ಉಡುಪಿ ಜಿಲ್ಲೆ ಬೈಲಗೆರೆ ತಂಡಕ್ಕೆ ಒಗಾರ ಶಂಕರ ಕಪ್
ಮೈಸೂರು

ಉಡುಪಿ ಜಿಲ್ಲೆ ಬೈಲಗೆರೆ ತಂಡಕ್ಕೆ ಒಗಾರ ಶಂಕರ ಕಪ್

May 26, 2019

ಮೈಸೂರು: ಮಾನಸಗಂಗೋತ್ರಿ ಕಾಫಿ ಬೋರ್ಡ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಉಡುಪಿ ಜಿಲ್ಲೆಯ ಬೈಲಗೆರೆ ತಂಡ `ಒಗಾರ ಶಂಕರ ಕಪ್’ ತನ್ನದಾಗಿಸಿಕೊಂಡಿತು.

ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ನಡೆದ ರಾಜ್ಯ ಮಟ್ಟದ ಬ್ರಾಹ್ಮಣ ಸಮು ದಾಯದ `ಶಂಕರ ಕಪ್’ ಕ್ರಿಕೆಟ್ ಪಂದ್ಯಾ ವಳಿಯಲ್ಲಿ ಉಡುಪಿ ಜಿಲ್ಲೆಯ ಬೈಲಗೆರೆ ತಂಡ ಪ್ರಥಮ ಬಹುಮಾನ ಪಡೆದರೆ, ಚಿತ್ರದುರ್ಗದ ಶ್ರೀಹರಿ ಸಮರ್ಥಾಸ್ ತಂಡ ದ್ವಿತೀಯ ಹಾಗೂ ಮಂಡ್ಯದ ಕೃಷ್ಣರಾಜ ಸಾಗರದ ಚಾಣಕ್ಯ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.

ಶಾಸಕ ಎಸ್.ಎ.ರಾಮದಾಸ್ ಬಹುಮಾನ ವಿತರಿಸಿ, ಮಾತನಾಡಿ, ಬ್ರಾಹ್ಮಣ ಸಮು ದಾಯ ಬುದ್ಧಿವಂತ ಸಮಾಜ. ಪ್ರತಿಭಾ ವಂತ ಯುವಕರು ಮುಖ್ಯವಾಹಿನಿಗೆ ಬರ ಬೇಕಾದರೆ ಸಂಘಟನೆ ಬಹಳ ಮುಖ್ಯ. ಕ್ರೀಡೆಯಲ್ಲಿ ಸೋಲು-ಗೆಲುವು ಪಂದ್ಯ ಮುಗಿ ಯುವವರೆಗೂ ಮಾತ್ರ. ನಂತರ ಸೌಹಾ ರ್ದತೆ ಸೋದರತ್ವ ಮುಖ್ಯ ಎಂದರು.

ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಮಾತನಾಡಿ ಮೈಸೂರಿನಲ್ಲಿ ಬ್ರಾಹ್ಮಣರು ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆ. ಆರ್ಥಿಕವಾಗಿ ಹಿಂದು ಳಿದ ವಿಪ್ರ ಕುಟುಂಬಗಳಿಗೆ ಯೋಜನೆ ಗಳನ್ನು ರೂಪಿಸಲು ಸರ್ಕಾರ ಮುಂದಾಗ ಬೇಕು. ಜತೆಗೆ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ.ಪ್ರಕಾಶ್, ಶಾಸಕ ಎಲ್.ನಾಗೇಂದ್ರ, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್. ಎನ್.ಶ್ರೀಧರಮೂರ್ತಿ, ಶ್ರೀಕಂಠೇಶ್ವರ ಸಂಸ್ಥೆ ಮಾಲೀಕ ಉಮೇಶ್ ಶರ್ಮ, ಪಾಲಿಕೆ ಸದಸ್ಯ ಮಾವಿ.ರಾಮ್‍ಪ್ರಸಾದ್, ಬಾಲಕೃಷ್ಣ, ಹರೀಶ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮುಳ್ಳೂರು ಗುರುಪ್ರಸಾದ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಜಯಸಿಂಹ, ನಿಶಾಂತ್, ಕಡಕೊಳ ಜಗದೀಶ್, ಗ್ರಾಪಂ ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Translate »