ವರ್ಧಮಾನಸಾಗರ ಮಹಾರಾಜರ ಮಂಗಲ ವಿಹಾರ
ಹಾಸನ

ವರ್ಧಮಾನಸಾಗರ ಮಹಾರಾಜರ ಮಂಗಲ ವಿಹಾರ

December 19, 2018

ಶ್ರವಣಬೆಳಗೊಳ: ಫೆಬ್ರವರಿ ಯಲ್ಲಿ ಜರುಗಿದ ಮಹಾಮಸ್ತಕಾಭಿಷೇಕ ಮಹೋತ್ಸವದ ನಿಮಿತ್ತ 18 ತಿಂಗಳ ಹಿಂದೆ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಆಗ ಮಿಸಿ ಮಹೋತ್ಸವದ ನೇತೃತ್ವ ವಹಿಸಿದ್ದ ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾ ರಾಜರು ಹಾಗೂ ಸಂಘಸ್ಥ 47 ತ್ಯಾಗಿಗಳು ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಂಗಲ ವಿಹಾರ ಆರಂಭಿಸಿದರು.

ಅಹಿಂಸೆಯನ್ನೇ ಪರಮ ಧರ್ಮವೆಂದು ಆಚರಣೆಯಲ್ಲಿರಿಸಿಕೊಂಡು ಬಂದಿರುವ, ಆಚಾರ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಆಚಾರ್ಯಶ್ರೀಗಳು ಧಾರ್ಮಿಕ ಪ್ರಭಾವನೆ ಹಾಗೂ ಮೋಕ್ಷ ಸಾಧನೆಗಾಗಿ ಮುನಿದೀಕ್ಷೆ ಸ್ವೀಕರಿಸಿ ಸದಾ ಕಾಲವೂ ಜ್ಞಾನ, ಧ್ಯಾನ, ತಪಸ್ಸುಗಳನ್ನೇ ತಮ್ಮ ಪ್ರಮುಖ ಕ್ರಿಯೆಗಳನ್ನಾಗಿರಿಸಿ ಕೊಂಡಿರುವ ಇವರು ತಮ್ಮ ಬೃಹತ್ ಮುನಿ ಸಂಘದೊಂದಿಗೆ 2017 ರ ಜೂನ್ 4 ರಂದು ಮಧ್ಯಪ್ರದೇಶದ ಇಂದೋರಿನ ಸಮೀಪದ ಸಿದ್ಧಕ್ಷೇತ್ರ ಸಿದ್ಧವರಕೂಟ ದಿಂದ ಸುಮಾರು 1500 ಕಿ.ಮೀ. ಪಾದ ಯಾತ್ರೆ ಮೂಲಕ ಶ್ರೀಕ್ಷೇತ್ರ ಶ್ರವಣ ಬೆಳಗೊಳಕ್ಕೆ ಆಗಮಿಸಿದ್ದರು.

ಇವರು 2018 ರ ಫೆಬ್ರವರಿಯಲ್ಲಿ ಜರು ಗಿದ ಮಹಾಮಸ್ತಕಾಭಿಷೇಕ ಮಹೋತ್ಸವ ದಲ್ಲಿ ಪಾಲ್ಗೊಳ್ಳುವ ಮೂಲಕ ಸತತ ಮೂರನೇ ಬಾರಿಗೆ ಮಹಾಮಸ್ತಕಾಭಿಷೇಕ ಮಹೋ ತ್ಸವದ ಪಾವನ ಸಾನಿಧ್ಯ ವಹಿಸಿದ್ದರು. 1993ರ ಮಸ್ತಕಾಭಿಷೇಕದ ವೇಳೆ ಗುಜರಾತ್ ನಿಂದ ಪಾದಯಾತ್ರೆ ಮೂಲಕ ಹಾಗೂ 2006 ರ ಮಸ್ತಕಾಭಿಷೇಕ ಸಂದರ್ಭದಲ್ಲಿ ರಾಜಾಸ್ಥಾನದ ಲುಂಬರ್‍ನಿಂದ ಸುಮಾರು 2400 ಕಿ.ಮೀ. ಪಾದಯಾತ್ರೆ ಮೂಲಕ ಇಲ್ಲಿಗೆ ಆಗಮಿಸಿದ್ದರು.

ಈ ಬಾರಿಯ ಮಸ್ತಕಾಭಿಷೇಕ ಮಹೋ ತ್ಸವದ ನಿಮಿತ್ತ ಆಯೋಜನೆಗೊಂಡಿದ್ದ ಪಂಚಕಲ್ಯಾಣ ಮಹೋತ್ಸವ, ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕ ಮಹೋತ್ಸವ ಹಾಗೂ ಸಕಲ ಧಾರ್ಮಿಕ ವಿಧಿ-ವಿಧಾನ ಗಳ ನೇತೃತ್ವ ವಹಿಸಿದ್ದ ಇವರು ಎರಡು ಬಾರಿ ಶ್ರೀ ಕ್ಷೇತ್ರದಲ್ಲೇ ಚಾತುರ್ಮಾಸವನ್ನು ಆಚರಿಸಿ, ಪ್ರೇರಣಾದಾಯಕವಾದ ಪ್ರವ ಚನದಿಂದ ಧರ್ಮ ಪ್ರಭಾವನೆ ಮಾಡಿದ್ದರು.
ಈಗ 2019 ರ ಫೆಬ್ರವರಿ ತಿಂಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಶ್ರವಣಬೆಗೊಳದಿಂದ ಧರ್ಮ ಸ್ಥಳಕ್ಕೆ ಮಂಗಲ ವಿಹಾರ ಆರಂಭಿಸಿದರು.

Translate »