ಮೈಸೂರಲ್ಲಿ ಟಿ.ಪಿ.ಕೈಲಾಸಂ ನೆನಪು ಕಾರ್ಯಕ್ರಮ
ಮೈಸೂರು

ಮೈಸೂರಲ್ಲಿ ಟಿ.ಪಿ.ಕೈಲಾಸಂ ನೆನಪು ಕಾರ್ಯಕ್ರಮ

July 30, 2018

ಮೈಸೂರು:  ನಗೆಕಾರ, ವಿಡಂಬನಕಾರ, ಪ್ರಚಂಡ ಪ್ರತಿಭಾವಂತ, ವಿಶೇಷ ಮಾತುಗಾರ, ಪ್ರಾಸಪ್ರಿಯ, ಅಪ ರೂಪದ ವ್ಯಕ್ತಿ ಹಾಗೆಯೇ ಸ್ವಲ್ಪ ಮುಂಗೋಪಿ ನಮ್ಮ ಕೈಲಾಸಂ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಹಾಗೂ ರಂಗ ಚಿಂತಕ ಡಾ. ಹೆಚ್.ಎ. ಪಾಶ್ರ್ವನಾಥ್ ಅಭಿಪ್ರಾಯಿಸಿದರು.

ನಗರದ ಅರಮನೆ ಉತ್ತರದ್ವಾರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕದಂಬ ರಂಗ ವೇದಿಕೆ ಸಂಯುಕ್ತಾ ಶ್ರಯದಲ್ಲಿ ನಡೆದ ರಂಗ ಸಂಜೆ ‘ಕನ್ನಡ ಪ್ರಹಸನ ಪಿತಾಮಹ ಟಿ.ಪಿ.ಕೈಲಾಸಂ’ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನರಂಜನೆಯ ಜೊತೆಯಲ್ಲಿ ಸಮಾಜದ ಒಳಿತಿಗಾಗಿ ನೀತಿಪಾಠದ ಬಗ್ಗೆ ಬರೆಯುತ್ತಿದ್ದರು ಎಂದರು.

ಟಿ.ಪಿ.ಕೈಲಾಸಂ ಅವರು, ಆಧುನಿಕ ಕನ್ನಡ ರಂಗಭೂಮಿ ಅಧ್ವರ್ಯಗಳಲ್ಲಿ ಒಬ್ಬರಾಗಿ ದ್ದರು. ಕನ್ನಡ ರಂಗಭೂಮಿಗೆ ಹೊಸ ತಿರುವು ಅರಿವುಗಳನ್ನು ನೀಡಿ, ಸಮಾಜದ ಓರೆ ಕೊರೆಗಳನ್ನು ತಮ್ಮ ವೈಚಾರಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ತಿದ್ದಲು ಯತ್ನಿಸಿ ದರು. ಅವರ ಪ್ರಮುಖ ಪೋಲಿಕಿಟ್ಟಿ, ಟೊಳ್ಳೊ ಗಟ್ಟಿ, ಅನುಕೂಲಕ್ಕೊಬ್ಬಣ್ಣ, ತಾಳಿ ಕಟ್ಟೋಕ್ಕೊಲೀನೆ, ಸೂಳೆ, ಬಹಿಷ್ಕಾರ ಮುಂತಾದ ಸಾಮಾಜಿಕ ನಾಟಕಗಳಿಂದ ಸಾಮಾಜಿಕ ವೈರುಧ್ಯಗಳನ್ನು ತಮ್ಮ ವಿಶ್ಲೇಷ ಣಾತ್ಮಕ ಶೈಲಿಯಲ್ಲಿ ಮುಂದಿಟ್ಟಿದ್ದರು. ಅವ ರದು ಮಿಶ್ರ ಭಾಷೆ, ಕಲಬೆರಿಕೆಯಾದರೂ ಕಸಪೊರಿಕೆಯಲ್ಲ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ. ರಾಜಣ್ಣ ಮಾತನಾಡಿ, ಕೈಲಾಸಂ ಅವರ ರಂಗಭೂಮಿ ಹಿನ್ನೆಲೆಯನ್ನು ಗಮನಿ ಸಿದರೆ ಸಿದ್ದಾರ್ಥ ಬುದ್ದನಾದಂತೆ ಶೀಮಂತ ಕುಟುಂಬದಲ್ಲಿ ಹುಟ್ಟಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಎಲ್ಲವನ್ನೂ ಬಿಟ್ಟು ವೈಯಕ್ತಿಕ ಉನ್ನತಿಗೆ ಬದಲು ಸಮಾಜದ ಉನ್ನತಿಗೆ ತನ್ನನ್ನು ತಾನು ತೊಡಗಿಸಿಕೊಂಡವರು.

ಕೈಲಾಸಂ ಅವರು, ರಂಗ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನುವ ಮಾತಿದೆ. ಅಂದರೆ ಅವರು ಕುಂತಲ್ಲೆ ಕಂಪನಿ ನಿಂತಲ್ಲೆ ನಾಟಕ ಎಂಬಂತೆ ನಾಟಕಗಳನ್ನು ಬರೆಯುತ್ತಿದ್ದರು ಎಂದರು.

ವೇದಿಕೆಯಲ್ಲಿ ಹಿರಿಯ ರಂಗ ತಜ್ಞ ಪ್ರೊ.ಎಸ್.ಆರ್.ರಮೇಶ್, ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಂ. ಚಂದ್ರ ಶೇಖರ್, ಕಾರ್ಯದರ್ಶಿ ಕೆ.ಎಸ್. ನಾಗರಾಜು, ಸಂಚಾಲಕ ಮೂಗೂರು ನಂಜುಂಡ ಸ್ವಾಮಿ, ಹೆಚ್.ಎಂ.ವಿಜಯ್‍ಕುಮಾರ್ ಹೊಡಾ ಘಟ್ಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »