ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಸಭೆಯಲ್ಲಿ ವ್ಯಕ್ತವಾದ ಹತ್ತು ಹಲವು ಸಲಹೆಗಳು
ಮೈಸೂರು

ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಸಭೆಯಲ್ಲಿ ವ್ಯಕ್ತವಾದ ಹತ್ತು ಹಲವು ಸಲಹೆಗಳು

June 20, 2018

ಮೈಸೂರು: ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾದ ಅನೇಕ ಸಲಹೆಗಳು ವ್ಯಕ್ತವಾದವು.

ಮೈಸೂರು ಪ್ರವಾಸಿ ತಾಣಗಳ ಪ್ರಚಾರಕ್ಕೆ ರಾಯಭಾರಿಗಳ ನಿಯೋಜನೆಯಾಗ ಬೇಕು. ಅಂಬಾವಿಲಾಸ ಅರಮನೆ ದೀಪಾ ಲಂಕಾರ ಹಾಗೂ ಕೆಆರ್‍ಎಸ್ ಬೃಂದಾವನದ ಕಾರಂಜಿ ಪ್ರತಿದಿನ ರಾತ್ರಿ 7ರಿಂದ 9 ರವರೆಗೆ ಇರುವಂತಾಗಬೇಕು. ಪಾರಂ ಪರಿಕ ಕಟ್ಟಡಗಳಿಗೆ ಫೋಕಸ್ ಲೈಟ್ ಅಳವ ಡಿಸಬೇಕು. ಚಾಮುಂಡಿಬೆಟ್ಟಕ್ಕೆ ರೇಡಿಯಂ ಮಾರ್ಗಫಲಕಗಳನ್ನು ಅಳವಡಿಸ ಬೇಕು. ಕೃಷ್ಣರಾಜ ವೃತ್ತದಿಂದ ಆಯುರ್ವೇದ ಕಾಲೇಜು ವೃತ್ತದವರೆಗಿನ ಅಸಹ್ಯ ಬ್ಯಾರಿ ಕೇಡ್‍ಗಳನ್ನು ತೆರವುಗೊಳಿಸಿ, ಅಗತ್ಯ ವಿದ್ದಾಗ ಬಿಚ್ಚಿಡಬಹುದಾದ ಸುಂದರ ಡಿವೈಡರ್ ಅಳವಡಿಸಬೇಕು. ಅರಮನೆ ಒಳ ಆವರಣದ ಹಾಗೂ ಚಾಮುಂಡಿಬೆಟ್ಟದಲ್ಲಿರುವಂತೆ ಎಲ್ಲೆಡೆಯೂ ಸುಸಜ್ಜಿತ ಶೌಚಾಲಯವಿರಬೇಕು. ಅರಮನೆ ಆವರಣದಲ್ಲಿ ಖಾಸಗಿ ಆನೆಯ ಮೇಲೆ ಅಂಬಾರಿ ಮಾದರಿ ಮೆರವಣಗೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ದಿನನಿತ್ಯ ನಡೆಯುವಂತಾಗಬೇಕು. ಪ್ರಾಯೋ ಜಕರಿಗೆ ಅಂಬಾರಿ ಮಾದರಿಯಲ್ಲಿ ಮೆರವಣ ಗೆಗೆ ಅವಕಾಶ ನೀಡಬೇಕು. ವಸ್ತು ಪ್ರದರ್ಶನದ ಆವರಣದಲ್ಲಿ ಬಟಾನಿಕಲ್ ಗಾರ್ಡನ್, ಐಸ್ ಪ್ಲೇ, ವಾಟರ್ ಸ್ಪೋಟ್ರ್ಸ್, ರಾಮೋಜಿರಾವ್ ಫಿಲಂ ಸಿಟಿಯಂತೆ ರೂಪಿ ಸಬೇಕು. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ, ಸ್ಕೈ ವ್ಹೀಲ್, ಕೇಬಲ್ ಕಾರ್ ವ್ಯವಸ್ಥೆ ಯಾಗಬೇಕು. ಹರಿದ್ವಾರದಂತೆ ಬ್ಯಾಟರಿ ಬಸ್, ಕಾರ್‍ಗಳ ಸಂಚಾರವಾಗಬೇಕು.

ಎಲ್ಲಾ ಕಡೆಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಪ್ರವಾಸೋದ್ಯಮ ಇಲಾಖೆಯೇ ನಿರ್ವಹಣೆ ಮಾಡುವ ಮೂಲಕ ಪ್ಲಾಸ್ಟಿಕ್ ಬಾಟಲ್‍ಗಳ ಹಾವಳಿ ತಪ್ಪಿಸಬೇಕು. ಪ್ರವಾಸಿಗರಿಗೆ ಕಿರಿಕಿರಿ ಮಾಡ ದಂತೆ ವಿಶೇಷ ತರಬೇತಿ ನೀಡಿ, ಪೊಲೀಸ ರನ್ನು ನಿಯೋಜಿಸಬೇಕು. ಮಾಹಿತಿ ಕೇಂದ್ರ ಗಳನ್ನು ಸ್ಥಾಪಿಸಬೇಕು. ಹೊರರಾಜ್ಯಗಳ ವಾಹನಗಳನ್ನು ತಡೆದು ಹಣ ವಸೂಲಿ ಮಾಡುವುದು ತಪ್ಪಬೇಕು. ಟೋಲ್ ಕಡಿಮೆ ಮಾಡಬೇಕು. ಕೆಆರ್‍ಎಸ್ ಹಿನ್ನೀರಿ ನಲ್ಲಿ ಜಲಕ್ರೀಡೆಗಳನ್ನು ಆರಂಭಿಸಬೇಕು.

ಪ್ರವಾಸಿಗರು ಎರಡು-ಮೂರು ದಿನ ಮೈಸೂರಲ್ಲಿ ತಂಗುವಂತಹ ವಾತಾವರಣ ನಿರ್ಮಾಣವಾಗಬೇಕು. ಪ್ರವಾಸೋದ್ಯಮ ಇಲಾಖೆಯ ಫೇಸ್‍ಬುಕ್ ಪೇಜ್‍ನಲ್ಲಿ ಕೇವಲ 11 ಸಾವಿರ ಮಂದಿಯಿದ್ದು, ಸಾಮಾ ಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕೆ ಆದ್ಯತೆ ನೀಡಬೇಕು. ದುಸ್ಥಿತಿಯಲ್ಲಿರುವ ಜಗನ್ಮೋಹನ ಅರಮನೆ ಕಾಪಾಡಿಕೊಳ್ಳಬೇಕು. ಜಯಲಕ್ಷ್ಮೀವಿಲಾಸ ಅರಮನೆ ಬಗ್ಗೆ ಪ್ರಚಾರ ಮಾಡಬೇಕು. ಲಲಿತಮಹಲ್ ನಿರ್ವಹಣೆಯನ್ನು ಪ್ರತಿಷ್ಟಿತ ಸಂಸ್ಥೆಗೆ ವಹಿಸ ಬೇಕು. ಎಲ್ಲಾ ಪ್ರವಾಸಿ ತಾಣಗಳಿಗೆ ಸಂಪರ್ಕಿ ಸುವ ಸಕ್ರ್ಯೂಟ್ ಬಸ್ ವ್ಯವಸ್ಥೆಯಾಗ ಬೇಕು. ಸಿಂಗಲ್ ಎಂಟ್ರಿ ಟಿಕೆಟ್ ಅಂದರೆ ಎಲ್ಲಾ ತಾಣಗಳ ಪ್ರವೇಶಕ್ಕೂ ಒಂದೇ ಕೇಂದ್ರದಲ್ಲಿ ಟಿಕೆಟ್ ವಿತರಿಸುವಂತಾಗ ಬೇಕು. ಈ ರೀತಿಯ ಹಲವು ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು.

ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರು ಟ್ರಾವೆಲ್ ಮಾರ್ಟ್‍ನ ಪ್ರಶಾಂತ್, ಬಾಂಬೆ ಟಿಫಾನೀಸ್‍ನ ಅನಿಲ್‍ಕುಮಾರ್, ವೆಂಕಟೇಶ್, ಸುಬ್ರಹ್ಮಣ್ಯ ತಂತ್ರಿ, ಮಹೇಶ್ ಕಾಮತ್ ಸೇರಿದಂತೆ ಅನೇಕರು ಮಹತ್ವದ ಸಲಹೆಗಳನ್ನು ನೀಡಿದರು.

Translate »