ಜ್ಯೋತಿಷಿಗಳು ಪುರೋಹಿತರ ಕ್ರಿಕೆಟ್ ಪಂದ್ಯಾವಳಿ: ಬೆಂಗಳೂರಿನ ಸಮರ್ಥ ಕ್ರಿಕೆಟರ್ಸ್ ವಿನ್ನರ್
ಮೈಸೂರು

ಜ್ಯೋತಿಷಿಗಳು ಪುರೋಹಿತರ ಕ್ರಿಕೆಟ್ ಪಂದ್ಯಾವಳಿ: ಬೆಂಗಳೂರಿನ ಸಮರ್ಥ ಕ್ರಿಕೆಟರ್ಸ್ ವಿನ್ನರ್

July 30, 2018

ಮೈಸೂರು: ಮೈಸೂರಿನ ರೈಲ್ವೆ ಮೈದಾನದಲ್ಲಿ ಜ್ಯೋತಿಷಿಗಳು ಹಾಗೂ ಪುರೋಹಿತರ ವತಿಯಿಂದ ನಡೆದ ರಾಜ್ಯಮಟ್ಟದ ‘ಶ್ರೀ ಮಾಯಕಾರ ಕಪ್’ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಭಾನು ವಾರ ಏರ್ಪಡಿಸಲಾಗಿತ್ತು.

ಎರಡು ದಿನಗಳು ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ವಿಜೇತ ಬೆಂಗಳೂರಿನ ಸಮರ್ಥ ಕ್ರಿಕೆಟರ್ಸ್ ತಂಡಕ್ಕೆ 10,001.ರೂ ನಗದು ಮತ್ತು ಟ್ರೋಫಿ ಹಾಗೂ ರನ್ನರ್‍ಅಪ್ ಮೈಸೂರಿನ ಪಾಠಶಾಲೆ ಸೀನಿಯರ್ಸ್ ತಂಡಕ್ಕೆ 5000.ರೂ ನಗದು ಮತ್ತು ಟ್ರೋಫಿಯನ್ನು ಶಾಸಕ ಎಸ್.ಎ. ರಾಮದಾಸ್ ವಿತರಿಸಿದರು. ನಂತರ ಮಾತನಾಡಿದ ಅವರು, ಕ್ರಿಕೆಟ್ ಕೆಲವೇ ದೇಶಗಳಲ್ಲಿ ಆಡುವ ಶ್ರೀಮಂತ ಆಟವಾಗಿದೆ. ಜ್ಯೋತಿಷಿಗಳು ಹಾಗೂ ಪುರೋಹಿತರು ರಾಜ್ಯಮಟ್ಟ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಿರುವುದು ಸಂತಸ ತಂದಿದೆ. ಕಾರಣ, ವೇದಗಳ ಅಧ್ಯಯನ ಮಾಡಿ ದೇವಾಲಯಗಳಲ್ಲಿ ಪೂಜೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿರದೆ ಮೈದಾನದಲ್ಲೂ ಆಟವಾಡುವುದರಲ್ಲಿ ನಾವೇನು ಕಮ್ಮಿ ಇಲ್ಲ ಎಂದು ಈ ಸಮುದಾಯ ತೋರಿಸಿದೆ.

ಆಟದಲ್ಲಿಯೇ ಆಗಲಿ ಅಥವಾ ಜೀವನ ದಲ್ಲಿಯೇ ಆಗಲಿ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ ಮಾತ್ರ ಜಯಶೀಲರಾಗಲು ಸಾಧ್ಯ. ನಾವು ರಾಜ ಕೀಯದಲ್ಲಿಯೂ ಕೂಡ ಐದು ವರ್ಷಕ್ಕೆ ಒಮ್ಮೆ ಆಟವಾಡುತ್ತೇವೆ. ನಮ್ಮ ಆಟದಲ್ಲಿ ಗೆದ್ದವರು ಸೋತವರನ್ನು ಮಾತನಾಡಿಸು ವುದಿಲ್ಲ. ಆದರೆ ಕ್ರಿಕೆಟ್ ಸೇರಿದಂತೆ ಇನ್ನಿತರ ಆಟಗಳಲ್ಲಿ ಸೋತವರನ್ನು ಅಭಿನಂದಿಸು ತ್ತಾರೆ. ಹಾಗೆಯೇ ಇಂದಿನ ಪಂದ್ಯಾವಳಿಯಲ್ಲಿ ವಿಜೇತ ಸಮರ್ಥ ಕ್ರಿಕೆಟರ್ಸ್ ಹಾಗೂ ರನ್ನರ್ ಅಪ್ ಮೈಸೂರಿನ ಪಾಠಶಾಲೆ ಸೀನಿ ಯರ್ಸ್ ತಂಡಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ನಿವೃತ್ತ ಪ್ರಾಧ್ಯಾಪಕ ಎಂ.ಮಲ್ಲಣ್ಣ, ಮಾಯಕಾರ ಗುರುಕುಲ ಸಂಸ್ಥಾಪಕ ಡಾ. ಮೂಗೂರು ಮಧುದೀಕ್ಷಿತ್, ರಿಷಬ್ ವೆಂಚರ್ಸ್ ಎಸ್.ಮಧು, ಭಾಸ್ಕರ್, ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »