ಜಲಪುರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭ
ಮೈಸೂರು

ಜಲಪುರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭ

November 18, 2019

ಮೈಸೂರು: ಮೈಸೂರಿನ ಜಲಪುರಿಯಲ್ಲಿ ನಿರ್ಮಿ ಸಿರುವ ಶುದ್ಧ ಕುಡಿಯುವ ನೀರಿನ ಘಟಕ ಲೋಕಾ ರ್ಪಣೆಗೊಂಡಿತು. ಮೈಸೂರಿನ 39ನೇ ವಾರ್ಡ್ ವ್ಯಾಪ್ತಿ, ಗಾಯತ್ರಿಪುರಂ ಜಲಪುರಿಯಲ್ಲಿ ನಗರಪಾಲಿಕೆ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ತನ್ವೀರ್ ಸೇಠ್ ಉದ್ಘಾಟಿಸಬೇಕಿತ್ತು. ಆದರೆ ಅವರು ಪೊಲೀಸ್ ಕುಟುಂಬದ ಹೇಮಾವತಿ ಅವರಿಂದ ಉದ್ಘಾಟನೆ ಮಾಡಿಸಿ ದರು. ಈ ಮೂಲಕ ಪೊಲೀಸ್ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿತವಾದಂತಾಗಿದೆ.

ಈ ವೇಳೆ ಪಾಲಿಕೆ ಸದಸ್ಯ ಸತ್ಯರಾಜ್, ಮಾಜಿ ಸದಸ್ಯ ಎನ್.ಧ್ರುವರಾಜ್, ಸ್ಥಳೀಯ ನಿವಾಸಿಗಳು ಹಾಗೂ ನೀರಿನ ಘಟಕ ನಿರ್ವಹಣಾ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿ ದ್ದರು. ಎನ್.ಧ್ರುವರಾಜ್ ಪಾಲಿಕೆಯ ನಾಮನಿರ್ದೇಶನ ಸದಸ್ಯರಾಗಿದ್ದ ಸಂದರ್ಭದಲ್ಲಿ ಜಲಪುರಿ, ಕುರುಬಾರಹಳ್ಳಿ, ರಾಘವೇಂದ್ರನಗರ, ಬನ್ನಿಮಂಟಪ ಹುಡ್ಕೋ ಬಡಾ ವಣೆ, ಗಣೇಶನಗರ, ವಿಜಯನಗರ ಸೇರಿದಂತೆ ಬಡ ಹಾಗೂ ಮಧ್ಯಮ ವರ್ಗದ ಜನ ವಾಸಿಸುವ 6 ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ಅನು ದಾನ ಮಂಜೂರು ಮಾಡಿಸಿದ್ದರು. ಇದರಲ್ಲಿ ಸದ್ಯ ಜಲಪುರಿ ಘಟಕ ಉದ್ಘಾಟನೆಯಾಗಿದ್ದು, ಉಳಿದ ಘಟಕ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

Translate »