ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಿ
ಹಾಸನ

ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಿ

December 19, 2018

ಅರಸೀಕೆರೆ:  ತಾಲೂಕು ಬರ ಗಾಲ ಪೀಡಿತ ಪ್ರದೇಶವಾಗಿರುವುದರಿಂದ ಬೇಸಿಗೆ ಮುಂಚೆಯೇ ಕುಡಿಯುವ ನೀರಿನ ಸಮಸ್ಯೆಯು ಎದುರಾಗದಂತೆ ಸಬಂಧಿಸಿದ ಅಧಿಕಾರಿಗಳು ಜಾಗೃತರಾಗಿ ರಬೇಕು. ನಿರ್ಲಕ್ಷ್ಯವಹಿಸಿದರೆ ಅಧಿಕಾರಿ ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡ ಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಎಚ್ಚರಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ತಾಲ್ಲೂಕಿನ 45 ಗ್ರಾಮ ಪಂಚಾಯಿತಿಗಳ ಪಿಡಿಓ, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಅಭಿವೃದ್ಧಿ ಗಳನ್ನು ಪರಿಶೀಲಿಸಿ ಮಾತನಾಡಿದÀರು.
ನರೇಗ ಯೋಜನೆ ಸೇರಿದಂತೆ ಬರ ಪರಿಹಾರ ಶೌಚಾಲಯಗಳ ನಿರ್ಮಾಣ ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾ ಯತಿಯ ಪಿಡಿಓಗಳ ಜವಾಬ್ದಾರಿ ಅತ್ಯಂತ ಮಹತ್ವದಾಗಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸರ್ಕಾರಿ ಕಾರ್ಯಕ್ರಮ ಅನು ಷ್ಠಾನಗೊಳಿಸಿದರೆ ಪ್ರತಿಯೊಂದು ಗ್ರಾಮವು ಮಾದರಿ ಗ್ರಾಮವಾಗುವುದರಲ್ಲಿ ಸಂದೇಹ ವಿಲ್ಲ ಎಂದರು.

ಮೇವು ಬ್ಯಾಂಕ್ ತೆರೆಯಲು ಕ್ರಮ: ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತೆ ಮೇವು ಬ್ಯಾಂಕ್‍ಗಳನ್ನು ತೆರೆಯಲು ಕ್ರಮ ಕೈಗೊಳ್ಳುವ ಜೊತೆಗೆ ಹಾಸ್ಟೆಲ್ ಸಮಸ್ಯೆಗಳನ್ನು ಮುಖ್ಯವಾಗಿ ತೆಗೆದುಕೊಳ್ಳಲಾಗಿದೆ. ಹಲವು ಹಾಸ್ಟ್ಟೆಲ್ ಗಳಲ್ಲಿ ಸೊಳ್ಳೆ ಪರದೇ, ಸ್ವಚ್ಛತೆ ಬಗ್ಗೆ ಗಮನಹರಿಸದೇ ಇರುವ ಅಧಿಕಾರಿಗಳ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಸದಸ್ಯರಾದ ಪಟೇಲ್‍ಶಿವಪ್ಪ ಮತ್ತು ಮಾಡಾಳು ಸ್ವಾಮಿ ಮಾತನಾಡಿ, ಯುಗಚಿ ನದಿನ್ನು 2007-08ರಲ್ಲಿ ಕೈಗೆತ್ತಿ ಕೊಂಡಿದ್ದರು. ತಾಲೂಕಿನ 58 ಗ್ರಾಮ ಗಳಲ್ಲಿ 48ನ್ನು ಪ್ಲೋರೇಡ್ ಪೀಡಿತ ಪ್ರದೇಶ ವೆಂದು ಸೂಚಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಇಲ್ಲಿಯವರೆಗೆ ನೀರನ್ನು ಒದಗಿಸಲು ಕಾಮಗಾರಿಯೇ ಪೂರ್ಣ ಗೊಂಡಿಲ್ಲದ್ದೇ ತಾಲೂಕಿನ 30 ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿಲ್ಲ ಈ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು ಎಂದರು.

ಸಣ್ಣ ನೀರಾವರಿ ಇಲಾಖೆಯ ಇಂಜಿನಿ ಯರ್ ಆನಂದ್‍ಕುಮಾರ್ ಮಾತನಾಡಿ, ಕಾಮಗಾರಿಯು ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು 3.7 ಕೋಟಿ ರೂ. ಕಾಮಗಾರಿಯು ನಡೆಯುತ್ತಿದೆ. ಕೆಲವು ಭಾಗಗಳಲ್ಲಿ ನೀರು ಹರಿಯದೇ ಇರುವು ದರಿಂದ ಅಂತಹ ಪ್ರದೇಶಗಳಿಗೆ ನೀರಿನ ಸಂಗ್ರಹದ ತೊಟ್ಟಿ ನಿರ್ಮಾಣ ಮಾಡಿ ಅಲ್ಲಿಂದ ಬೇರೆಡೆಗೆ ನೀರನ್ನು ಹರಿಸಲು ಯೋಜನೆ ರೂಪಿಸಿದ್ದೇವೆ. ಅಲ್ಲದೇ ಈ ಯೋಜನೆಯಲ್ಲಿ 6 ಹಳ್ಳಿಗಳಿಗೆ ನೀರನ್ನು ಒದಗಿಸಲು ಸಾಧ್ಯವಾಗದೇ ಇರುವುದ ರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಒದಗಿಸಲು ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು.

250 ಕೋಟಿ ವೆಚ್ಚದಲ್ಲಿ 530 ಹಳ್ಳಿ ಗಳಿಗೆ ಹೇಮಾವತಿ ನದಿ ಮೂಲದಿಂದ ನೀರನ್ನು ಒದಗಿಸುವ ಯೋಜನೆಯೂ 2015 ರಲ್ಲಿ ಪ್ರಾರಂಭವಾಗಿ 2019ರಲ್ಲಿ ಪೂರ್ಣವಾಗಬೇಕಿದ್ದು, ಇದಕ್ಕಾಗಿ 12 ದೊಡ್ಡ ಟ್ಯಾಂಕ್‍ಗಳನ್ನು ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ ಗಂಡಸಿ ಸಮೀಪ ದಲ್ಲಿ ಜಾಕ್‍ವೆಲ್ ನಿರ್ಮಾಣ ಮಾಡಲಾ ಗಿದ್ದು ಕೆಲವೇ ತಿಂಗಳಲ್ಲಿ ಎಲ್ಲಾ ಗ್ರಾಮ ಗಳಿಗೆ ನೀರನ್ನು ಒದಗಿಸಲಾಗುವುದು ಎಂದರು.

ಐಎಂಎಸ್ ಕುಡಿಯುವ ನೀರಿನ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹ ಭಾಗಿತ್ವದಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆಗೆ ಕೊಳವೆ ಬಾವಿಗಳನ್ನು ತೆಗೆಸುವುದು, ಸೇರಿ ದಂತೆ ಯಂತ್ರೋಪಕರಣಗಳ ಖರೀ ದಿಗೆ ಅನುದಾನ ಪಡೆಯುವ ಅವಕಾಶ ಇದೆ. ಈ ಯೋಜನೆಯ ಸದುಪಯೋಗ ವನ್ನು ನೆರೆಹೊರೆಯ ತಾಲೂಕುಗಳು ಸಮರ್ಪಕ ವಾಗಿ ಬಳಸಿಕೊಂಡು ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು ಸಭೆಯಲ್ಲಿ ತಾಪಂ ಕಾರ್ಯನಿರ್ವ ಹಣಾಧಿಕಾರಿ ಕೃಷ್ಣಮೂರ್ತಿ, ಸೇರಿದಂತೆ ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳ ಪಿಡಿಓಗಳು ಪಾಲ್ಗೊಂಡಿದ್ದರು.

Translate »