ಯಾಗಾರ
ಮೈಸೂರು

ಮೈಸೂರು ಸಂಚಾರ ಪೊಲೀಸರಿಗೆ ವೃತ್ತಿ ಕೌಶಲ್ಯ ತರಬೇತಿ ಕಾರ್ಯಾಗಾರ

June 20, 2018

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿ ನಲ್ಲಿರುವ ಎಸ್‍ಡಿಎಂ-ಐಎಂಡಿ ಸಭಾಂಗಣ ದಲ್ಲಿ ಮಂಗಳವಾರ ಸಂಚಾರ ಪೊಲೀಸ ರಿಗೆ ವೃತ್ತಿ ಕೌಶಲ್ಯ ಕುರಿತಂತೆ ತರಬೇತಿ ಕಾರ್ಯಾಗಾರ ನಡೆಯಿತು.

ಮೈಸೂರು ನಗರ ಪೊಲೀಸ್ ವತಿ ಯಿಂದ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಉದ್ಘಾಟಿಸಿದರು. ದುಬೈನ ಸಾಫ್ಟ್‍ಸ್ಕಿಲ್ ತರಬೇತಿ ಸಂಸ್ಥೆಯ ಸ್ಪೆಷಲ್ ಕನ್ಸಲ್ಟೆಂಟ್ ಆಗಿರುವ ಬೆಂಗಳೂರಿನ ಮಧುಕಿರಣ್ ಅವರು ಸಂಚಾರ ಪೊಲೀಸರಿಗೆ ತರಬೇತಿ, ರಸ್ತೆ ಸುರಕ್ಷತೆ, ಸಂಚಾರ ನಿಯಮಗಳನ್ನು ಪಾಲಿಸುವ ಕುರಿತು ಸಾರ್ವಜನಿಕರು ಹಾಗೂ ವಾಹನ ಬಳಕೆದಾರರಿಗೆ ತಿಳು ವಳಿಗೆ ಮೂಡಿಸುವುದು.

ಜಾಗೃತಿ ಮೂಲಕ ಮನವೊಲಿಸುವುದು, ಕಾನೂನು ಹೇರುವಾಗ ಅನುಸರಿಸ ಬೇಕಾದ ಮಾರ್ಗಸೂಚಿ ಬಗ್ಗೆ ಅವರು ಸಂಚಾರ ಪೊಲೀಸರಿಗೆ ಟಿಪ್ಸ್ ಗಳನ್ನು ನೀಡಿದರು. ಜನಸ್ನೇಹಿ ಪೊಲೀಸ್ ಯೋಜನೆಯನ್ನು ಅನುಷ್ಠಾನಗೊಳಿಸ ಬೇಕಾದರೆ ವಿಶೇಷವಾಗಿ ಸಂಚಾರ ಪೊಲೀಸರು ಸಾರ್ವಜನಿಕರ ವಿಶ್ವಾಸ ಗಳಿಸಿ, ಅವರನ್ನು ಸ್ನೇಹಿತನಂತೆ ಕಾಣ ಬೇಕು. ನಿಮ್ಮ ಮಾತು, ನಡೆ-ನುಡಿ ವರ್ತನೆ ವಿನಮ್ರವಾಗಿದ್ದರೆ ಜನರ ಮನಸ್ಸು ಗೆಲ್ಲಲು ಸಾಧ್ಯ ಎಂದು ಮಧುಕಿರಣ್ ಅವರು ಕಿವಿಮಾತು ಹೇಳಿದರು. ಸದಾ ರಸ್ತೆಯಲ್ಲಿ ಒತ್ತಡದಿಂದ ಕೆಲಸ ನಿರ್ವಹಿಸುವ ಸಂಚಾರ ಪೊಲೀಸರು ವೃತ್ತಿ ನೈಪುಣ್ಯತೆ ಬೆಳೆಸಿ ಕೊಂಡು, ದಿನದಿಂದ ದಿನಕ್ಕೆ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು. ವಾಹನದಟ್ಟನೆ ಹೆಚು ್ಚತ್ತಿದ್ದಂತೆಯೇ ಸಂಚಾರ ಸಮಸ್ಯೆಗಳೂ ವೃದ್ಧಿಯಾಗುವುದರಿಂದ ನಿರ್ವಹಣೆ ಸವಾ ಲಾಗುತ್ತದೆ ಎಂದು ಅವರು ತಿಳಿಸಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮಹಾನಿಂಗ ಬಿ.ನಂದಗಾವಿ, ಸಂಚಾರ ವಿಭಾಗದ ಎಸಿಪಿ ಎಲ್ಲಾ ಸಂಚಾರ ಠಾಣೆ ಗಳ ಇನ್‍ಸ್ಪೆಕ್ಟರ್ ಸಬ್‍ಇನ್‍ಸ್ಪೆಕ್ಟರ್‍ಗಳು ಹಾಗೂ ಸಿಬ್ಬಂದಿಗಳು ಕಾರ್ಯಾಗಾರ ದಲ್ಲಿ ಹಾಜರಿದ್ದರು.

Translate »