ಶ್ರದ್ಧಾಭಕ್ತಿಯಿಂದ ನಡೆದ ವೈಕುಂಠ ಏಕಾದಶಿ
ಕೊಡಗು

ಶ್ರದ್ಧಾಭಕ್ತಿಯಿಂದ ನಡೆದ ವೈಕುಂಠ ಏಕಾದಶಿ

December 19, 2018

ಕುಶಾಲನಗರ: ಇಲ್ಲಿನ ರಥ ಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ದೇವಾಲಯದ ಆವರಣದಲ್ಲಿ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವತಾ ಮೂರ್ತಿಗೆ ಬೆಳಿಗ್ಗೆಯಿಂದ ವಿವಿಧ ಬಗೆಯ ಅಭಿಷೇಕ ಪೂಜೆಗಳು ನೆರವೇರಿದವು. ನಂತರ ಹಲವು ಪುಷ್ಪಗಳಿಂದ ಅಮ್ಮನವರನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾ ಲಯದ ಸುತ್ತಲೂ ಏಳು ದ್ವಾರಗಳನ್ನು ನಿರ್ಮಿಸಿ ದೇವಾಲಯದ ಪ್ರವೇಶದ್ವಾರ ದಲ್ಲಿ ಸಿರಿದೇವಿ, ಭೂದೇವಿಯೊಂದಿಗೆ ಶ್ರೀ ವಿಷ್ಣು ದೇವರನ್ನು ಪ್ರತಿಷ್ಠಾಪಿಸಿ ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಂತರ ದಂಪತಿ ಸಹಿತ ಸಾರ್ವಜನಿಕರು ಭಕ್ತರು ವಿಷ್ಣು ದೇವರನ್ನು ನಮಿಸಿ ವೈಕುಂಠ ದ್ವಾರದ ಮೂಲಕ ದೇವಾ ಲಯದ ಒಳ ಪ್ರವೇಶಿಸಿದರು.

ಸ್ವರ್ಗದಲ್ಲಿ ಸ್ವರ್ಗದ ಬಾಗಿಲು ತೆರೆಯುವ ದಿನವೆಂದೇ ಪ್ರತೀತಿ ಇರುವ ಕಾರಣ ದೇವಾ ಲಯದಲ್ಲಿ ಸ್ವರ್ಗದ ಬಾಗಿಲನ್ನು ನಿರ್ಮಿಸಿ ಆ ಬಾಗಿಲ ಮೂಲಕ ಭಕ್ತರು ತಮ್ಮ ಇಷ್ಟಾ ರ್ಥಗಳನ್ನು ದೇವರಲ್ಲಿ ನಿವೇದಿಸಿಕೊಂಡು ಮುಂದೆ ಸಾಗಿದರು. ದೇವಾಲಯದ ಪೂಜಾ ಕಾರ್ಯಗಳು ಸುಬ್ಬರಾಮು ಮತ್ತು ಪ್ರಮೋದ್ ಅರ್ಚಕರ ನೇತೃತ್ವದಲ್ಲಿ ಜರುಗಿದವು. ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಬಿ.ಎಲ್. ಸತ್ಯ ನಾರಾಯಣ ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ಶೋಭಾ ಸತ್ಯ, ಪ್ರಮು ಖರಾದ ಬಿ.ಆರ್. ನಾಗೇಂದ್ರ ಪ್ರಸಾದ್, ವಿ.ಎನ್. ವಸಂತಕುಮಾರ್, ವಿ.ಪಿ.ನಾಗೇಶ್, ಬಿ.ಎಲ್.ಉದಯ ಕುಮಾರ್, ಆಶಾ ಅಶೋಕ್ ಕುಮಾರ್, ವಾಣಿ ಮಹೇಶ್,
ಕೆ.ಜೆ.ಚಿನ್ನಸ್ವಾಮಿ ಮೊದಲಾದವರು ಇದ್ದರು.

Translate »