ಅಪರೂಪದ ರೋಗದಿಂದ ನರಳುತ್ತಿರುವ ಬಾಲಕಿ ಚಿಕಿತ್ಸೆಗೆ ನೆರವಾದ ಶಾಸಕ ರಾಮದಾಸ್
ಮೈಸೂರು

ಅಪರೂಪದ ರೋಗದಿಂದ ನರಳುತ್ತಿರುವ ಬಾಲಕಿ ಚಿಕಿತ್ಸೆಗೆ ನೆರವಾದ ಶಾಸಕ ರಾಮದಾಸ್

June 21, 2020

ಮೈಸೂರು, ಜೂ. 20(ಆರ್‍ಕೆ)- ಬಲು ಅಪರೂಪದ Rheumatoid Arthrities ರೋಗದಿಂದ ಬಳಲುತ್ತಿರುವ ಬಾಲಕಿಗೆ ಮೈಸೂರಿನ ಬೃಂದಾವನ ಬಡಾವಣೆ ಯಲ್ಲಿರುವ ಸರ್ಕಾರಿ ಹೈಟೆಕ್ ಪಂಚ ಕರ್ಮ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಶಾಸಕ ಎಸ್.ಎ.ರಾಮ ದಾಸ್ ನೆರವಾಗಿದ್ದಾರೆ.

ಶನಿವಾರ ಬೆಳಗ್ಗೆ ತಾವೇ ಸ್ವತಃ ಆಸ್ಪತ್ರೆಗೆ ತೆರಳಿದ ರಾಮದಾಸ್, ಕಳೆದ 4 ತಿಂಗಳಿಂದ ಬಳಲುತ್ತಿರುವ ರುಮಟಾಯ್ಡ್ ಆಥ್ರ್ರೈಟೀಸ್ ರೋಗಿ ಯಾದ ಮೈಸೂರಿನ ಹೆಬ್ಬಾಳು ಬಡಾವಣೆ ಬಾಲಕಿಯ ರೋಗದ ಗುಣಲಕ್ಷಣಗಳು, ಯಾವುದರಿಂದ ಹೇಗೆ ಈ ರೋಗ ತಗುಲಿದೆ ಎಂಬುದರ ಬಗ್ಗೆ ವಿವರ ಪಡೆ ದರು. ಈ ಹಿಂದೆ ತಾವೂ ಸಹ ಇದೇ ರೋಗಕ್ಕೆ ತುತ್ತಾಗಿದ್ದಾಗ ಆಯುರ್ವೇದ ಚಿಕಿತ್ಸಾ ವಿಧಾನದಿಂದಲೇ ಗುಣವಾದ ಬಗ್ಗೆ ತಿಳಿಸಿದ ಅವರು, ಆಕೆಗೆ ಸಂಪೂರ್ಣ ಪರೀಕ್ಷೆ ಮಾಡಿ ರೋಗ ಯಾವುದೆಂದು ಸ್ಪಷ್ಟವಾಗಿ ಡಯಾಗ್ನೈಸ್ ಮಾಡಿ ನಂತರ ಚಿಕಿತ್ಸೆ ನೀಡಿ. ಆ ರೋಗದ ಬಗ್ಗೆ ಸಂಪೂರ್ಣವಾಗಿ ಸಂಶೋ ಧನೆ ನಡೆಸಿ ಈ ರೋಗ ಲಕ್ಷಣ ಇರುವವ ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕೆಂದು ರಾಮದಾಸ್ ವೈದ್ಯರಿಗೆ ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮಂಡಿ ಚಿಪ್ಪಿನ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಆ ರೋಗಕ್ಕೂ ಚಿಕಿತ್ಸೆ ನೀಡಿ ಗುಣಪಡಿಸಲು ಸಕಲ ಸಿದ್ಧತೆ ನಡೆಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದೇ ವೇಳೆ ಆಸ್ಪತ್ರೆ ಸಭಾಂಗಣದಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಪ್ರಾಂಶು ಪಾಲ ಡಾ.ಗಜಾನನ ಹೆಗ್ಡೆ, ಹಿರಿಯ ವೈದ್ಯಾ ಧಿಕಾರಿಗಳಾದ ಡಾ.ಸುಕೇಶ್, ಡಾ. ವಾಣಿಶ್ರೀ, ಡಾ.ಟಿ.ಕೆ.ದಿನೇಶ, ಡಾ.ಉಮಾ ಕೆ.ಕುಮಾರ್ ರೊಂದಿಗೆ ಸಭೆ ನಡೆಸಿ, ರುಮಟಾಯ್ಡ್ ಆಥ್ರ್ರೈಟೀಸ್‍ನಂತಹ ರೋಗ ಪತ್ತೆ ಮಾಡಿ ಪ್ರೋಟೊಕಾಲ್ ಪ್ರಕಾರ ಚಿಕಿತ್ಸೆ ನೀಡಲು ಸಂಶೋಧನೆ ಮಾಡುವ ಬಗ್ಗೆ ರಾಮ ದಾಸ್ ಅವರು ಚರ್ಚಿಸಿದರು.

Translate »