ವಿಪ್ರನಿಧಿ ಸ್ಥಾಪನೆಗೆ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ
ಮೈಸೂರು

ವಿಪ್ರನಿಧಿ ಸ್ಥಾಪನೆಗೆ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ

June 20, 2018

ಮೈಸೂರು: ಮೈಸೂರು ನಗರಕ್ಕೆ ವಿವಿಧ ಕಾರ್ಯಕ್ರಮಗಳ ನಿಮಿತ್ತ ಭೇಟಿ ನೀಡಿದ್ದ ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಆರ್.ವಿ ದೇಶಪಾಂಡೆ ಅವರನ್ನು ಬ್ರಾಹ್ಮಣ ಯುವ ವೇದಿಕೆಯ ಪದಾಧಿಕಾರಿಗಳು ಇಂದು ಸರ್ಕಾರಿ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಅವರನ್ನು ಅಭಿನಂದಿಸಿದರಲ್ಲದೆ, ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ, ವಿಪ್ರನಿಧಿ ಸ್ಥಾಪನೆ ವಿಚಾರವಾಗಿ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ ಮಾತನಾಡಿ, ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಪ್ರತಿನಿತ್ಯ ಹಲವಾರು ಸಮಸ್ಯೆಗಳನ್ನು ಎದುರಿ ಸುತ್ತಿದ್ದು, ಶಿಕ್ಷಣ, ಆರೋಗ್ಯ, ಉದ್ಯೋಗದ ವಿಚಾರವಾಗಿ ತೊಂದರೆಯಾದರೆ ಸರ್ಕಾರದ ಯಾವುದೇ ಸೌಲಭ್ಯಗಳಾಗಲೀ ಮಾನ್ಯತೆಗಳಿಲ್ಲ. ಶಿಕ್ಷಕರು, ಅಡುಗೆಯವರು ಪುರೋಹಿತರು ಸೇರಿದಂತೆ ಬಡತನ ರೇಖೆ ಗಿಂತ ಕೆಳಗಿರುವ ವಿಪ್ರರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಆಂಧ್ರ ತೆಲಂಗಾಣದ ಮಾದರಿಯಲ್ಲಿ ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ಅಥವಾ ವಿಪ್ರನಿಧಿ ಸ್ಥಾಪನೆ ಜಾರಿಯಾಗಬೇಕು ಈ ವಿಚಾರ ವಾಗಿ ಸದನದಲ್ಲಿ ತಾವು ಪ್ರಸ್ತಾಪಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ, ಸಚಿವ ಆರ್.ವಿ. ದೇಶ ಪಾಂಡೆ ಮಾತನಾಡಿ, ಕಳೆದ ಬಾರಿಯೇ ಬ್ರಾಹ್ಮಣರ ಅಭಿವೃದ್ಧಿ ನಿಗಮದ ಬಗ್ಗೆ ರಾಜ್ಯದೆಲ್ಲೆಡೆ ಕೂಗು ವ್ಯಾಪಕವಾಗಿತ್ತು. ಇದರ ಬಗ್ಗೆ ಆರ್ಥಿಕ ತಜ್ಞರನ್ನು ಕರೆಸಿ ವಿಪ್ರನಿಧಿಯ ಸ್ಥಾಪನೆಯ ಬಗ್ಗೆಯೂ ಚರ್ಚಿಸಲಾಗಿತ್ತು, ಈ ಸಮ್ಮಿಶ್ರ ಸರ್ಕಾರ ದಲ್ಲಿ ವಿಪ್ರನಿಧಿ ಸ್ಥಾಪನೆಯಾಗಲಿದೆ. ತೆಲಂಗಾಣಕ್ಕೆ ಬ್ರಾಹ್ಮಣ ಮುಖಂಡರ ನಿಯೋಗವನ್ನು ಕಳಿಸಿ, ಸಮೀಕ್ಷೆ ನಡೆಸಿ ಮುಂದಿನ ನಿರ್ಣಯವನ್ನು ಕೈಗೊಳ್ಳ ಲಾಗುವುದು ಎಂದರು.

ಈ ವೇಳೆ ಮುಳ್ಳೂರು ಗುರುಪ್ರಸಾದ್, ಕಾಂಗ್ರೆಸ್ ಯುವ ಮುಖಂಡ ವಿನಯ್ ಕಣಗಾಲ್, ಕೆ.ವಿ.ರಾಮ್‍ಕುಮಾರ್, ಡಾ.ಸುಜಾತ, ಡಾ. ಕೆವಿ.ಉಷಾ, ಲತಾ ಮೋಹನ್, ವೀಣಾ, ತಿವಾರಿ, ವೆಂಕಟ ಸುಬ್ಬಯ್ಯ, ಹೆಡತಲೆ ಮಂಜು, ರಾ.ಕಿರಣ್ ಇತರರು ಉಪಸ್ಥಿತರಿದ್ದರು.

Translate »