ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ
ಮೈಸೂರು

ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ

March 28, 2020

ಮೈಸೂರು, ಮಾ.27(SPN)- ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಪಾಠ ನಡೆಸಲು ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಸಪ್ನ ಮುಂದಾಗಿದ್ದಾರೆ.

ಇದು ಮೈಸೂರು ವಿವಿ ಮಾನಸಗಂಗೋತ್ರಿಯ ಪತ್ರಿಕೋಧ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಸಪ್ನಾ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಕೋವಿಡ್ -19 ಭೀತಿಯಿಂದ ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ತರಗತಿಗಳು ಸಹ ನೆನೆಗುದಿಗೆ ಬಿದ್ದಿವೆ. ಪರಿಣಾಮ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನಿಗಧಿಪಡಿಸಿದ್ದ ಬಾಕಿ ಉಳಿದ ಪಠ್ಯಕ್ರಮಗಳು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಾ. ಎಂ.ಎಸ್. ಸಪ್ನಾ ಅವರು ತಂತ್ರಜ್ಞಾನದ ಬಳಸಿಕೊಂಡು ಪಾಠ ಮಾಡಲು ಮುಂದಾಗಿದ್ದಾರೆ.

ತಂತ್ರಜ್ಞಾನದಿಂದ ಇಂದಿನಿಂದಲೇ ತರಗತಿಗಳು ಆರಂಭಗೊಂಡಿವೆ. ಇದು ಪ್ರತಿದಿನ ಒಂದು ಗಂಟೆ ನಡೆಯಲಿದೆ. ಏಕಕಾಲದಲ್ಲಿ 8 ರಿಂದ 10 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬಹುದು. ಜತೆಗೆ ಸಂಪರ್ಕಿಸುವ ಮತ್ತು ಉಪನ್ಯಾಸಗಳನ್ನು ಹೊಂದಿರುವ ದಾಖಲೆಗಳನ್ನು ಹಂಚಿಕೊಳ್ಳುವುದು ತುಂಬಾ ಸುಲಭ.

ಆದ್ದರಿಂದ ವಿದ್ಯಾರ್ಥಿಗಳಿಗೆ ‘ ಸ್ವ -ಗೃಹನಿರ್ಬಂಧ’ ದ ವೇಳೆ ಜೂಮ್ ತಂತ್ರಜ್ಞಾನ ಉಪಯುಕ್ತವಾಗಲಿದೆ

ಈ ಬಗ್ಗೆ ಡಾ.ಎಂ.ಎಸ್. ಸಪ್ನಾ, ಸಂಪರ್ಕಕ್ಕೆ ತಂತ್ರಜ್ಞಾನವನ್ನು ಬಳಸಬೇಕು. ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಲು ಶಿಕ್ಷಣ ತಜ್ಞರು ಬಳಸುವ ವಿವಿಧ ರೀತಿಯ ಅಪ್ಲಿಕೇಶನ್‌ಗಳಿವೆ.

ಆ್ಯಪ್ ಬಳಕೆಯಿಂದ ವಿದ್ಯಾರ್ಥಿಗಳು ಸಹ ಸಂತೋಷವಾಗಿದ್ದಾರೆ . ಸುಲಭವಾಗಿ ಕೆಲಸ ಮಾಡಲು ನಿಗದಿತ ಸಮಯದಲ್ಲಿ ತರಗತಿಗೆ ಹಾಜರಾಗಬಹುದು. ಶಿಕ್ಷಕರಾಗಿ ನಾವು ಈ ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇಂದಿನಿಂದ ಪ್ರತಿದಿನ ನಾವು 1 ಗಂಟೆ ತರಗತಿಗಳನ್ನು ನಡೆದಿವೆ.

Translate »