ಹಾಸನ: ವೈಕುಂಠ ಏಕಾದಶಿಯ ಅಂಗವಾಗಿ ನಗರದ ಮಹಾರಾಜ ಉದ್ಯಾನವನ ಬಳಿ ಇರುವ ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಭಕ್ತಾದಿ ಗಳಿಗಾಗಿ ಸ್ವರ್ಗದ ಬಾಗಿಲು ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಬೆಳಗಿನಿಂದಲೇ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವರ ದರ್ಶನಕ್ಕೆ ಸಾವಿರಾರು ಜನ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ನಿರ್ಮಿಸಲಾಗಿದ್ದ ಸ್ವರ್ಗದ ಬಾಗಿಲನ್ನು ದಾಟಲು ಭಕ್ತರು ಒಬ್ಬೊಬ್ಬರಾಗಿ ಒಳಗೆ ಪ್ರವೇಶ ಮಾಡಿ ಪುನೀತರಾದರು. ಈ ವೇಳೆ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಈ ವೇಳೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.