ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕಾಯನ್ ಬದಲು ಸ್ಮಾರ್ಟ್ ಕಾರ್ಡ್
ಮೈಸೂರು

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕಾಯನ್ ಬದಲು ಸ್ಮಾರ್ಟ್ ಕಾರ್ಡ್

June 7, 2019

ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕಗಳ ಪ್ರತಿ ಲೀಟರ್ ನೀರಿನ ದರ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವ ಜೊತೆಗೆ ಇನ್ನುಮುಂದೆ ಕಾಯನ್ ಹಾಕಿ ನೀರು ಪಡೆಯುವ ಪದ್ಧತಿಯನ್ನು ರದ್ದುಗೊಳಿಸಲು ಇಂದಿಲ್ಲಿ ಸೇರಿದ್ದ ಸಚಿವ ಸಂಪುಟ ನಿರ್ಧರಿಸಿದೆ.

ಸಭೆಯ ನಂತರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಗ್ರಾಹಕರಿಗೆ ಪ್ರತಿ ಲೀಟರ್ ನೀರು ಒದಗಿಸಲು 35 ಪೈಸೆ ವೆಚ್ಚ ಬೀಳುತ್ತದೆ. ಇದರಲ್ಲಿ ಮುಕ್ಕಾಲು ಭಾಗ ಹಣವನ್ನು ಗ್ರಾಹಕರು ಭರಿಸಲು ಉಳಿದ ಹತ್ತು ಪೈಸೆಯನ್ನು ಸರ್ಕಾರ ನೀಡಲು ತೀರ್ಮಾನಿಸಿದೆ.

ಗ್ರಾಮ ಪಂಚಾಯಿತಿಗಳು ಕುಡಿ ಯುವ ನೀರಿನ ಘಟಕಗಳ ನಿರ್ವ ಹಣೆ ಮಾಡುವಲ್ಲಿ ವಿಫಲವಾಗಿವೆ. ಇದರಿಂದ ಬಹುತೇಕ ಘಟಕಗಳು ಕೆಟ್ಟಿದ್ದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಯನ್ನು ಖಾಸಗಿ ಸಂಸ್ಥೆಗೆ ನೀಡುವ ತೀರ್ಮಾನ ಕೈಗೊಂಡಿರುವುದಲ್ಲದೆ, ಕಾಯನ್ ಪದ್ಧತಿಯನ್ನು ರದ್ದುಗೊಳಿಸಿ, ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗೊಳಿಸಲು ನಿರ್ಧ ರಿಸಲಾಗಿದೆ. ಕಾಯನ್ ಪದ್ಧತಿ ದುರುಪಯೋಗಗೊಂಡು ಕೆಲವರು ಕಬ್ಬಿಣ, ರಬ್ಬರ್ ತುಂಡು ಹಾಕಿ ನೀರು ಪಡೆಯುತ್ತಿದ್ದಾರೆ. ಇದರಿಂದ ಯಂತ್ರಗಳು ಕೆಟ್ಟು ಅಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಇನ್ನು ಮುಂದೆ ಗ್ರಾಹಕರು ಮೊದಲೇ ಹಣ ತುಂಬಿ ಸ್ಮಾರ್ಟ್ ಕಾರ್ಡ್ ಪಡೆದು, ತಮಗೆ ಬೇಕಾದಷ್ಟು ಕುಡಿಯುವ ನೀರನ್ನು ಈ ಯಂತ್ರಗಳಿಂದ ಪಡೆಯಬಹುದಾಗಿದೆ ಎಂದರು. ಬೆಂಗಳೂರು ನಗರದ ಕೊಳಚೆ ನೀರನ್ನು ಸಂಸ್ಕರಿಸಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆರೆ ತುಂಬುವ ಕೆಲಸ ಯಶಸ್ವಿಯಾಗಿದ್ದು, ಇದರಿಂದ ತುಂಬಿದ ಕೆರೆಯ ಭಾಗದಲ್ಲಿ ಅಂತರ್ಜಲ ವೃದ್ಧಿಸಿದೆ. ಅಂತರ್ಜಲ ವೃದ್ಧಿಸುವ ಒಂದೇ ಕಾರಣಕ್ಕಾಗಿ ಈ ಕೆರೆಗಳಿಗೆ ತುಂಬಿದ ನೀರನ್ನು ಕೆಳ ಭಾಗದ ಕೆರೆಗಳಿಗೆ 200ರಿಂದ 250 ಕೆರೆಗಳಿಗೆ ನೀರು ಹರಿಸಲು 455 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು.

Translate »