ಕಾಂಗ್ರೆಸ್-ಜೆಡಿಎಸ್ ಮೈತ್ರಿ  ಸರ್ಕಾರದಿಂದ ಕೊಡಗು ನಿರ್ಲಕ್ಷ್ಯ
ಕೊಡಗು

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಕೊಡಗು ನಿರ್ಲಕ್ಷ್ಯ

December 19, 2018

ಮಡಿಕೇರಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ರಾಜ್ಯ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು 6 ತಿಂಗಳು ಕಳೆದರೂ ಕೂಡ ಕೊಡಗು ಜಿಲ್ಲೆಗೆ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಪರಿಹಾರ ಕಾರ್ಯಕ್ಕಾಗಿ ಮಾತ್ರ ವಿವಿಧ ಇಲಾಖೆಗಳ ಮೂಲಕ 85 ಕೋಟಿ ರೂ. ಜಿಲ್ಲೆಗೆ ಬಿಡುಗಡೆಯಾಗಿದೆ. ಈ ನೆರವನ್ನು ಹೊರತುಪಡಿಸಿದರೆ ವಿಶೇಷ ಅನುದಾನ ಜಿಲ್ಲೆಗೆ ಬಂದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರು, ಬೆಳೆಗಾರರ ಅಲ್ಪಾವಧಿಯ ಸಾಲಮನ್ನಾ ಘೋಷಣೆ ರಾಜ್ಯಕ್ಕೆ ಸಂಬಂಧಿಸಿದಾಗಿದ್ದು, ಕೊಡಗು ಜಿಲ್ಲೆಯ 17,780 ಫಲಾನುಭವಿಗಳನ್ನು ವಿವಿಧ ಬ್ಯಾಂಕ್‍ಗಳು ಗುರುತಿಸಿದ್ದು, ಪರಿಶೀಲನೆ ಕಾರ್ಯ ಜಾರಿಯಲ್ಲಿದೆ. ರಾಜ್ಯ ಸರಕಾರ ನಿಯಮ, ಷರತ್ತುಗಳು, ಸಾಲ ಪಾವ ತಿಯ ಗಡುವುಗಳನ್ನು ಗಮನಿಸಿದರೆ ಜಿಲ್ಲೆಯ ಕೇವಲ ಶೇ.1ರಷ್ಟು ರೈತರು ಬೆಳೆಗಾರರಿಗೆ ಮಾತ್ರ ಲಾಭವಾಗಬಹು ದೆನ್ನುವ ಸಂಶಯವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್ ವ್ಯಕ್ತಪಡಿಸಿದ್ದಾರೆ.

4 ಬಾರಿ ಸಿ.ಎಂ ಭೇಟಿ: ಸಮ್ಮಿಶ್ರ ಸರಕಾರದ ಮುಖ್ಯ ಮಂತ್ರಿಯಾದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಒಟ್ಟು 4 ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಕುರಿತು ಅಧಿಕಾರಿ ಗಳೊಂದಿಗೆ ಸಭೆಯನ್ನು ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲೆಯ ಪುನರ್ ನಿರ್ಮಾಣಕ್ಕೆ ರಾಜ್ಯ ಸರಕಾರ ಬದ್ಧವಿದೆ, ಸಂತ್ರಸ್ತರೊಂದಿಗೆ ಸರಕಾವಿದೆ ಎಂದು ಅಭಯ ನೀಡಿದ್ದರು. ಡಿ.7 ರಂದು ಮಾದಾ ಪುರದ ಜಂಬೂರುವಿನಲ್ಲಿರುವ ತೋಟಗಾರಿಕೆ ಇಲಾಖೆ ಜಮೀನಿನ ಪಕ್ಕದಲ್ಲಿರುವ 50 ಎಕರೆ ಪ್ರದೇಶದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸುವ ಕಾಮಗಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುದ್ದಲಿ ಪೂಜೆ ಕೂಡ ನೆರವೇರಿಸಿದ್ದರು. ಆದರೆ ಮನೆ ನಿರ್ಮಾಣ ಕಾಮಗಾರಿ ಇನ್ನು ಆರಂಭವಾಗಿಲ್ಲ. ಜಿಲ್ಲಾ ಡಳಿತ ಗುರುತಿಸಿರುವ ಪ್ರದೇಶಗಳನ್ನು ಸಮತಟ್ಟು ಗೊಳಿಸುವ ಕೆಲಸ ಮಾತ್ರ ಪ್ರಗತಿಯಲ್ಲಿದೆ.

ಪ್ರಾಧಿಕಾರ ಘೋಷಣೆ: ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿದ ಕೊಡಗಿನ ಕೆಲವು ಗ್ರಾಮಗಳಲ್ಲಿ ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪುನರ್ ಕಲ್ಪಿಸಲು ಕೊಡಗು ಪುನರಾಭಿವೃದ್ದಿ ಪ್ರಾಧಿಕಾರ ರಚಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿ ಸಿದ್ದರು. ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಲಿದ್ದು, ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು ಮತ್ತು ಉಸ್ತುವಾರಿ ಸಚಿವರನ್ನು ಸದಸ್ಯರನ್ನಾಗಿ ನೇಮಿಸುವುದಾಗಿ ತಿಳಿಸಿದ್ದರು. ಆದರೆ ಈ ಪ್ರಾಧಿಕಾರ ರಚನೆ ಪ್ರಕ್ರಿಯೆ ನಿಧಾನಗತಿ ಹಿಡಿದಿದೆ ಎಂಬ ಆರೋಪಗಳು ಕೂಡ ಇದೆ.

ಕಾಮಗಾರಿ ಅಪೂರ್ಣ: ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿರ್ಮಾಣ ಕಾರ್ಯ ಆರಂಭವಾದ ಮಡಿಕೇರಿಯ ಹೈಟೆಕ್ ಮಾರುಕಟ್ಟೆ, ನೂತನ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಇಂದಿಗೂ ಮುಕ್ತಾಯ ಕಂಡಿಲ್ಲ. ಕಟ್ಟಡಗಳನ್ನು ಮರು ವಿನ್ಯಾಸಗೊಳಿಸಿ ಜನರ ಬಳಕೆಗೆ ಸೂಕ್ತವಾಗಿಸಲು ಮತ್ತಷ್ಟು ಅನುದಾನಗಳ ಅಗತ್ಯವಿದ್ದು, ನಗರಾಡಳಿತ ಈ ಕುರಿತು ಸರಕಾರದೊಂದಿಗೆ ಇಂದಿಗೂ ವ್ಯವಹರಿಸುತ್ತಿದೆ. ಮಾತ್ರವಲ್ಲದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ಸಂದರ್ಭ ಜನರಲ್ ತಿಮ್ಮಯ್ಯ ಅವರ ನಿವಾಸ ಸನ್ನಿಸೈಡ್ ಅನ್ನು ಸ್ಮಾರಕವಾಗಿಸುವ ಕಾರ್ಯಕ್ಕೆ ಚಾಲನೆ ನೀಡ ಲಾಗಿತ್ತು. ಬಜೆಟ್‍ನಲ್ಲಿ ಕೂಡ ಸ್ಮಾರಕಕ್ಕೆ ಅನುದಾನ ಘೋಷಿ ಸಲಾಗಿತ್ತು. ಆ ಬಳಿಕ ಯೋಜನೆ ಆಮೆಗತಿಯಲ್ಲಿ ಸಾಗಿ ತ್ತಲ್ಲದೆ, 2013ರಲ್ಲಿ ಮತ್ತೆ ಕಾಂಗ್ರೆಸ್ ಸರಕಾರ 5 ಕೋಟಿ ರೂ.ಗಳನ್ನು ಮ್ಯೂಸಿಯಂ ನಿರ್ಮಾಣ ಕಾರ್ಯಕ್ಕೆ ಮೀಸಲಿ ಟ್ಟಿತ್ತು. ಬಳಿಕ 1.48 ಕೋಟಿ ರೂ. ಹಣವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಬಿಡುಗಡೆಯಾಗಿದ್ದು, ಪ್ರಸ್ತುತ ಇಂದಿಗೂ ಕಾಮಗಾರಿ ನಡೆಯುತ್ತಿದೆ.

ಹಿಂದಿನ ಸರಕಾರಗಳ ಯೋಜನೆಯ ಕಾಮಗಾರಿಗಳೇ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನು]ಷ್ಠಾನವಾಗದಿರುವುದು ಕಂಡು ಬರುತ್ತಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಅವುಗಳು ಅನುಷ್ಠಾನ ವಾಗುವುದು ಯಾವಾಗ ಎಂಬ ಪ್ರಶ್ನೆಯ ಸಾರ್ವ ಜನಿಕ ವಲಯದಿಂದ ಕೇಳಿ ಬರುತ್ತಿದೆ.

Translate »