ರಜೆ ರದ್ದಾದರೂ ಮೃಗಾಲಯಕ್ಕೆ ಪ್ರವೇಶ ಕುಸಿತ
ಮೈಸೂರು

ರಜೆ ರದ್ದಾದರೂ ಮೃಗಾಲಯಕ್ಕೆ ಪ್ರವೇಶ ಕುಸಿತ

June 20, 2018

ಮೈಸೂರು: ಮಂಗಳವಾರ ಮೃಗಾಲಯಕ್ಕೆ 8,189 ಮಂದಿ ಭೇಟಿ ನೀಡಿದ್ದರೆ, ಕಾರಂಜಿ ಕೆರೆಗೆ 960 ಮಂದಿ ಭೇಟಿ ನೀಡಿದ್ದರು.
ಮೃಗಾಲಯದ ಹಬ್ಬದ ರಜೆಗಳಲ್ಲಿ ಪ್ರವಾಸ ಕೈಗೊಳ್ಳುವವರು ಹಾಗೂ ಸಾರ್ವಜನಿಕರಿಗೆ ಅನು ಕೂಲ ಕಲ್ಪಿಸುವ ಉದ್ದೇಶದಿಂದ ಮಂಗಳವಾರದ ವಾರದ ರಜೆಯನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ವಿವಿಧ ರಾಜ್ಯಗಳಿಂದ ಮೈಸೂರಿಗೆ ಆಗಮಿಸಿದ್ದ ಪ್ರವಾಸಿಗರು ಮೃಗಾಲಯವನ್ನು ವೀಕ್ಷಿಸಲು ಸಾಧ್ಯವಾಯಿತು.

ಸರ್ಕಾರಿ ರಜೆಗಳ ಸಂದರ್ಭದಲ್ಲಿ ಹೀಗೆ ವಾರದ ರಜೆಯನ್ನು ರದ್ದುಗೊಳಿಸಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಪರಿಪಾಠವನ್ನು ಮೃಗಾಲಯ ನಡೆಸಿಕೊಂಡು ಬಂದಿದೆ. ಎಂದಿನಂತೆ ಈ ಮಂಗಳವಾರ ರಜೆ ಇಲ್ಲವಾದ ಹಿನ್ನೆಲೆಯಲ್ಲಿ ದೂರದಿಂದ ಬಂದಿದ್ದ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿ -ಪಕ್ಷಿ ಹಾಗೂ ಮೃಗಾಲಯದ ಸುಂದರ ಪರಿಸರ ವೀಕ್ಷಿಸಿ ಸಂಭ್ರಮಿಸಿದರಲ್ಲದೆ, ಈ ಪೈಕಿ ಹಲವರು ಕಾರಂಜಿ ಕರೆಗೂ ಭೇಟಿ ನೀಡಿ ಪ್ರಕೃತಿ ಸೌಂದರ್ಯ ವೀಕ್ಷಿಸಿ ಹರ್ಷಗೊಂಡರು. ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಕಂಡುಬಂದರು.

ಜೊತೆಗೆ ಅನೇಕ ಸ್ಥಳೀಯರು ಕೂಡ ಮೃಗಾಲಯ ಮತ್ತು ಕಾರಂಜಿ ಕೆರೆಗೆ ಆಗಮಿಸಿದ್ದರು. ರಂಜಾನ್ ಹಬ್ಬದ ದಿನವಾದ ಶನಿವಾರ (ಜೂ.16) ಮೃಗಾಲಯಕ್ಕೆ 18,103 ಮಂದಿ ಭೇಟಿ ನೀಡಿದ್ದರೆ, ಭಾನುವಾರ 29,012 ಮಂದಿ ಭೇಟಿ ನೀಡಿದ್ದರು. ಅಂತೆಯೇ ಸೋಮವಾರ 18,715 ಮಂದಿ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಈ ಮೂರು ದಿನಗಳ ಪೈಕಿ ಮೃಗಾಲಯದ ರಜೆ ದಿನವಾದ ಮಂಗಳವಾರ (ಜೂ.19) ವೀಕ್ಷಕರ ಸಂಖ್ಯೆ ಇಳಿಮುಖವಾಗಿದ್ದು, 8,189 ಮಂದಿ ಭೇಟಿ ನೀಡಿದ್ದಾರೆ. ಇದರಿಂದ ನಾಲ್ಕು ದಿನಗಳಿಂದ ಒಟ್ಟಾರೆ 45,73,535 ರೂ. ಟಿಕೆಟ್ ಶುಲ್ಕ ಸಂಗ್ರಹವಾಗಿದೆ. ಅದೇ ರೀತಿ ಕಾರಂಜಿ ಕೆರೆಗೆ ಈ ನಾಲ್ಕು ದಿನಗಳಲ್ಲಿ 8,614 ಮಂದಿ ಭೇಟಿ ನೀಡಿದ್ದು, ಇದರಿಂದ 2,71,740 ಹಣ ಸಂಗ್ರಹವಾಗಿದೆ.

Translate »