Tag: Drinking Water

ಜಲಪುರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭ
ಮೈಸೂರು

ಜಲಪುರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭ

November 18, 2019

ಮೈಸೂರು: ಮೈಸೂರಿನ ಜಲಪುರಿಯಲ್ಲಿ ನಿರ್ಮಿ ಸಿರುವ ಶುದ್ಧ ಕುಡಿಯುವ ನೀರಿನ ಘಟಕ ಲೋಕಾ ರ್ಪಣೆಗೊಂಡಿತು. ಮೈಸೂರಿನ 39ನೇ ವಾರ್ಡ್ ವ್ಯಾಪ್ತಿ, ಗಾಯತ್ರಿಪುರಂ ಜಲಪುರಿಯಲ್ಲಿ ನಗರಪಾಲಿಕೆ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ತನ್ವೀರ್ ಸೇಠ್ ಉದ್ಘಾಟಿಸಬೇಕಿತ್ತು. ಆದರೆ ಅವರು ಪೊಲೀಸ್ ಕುಟುಂಬದ ಹೇಮಾವತಿ ಅವರಿಂದ ಉದ್ಘಾಟನೆ ಮಾಡಿಸಿ ದರು. ಈ ಮೂಲಕ ಪೊಲೀಸ್ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿತವಾದಂತಾಗಿದೆ. ಈ ವೇಳೆ ಪಾಲಿಕೆ ಸದಸ್ಯ ಸತ್ಯರಾಜ್, ಮಾಜಿ ಸದಸ್ಯ…

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕಾಯನ್ ಬದಲು ಸ್ಮಾರ್ಟ್ ಕಾರ್ಡ್
ಮೈಸೂರು

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕಾಯನ್ ಬದಲು ಸ್ಮಾರ್ಟ್ ಕಾರ್ಡ್

June 7, 2019

ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕಗಳ ಪ್ರತಿ ಲೀಟರ್ ನೀರಿನ ದರ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವ ಜೊತೆಗೆ ಇನ್ನುಮುಂದೆ ಕಾಯನ್ ಹಾಕಿ ನೀರು ಪಡೆಯುವ ಪದ್ಧತಿಯನ್ನು ರದ್ದುಗೊಳಿಸಲು ಇಂದಿಲ್ಲಿ ಸೇರಿದ್ದ ಸಚಿವ ಸಂಪುಟ ನಿರ್ಧರಿಸಿದೆ. ಸಭೆಯ ನಂತರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಗ್ರಾಹಕರಿಗೆ ಪ್ರತಿ ಲೀಟರ್ ನೀರು ಒದಗಿಸಲು 35 ಪೈಸೆ ವೆಚ್ಚ ಬೀಳುತ್ತದೆ. ಇದರಲ್ಲಿ ಮುಕ್ಕಾಲು ಭಾಗ ಹಣವನ್ನು ಗ್ರಾಹಕರು ಭರಿಸಲು ಉಳಿದ…

ಜೂನ್‍ವರೆಗೂ ಮೈಸೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ
ಮೈಸೂರು

ಜೂನ್‍ವರೆಗೂ ಮೈಸೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ

May 1, 2019

ಬೆಂಗಳೂರು:  ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ, ಬೆಂಗಳೂರು, ಮೈಸೂರು ಸೇರಿ ದಂತೆ ಕೆಲವು ಪ್ರಮುಖ ನಗರ-ಪಟ್ಟಣಗಳಿಗೆ ಬರುವ ಜೂನ್‍ವರೆಗೂ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ 90 ಅಡಿಗಿಂತ ಹೆಚ್ಚು ನೀರು ಸಂಗ್ರಹವಿದ್ದು, ಬರುವ ಜೂನ್‍ವರೆಗೂ ಈ ನೀರನ್ನು ಕುಡಿಯಲು ಅಷ್ಟೇ ಬಳಕೆ ಮಾಡಲಾಗು ವುದು ಎಂದು ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ತಿಳಿಸಿದ್ದಾರೆ. ಕುಡಿಯುವ ನೀರಿಗೆ ಜನರು ಆತಂಕಪಡುವ ಅಗತ್ಯವಿಲ್ಲ. ಅದರಲ್ಲೂ ಈ ಭಾಗದಲ್ಲಿ ಎಂದಿನಂತೆ ಜಲಾಶಯದಿಂದ ಇನ್ನೂ ಎರಡು ತಿಂಗಳ…

ಮೈಸೂರಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ
ಮೈಸೂರು

ಮೈಸೂರಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ

April 30, 2019

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿ ದ್ದರೂ, ತೀವ್ರ ತೆರನಾದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆ ತಲೆದೋರಿದ್ದು, ಅದನ್ನು ಸಮರ್ಪಕವಾಗಿ ನಿಭಾ ಯಿಸುವಂತೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಜಿ. ಕಲ್ಪನಾ ತಿಳಿಸಿದ್ದಾರೆ. ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಸೂಚನೆಯಂತೆ ಸೋಮವಾರ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಪತ್ರಕರ್ತ ರೊಂದಿಗೆ…

ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಿ
ಹಾಸನ

ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಿ

December 19, 2018

ಅರಸೀಕೆರೆ:  ತಾಲೂಕು ಬರ ಗಾಲ ಪೀಡಿತ ಪ್ರದೇಶವಾಗಿರುವುದರಿಂದ ಬೇಸಿಗೆ ಮುಂಚೆಯೇ ಕುಡಿಯುವ ನೀರಿನ ಸಮಸ್ಯೆಯು ಎದುರಾಗದಂತೆ ಸಬಂಧಿಸಿದ ಅಧಿಕಾರಿಗಳು ಜಾಗೃತರಾಗಿ ರಬೇಕು. ನಿರ್ಲಕ್ಷ್ಯವಹಿಸಿದರೆ ಅಧಿಕಾರಿ ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡ ಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಎಚ್ಚರಿಸಿದರು. ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ತಾಲ್ಲೂಕಿನ 45 ಗ್ರಾಮ ಪಂಚಾಯಿತಿಗಳ ಪಿಡಿಓ, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಅಭಿವೃದ್ಧಿ ಗಳನ್ನು ಪರಿಶೀಲಿಸಿ ಮಾತನಾಡಿದÀರು. ನರೇಗ ಯೋಜನೆ ಸೇರಿದಂತೆ ಬರ…

ಕಲುಷಿತ ನೀರು ಪೂರೈಕೆ: ಪುರಸಭೆ ವಿರುದ್ಧ ಆಕ್ರೋಶ
ಹಾಸನ

ಕಲುಷಿತ ನೀರು ಪೂರೈಕೆ: ಪುರಸಭೆ ವಿರುದ್ಧ ಆಕ್ರೋಶ

July 24, 2018

ಬೇಲೂರು: ಪಟ್ಟಣದ ವಿವಿಧ ಬಡಾವಣೆಯ ಕೊಳಾಯಿಯಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಬರುತ್ತಿದ್ದು, ಆತಂಕಗೊಂಡ ನಿವಾಸಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಕೋಟೆ, ಕೆರೆ ಬೀದಿ, ಚನ್ನನಾಯಕ ಗಲ್ಲಿ, ಕೊಟ್ನಿಕೆರೆ ಬೀದಿಯ ಸಾರ್ವಜನಿಕ ಹಾಗೂ ಮನೆಗಳಲ್ಲಿ ಅಳವಡಿಸಿರುವ ಕೊಳಾಯಿ ಯಲ್ಲಿ ಕೆಂಪು ಮಿಶ್ರಿತ ಗಲೀಜು ನೀರು ಬರುತ್ತಿದೆ. ವಾರದಿಂದ ಎಲ್ಲಾ ನಿವಾಸಿಗಳು ಈ ನೀರನ್ನೇ ಕುಡಿಯುವಂತಾಗಿದ್ದು, ಮಾರಕ ರೋಗಗಳು ಬರಬಹುದೆಂಬ ಚಿಂತೆಯಲ್ಲಿದ್ದಾರೆ. ನಲ್ಲಿಗೆ ಬಟ್ಟೆ ಕಟ್ಟಿ ನೀರನ್ನು ಸೋಸಿ ಹಿಡಿದರೂ…

ನದಿ ಮೂಲದಿಂದಲೇ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ತೀರ್ಮಾನ
ಮೈಸೂರು

ನದಿ ಮೂಲದಿಂದಲೇ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ತೀರ್ಮಾನ

May 31, 2018

ಬೆಂಗಳೂರು: ರಾಜ್ಯದ ಎಲ್ಲಾ ಹಳ್ಳಿಗಳಿಗೆ ನದಿ ಪಾತ್ರದಿಂದ ನೀರು ಹರಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಕೃಷಿ ಸಾಲ ಮನ್ನಾ ಸಂಬಂಧ ರೈತರ ಅಭಿಪ್ರಾಯ ಸಭೆ ನಂತರ ಮಾತನಾಡಿದ ಅವರು, ಈ ಯೋಜನೆಗೆ 30 ರಿಂದ 40 ಸಾವಿರ ಕೋಟಿ ರೂ. ವೆಚ್ಚ ತಗುಲಲಿದೆ ಎಂದರು. ಈ ನಿರ್ಧಾರವನ್ನು ಏಕಾಏಕಿ ಪ್ರಕಟಿಸುತ್ತಿರುವುದಕ್ಕೆ ಪಕ್ಕದಲ್ಲೇ ಕುಳಿತಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಕ್ಷಮೆ ಯಾಚಿಸಿ, ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು…

Translate »