60 ದಿನದಲ್ಲೇ ಭೂಪರಿವರ್ತನೆ
ಮೈಸೂರು

60 ದಿನದಲ್ಲೇ ಭೂಪರಿವರ್ತನೆ

February 21, 2019
  • ಮನೆಯಲ್ಲೇ ಕುಳಿತು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದರೆ ಸಾಕು
  • 200 ರೂ. ಅಫಿಡವಿಟ್, ಮ್ಯುಟೇಶನ್, ಹಲವು ಮಾಲೀಕರಿದ್ದರೆ 11-ಇ ಆನ್‍ಲೈನ್‍ನಲ್ಲಿ ಸಲ್ಲಿಸಿದರೆ ಮುಗಿಯಿತು; ಅಲೆಯಬೇಕಾದ ಅಗತ್ಯವಿಲ್ಲ
  • 60 ದಿನದಲ್ಲಿ ಮನೆ ಬಾಗಿಲಿಗೆ ಆದೇಶ ಬರದಿದ್ದರೂ ಪರಿವರ್ತನೆ ಆಗಿದೆ ಎಂದೇ ಮುಂದಿನ ಪ್ರಕ್ರಿಯೆ ಆರಂಭಿಸಬಹುದು

ಬೆಂಗಳೂರು: ಕೃಷಿ ಭೂಮಿ ಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿ ಸಲು ಇನ್ನು ಮುಂದೆ ಅಧಿಕಾರಿಗಳಿಗೆ ಲಂಚ ನೀಡುವ ಅಗತ್ಯವಿಲ್ಲ.

ಮನೆಯಲ್ಲೇ ಕುಳಿತು ಸರ್ಕಾರ ಕೇಳಿದ ಸೂಕ್ತ ದಾಖಲೆಗಳನ್ನು ಆನ್‍ಲೈನ್ ಮೂಲಕ ಸಂಬಂಧಪಟ್ಟ ಇಲಾಖೆಗೆ ರವಾನಿಸಿದರೆ, 60 ದಿನಗಳಲ್ಲಿ ಆದೇಶದ ಪ್ರತಿ ಬಾಗಿಲಿಗೆ ಬಂದು ಬೀಳುತ್ತದೆ. ಇಂತಹ ಮಹತ್ತರ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಇದರ ಲಾಭ ಪಡೆದುಕೊಂಡು ಕೃಷಿ ಭೂಮಿಯನ್ನು ವಿವಿಧ ಯೋಜನೆಗಳಿಗೆ ಬಳಕೆ ಮಾಡಿ, ಸಂಪನ್ಮೂಲ ವೃದ್ಧಿಸಿಕೊಳ್ಳಬೇಕೆಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭೂ ಪರಿವರ್ತನೆಗೆ ಇದುವರೆಗೂ 24ರಿಂದ 25 ದಾಖಲೆಗಳನ್ನು ನೀಡಿ, ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿತ್ತು. ಎಷ್ಟೋ ಮಂದಿ ಜೇಬು ಖಾಲಿ ಯಾದರೂ, ಅವರ ಕೆಲಸ ಮಾತ್ರ ಆಗಿರಲಿಲ್ಲ. ಭ್ರಷ್ಟಾಚಾರ, ಲಂಚಗುಳಿತನ ತಪ್ಪಿಸುವ ಉದ್ದೇಶ ದಿಂದ ಸರಳ ರೀತಿಯಲ್ಲಿ ಪರಿವರ್ತನೆಗೆ ಅವ ಕಾಶ ನೀಡಲಾಗಿದೆ. ಕೃಷಿಯೇತರ ಭೂಮಿಯ ನ್ನಾಗಿ ಪರಿವರ್ತಿಸಲು 200 ರೂ. ಪತ್ರದಲ್ಲಿ ಅಫಿಡವಿಟ್ ಅನ್ನು ಸಂಬಂಧಪಟ್ಟ ಇಲಾಖೆಗೆ ಆನ್‍ಲೈನ್ ಮೂಲಕ ರವಾನಿಸಿದರೆ ಸಾಕು. ಅಫಿಡ ವಿಟ್ ಜೊತೆಗೆ ಮ್ಯುಟೇಶನ್ ಮತ್ತು ಭೂಮಿಗೆ ಹಲವು ಮಾಲೀಕರಿದ್ದರೆ 11-ಇ ಅರ್ಜಿಯನ್ನು ಸಲ್ಲಿಸಿ, ಹಣ ಪಾವತಿ ಮಾಡಿದರೆ ಸಾಕು. 60 ದಿನಗಳಲ್ಲಿ ಭೂ ಪರಿವರ್ತನೆ ಮಾಡಿಕೊಡ ಲಾಗುವುದು ಎಂದು ಹೇಳಿದರು.

ಕೃಷಿ ಭೂಮಿಯನ್ನು ಪರಿವರ್ತಿಸಲು 120 ದಿನಗಳ ಕಾಲಾವಕಾಶವಿತ್ತು. ಆದರೆ ಇನ್ನು ಮುಂದೆ ಅರವತ್ತೇ ದಿನಗಳಲ್ಲಿ ಆ ಕೆಲಸ ಮಾಡಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಮ್ಮ ಮನವಿಗೆ ನಿಗದಿತ ಅವಧಿ ಯಲ್ಲಿ ಅಧಿಕಾರಿಗಳು ಸ್ಪಂದಿಸದಿದ್ದರೆ, ಸ್ವಯಂ ಪ್ರೇರಿತವಾಗಿ ನಿಮ್ಮ ಭೂಮಿ
ಕೃಷಿಯೇತರ ಚಟುವಟಿಕೆಗೆ ಬಳಸಿಕೊಳ್ಳುವ ಅಧಿಕಾರ ದೊರೆಯಲಿದೆ ಎಂದರು.
ಕೇಂದ್ರದ ವಿರುದ್ಧ ಆರೋಪ: ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಚಿವರು, ರೈತರು ಮತ್ತು ಬಡವರ ಬಗ್ಗೆ ಇವರಿಗೆ ಎಳ್ಳಷ್ಟು ಕಾಳಜಿ ಇಲ್ಲ ಎಂದರು. ರಾಜ್ಯದ 156 ತಾಲೂಕುಗಳು ಬರಕ್ಕೆ ಸಿಲುಕಿ ರೈತರು ಕಂಗಾಲಾ ಗಿದ್ದಾರೆ. ಮುಂಗಾರು ಮಳೆ ವಿಫಲದಿಂದ ಸಾವಿರಾರು ಕೋಟಿ ರೂ. ಬೆಳೆ ನಷ್ಟವಾಗಿದೆ. ಆದರೆ ಕೇಂದ್ರ ಸರ್ಕಾರ ಕೇವಲ 949.39 ಕೋಟಿ ರೂ. ಪರಿಹಾರ ನೀಡಿದೆ.
ಘೋಷಣೆ ಮಾಡಿರುವ ಪರಿಹಾರ ಇದುವರೆಗೂ ಸರ್ಕಾರದ ಕೈ ಸೇರಿಲ್ಲ. ಇದರ ಮಧ್ಯೆ ಹಿಂಗಾರು ಹಂಗಾಮಿನಲ್ಲಿ 23313.37 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದ್ದು, ಇದರ ಮೌಲ್ಯ 11384.47 ಕೋಟಿ ರೂ. ಆಗಿರುತ್ತದೆ.

ಕೃಷಿ ಸಚಿವರ ಜೊತೆಗೂಡಿ, ಕೇಂದ್ರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಬರ ಪರಿಶೀಲನೆಗೆ ಅಧಿಕಾರಿ ತಂಡ ಕಳುಹಿಸುವುದಾಗಿ ಹೇಳಿದರಾದರೂ, ಇದುವರೆಗೂ ಬಂದಿಲ್ಲ. ನರೇಗಾ ಯೋಜನೆಯಡಿಯಲ್ಲೂ ಕೇಂದ್ರ ಸರ್ಕಾರ ಬಡವರ ಜೊತೆ ಚೆಲ್ಲಾಟವಾಡುತ್ತಿದೆ. ಕೂಲಿ ಕಾರ್ಮಿಕ ದುಡಿದಿದ್ದರೂ ಇದುವರೆಗೂ ಆತನ ಖಾತೆಗೆ ಹಣ ಜಮಾವಾಗಿಲ್ಲ. ಅದೇ ರೀತಿ ರೈತರ ವಿಷಯಕ್ಕೂ ಇದೇ ಮಾನದಂಡ ಅನುಸರಿಸುತ್ತಿದೆ ಎಂದು ದೂರಿದರು. ರಾಜ್ಯದಲ್ಲಿ ಐವತ್ತು ಹೊಸ ತಾಲೂಕುಗಳನ್ನು ರಚಿಸಲು ನಿರ್ಧರಿಸಲಾ ಗಿದ್ದರೂ ಹೊಸ ತಾಲೂಕುಗಳಲ್ಲಿ ಕಂದಾಯ ಇಲಾಖೆ ಮಾತ್ರ ಕಾರ್ಯ ನಿರ್ವಹಿ ಸುತ್ತಿದೆ.ಉಳಿದಂತೆ ಹದಿಮೂರು ಇಲಾಖೆಗಳು ಹೊಸ ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಹಾಗೆ ಮಾಡಲು ವಿವಿಧ ಇಲಾಖೆಗಳು ಇನ್ನೂ ಸ್ಥಾಪನೆ ಯಾಗಬೇಕು.ಅದಕ್ಕೆ ಹಣಕಾಸಿನ ಲಭ್ಯತೆಯಾಗಬೇಕು. ವಿವಿಧ ಹುದ್ದೆಗಳ ಮಂಜೂ ರಾತಿ ಕಾರ್ಯ ನಡೆಯಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ತಿಳಿಸಿದರು.

ಮನೆಗಳ ಸಕ್ರಮಕ್ಕೆ ಮಾರ್ಚ್ ಅಂತ್ಯದವರೆಗೆ ಕಾಲಾವಕಾಶ
ಬೆಂಗಳೂರು: ರಾಜ್ಯದ ಗ್ರಾಮಾಂತರ ಹಾಗೂ ನಗರ ಪ್ರದೇಶದ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಇದ್ದ ಕಾಲಾವಕಾಶವನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು 94(ಸಿ) ಹಾಗೂ 94 (ಸಿ) (ಸಿ) ಅಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2015ರ ಜ.1ಕ್ಕೂ ಪೂರ್ವದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಮಾತ್ರ ಸಕ್ರಮ ಗೊಳಿಸಲಾಗುವುದು. ಇದರ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳು ತಮ್ಮ ವಸತಿಯನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸದಿದ್ದರೆ, ಮತ್ತೊಂದು ಅವಕಾಶ ಕಲ್ಪಿಸುತ್ತಿದ್ದೇವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಕಂದಾಯ ಭೂಮಿಯಲ್ಲಿ ಕಟ್ಟಲಾದ ಆಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದರು. ಅದೇ ರೀತಿ ಬಗರ್ ಹುಕುಂ ಭೂಮಿಯನ್ನು ಸಕ್ರಮಗೊಳಿಸಲು ಸಲ್ಲಿಕೆಯಾದ ಅರ್ಜಿಗಳನ್ನು ಈ ವರ್ಷದ ಏಪ್ರಿಲ್ 26ರ ಒಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಹಾಗೆಯೇ ಬಗರ್‍ಹುಕುಂ ಭೂಮಿಗೆ ಅರ್ಜಿ ಸಲ್ಲಿಸುವವರು ಬಾಕಿ ಇರುವುದರಿಂದ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಅರ್ಜಿ ಸಲ್ಲಿಕೆಗೆ ಮಾರ್ಚ್ ಹದಿನಾರರವರೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.

Translate »