ನಾಮಫಲಕ ಅಳವಡಿಸುವ ಕಾರ್ಯಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ
ಮೈಸೂರು

ನಾಮಫಲಕ ಅಳವಡಿಸುವ ಕಾರ್ಯಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ

November 18, 2019

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ 51ನೇ ವಾರ್ಡ್ ವ್ಯಾಪ್ತಿಯ ಅಗ್ರಹಾರ ಪ್ರದೇಶದ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಕಾರ್ಯಕ್ಕೆ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಚಾಲನೆ ನೀಡಿದರು. ಕೃಷ್ಣರಾಜ ಕ್ಷೇತ್ರದಲ್ಲಿಯೇ ಅತ್ಯಂತ ದೊಡ್ಡ ವಾರ್ಡ್ ಅಗ್ರಹಾರ. ಮೈಸೂರಿನ ಹೃದಯ ಭಾಗವೂ ಹೌದು. ಆದರೆ ಯಾವ ರಸ್ತೆಗಳಿಗೂ ನಾಮಫಲಕಗಳಿರಲಿಲ್ಲವಾದ ಕಾರಣ ವಿಳಾಸ ಹುಡುಕಲು ಸಾರ್ವಜನಿಕರು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಗರಪಾಲಿಕೆ ವತಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ 51ನೇ ವಾರ್ಡ್ ಸದಸ್ಯ ಬಿ.ವಿ.ಮಂಜುನಾಥ್, ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಸಂತೋಷ್, ನಗರ ಯುವ ಮೋರ್ಚಾ ಕಾರ್ಯ ದರ್ಶಿ ಹೇಮಂತ್, ವಾರ್ಡ್ ಅಧ್ಯಕ್ಷ ಗುರುರಾಜ್ ಶೆಣೈ, ನಾರಾಯಣ್, ಚಂದ್ರು, ಯುವ ಮೋರ್ಚಾ ಅದ್ಯಕ್ಷ ಸುಭಾಷ್, ಆದರ್ಶ್, ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »