ಜಿಲ್ಲಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ಉಪವಾಸ ವ್ರತಾಚರಣೆ, ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ
ಚಾಮರಾಜನಗರ

ಜಿಲ್ಲಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ಉಪವಾಸ ವ್ರತಾಚರಣೆ, ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ

December 19, 2018

ಚಾಮರಾಜನಗರ: ನಗರವೂ ಸೇರಿ ದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿವಿಧೆಡೆ ಮಂಗಳವಾರ ಶ್ರದ್ಧಾ ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು.

ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನ, ಆಂಜನೇಯಸ್ವಾಮಿ, ಗಣಪತಿ, ಕೊಳದ ಬೀದಿಯ ಕಾಡು ನಾರಾಯಣಸ್ವಾಮಿ ದೇವಸ್ಥಾನ, ಕೊಳದ ಗಣೇಶ, ಆದಿಶಕ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಹಬ್ಬದ ಅಂಗವಾಗಿ ಸಾರ್ವಜನಿ ಕರು ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಕೋರಿಕೊಂಡರು.

ಯಳಂದೂರು ವರದಿ (ಗುಂಬಳ್ಳಿ ಲೋಕೇಶ್): ವೈಕುಂಠ ಏಕಾದಶಿ ಧನುರ್ಮಾಸ ವಿಶೇಷವಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀಲಕ್ಷ್ಮಿ ಭೂವರಾಹ ಸ್ವಾಮಿಗೆ ಬೆಳ್ಳಿ ಕವಚ ಅಲಂಕರಿಸಿ ಭಗವಂತ ಪ್ರೀಯವಾದ ತುಳಸಿ ಮಾಲೆ ಮತ್ತು ವಿಳ್ಯೆದೆಲೆ ಸೇರಿದಂತೆ ವಿವಿಧ ರೀತಿಯ ಪುಷ್ಪ್ಪಗ ಳನ್ನು ಅಲಂಕರಿಸಿ ವಿಶೇಷ ಪೂಜೆ ನಡೆಸಲಾಯಿತು.

ಬೆಳಿಗ್ಗೆಯಿಂದಲ್ಲೆ ದೇವಾಲಯಕ್ಕೆ ಆಗಮಿಸಿದ ಭಕ್ತರು ಭಗವಂತನಿಗೆ ಪಂಚಾಮೃತ ಸೇರಿದಂತೆ ಹಾಲು, ಜೇನು, ತುಪ್ಪ, ಮೊಸರು, ಎಳನೀರು ಅಭಿಷೇಕ ಮಾಡಲಾಯಿತು. ನಂತರ ಸ್ವಾಮಿಗೆ ಬೆಳ್ಳಿ ಕವಚ ಧರಿಸಿ ಅಲಂಕಾರಿಸಲಾಯಿತ್ತು.
ಭಕ್ತರು ತಂದಿದ್ದ ತುಳಸಿ, ಚೆಂಡು ಮಲ್ಲಿಗೆ, ಸಂಪಿಗೆ, ಸೇವಂತಿಗೆ ಹೂವುಗಳಿಂದ ಅಂಕಾರ ಮಾಡಿದ ಬಳಿಕ ವಿವಿಧ ಮಂತ್ರ ಹಾಗೂ

ಸಹಸ್ರ ನಾಮ ಪಠಣೆ ಮಾಡಲಾಯಿತು. ಬಳಿಕ ಪೂಜೆ ನೈವೇದ್ಯ ಅರ್ಪಿಸಿ ಮಹಾ ಮಂಗಳಾರತಿ ಮಾಡಲಾಯಿತು.
ದೇವಾಲಯದ ಪಕ್ಕದಲ್ಲಿರುವ ಶ್ರೀಮಹಾಲಕ್ಷ್ಮಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವಾಲಯದ ಬಲಭಾಗದಲ್ಲಿರುವ ಶ್ರೀಚನ್ನ ಕೇಶವ ಸ್ವಾಮಿಗೆ ವಿವಿಧ ಅಭಿಷೇಕ ಮಾಡಿ ಹೂಗ ಳಿಂದ ಅಲಂಕಾರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವೈಕುಂಠ ಏಕಾದಶಿ ಅಂಗವಾಗಿ ಸೂರ್ಯ ದೇವ ಉತ್ತರಾಯಣದ ಕಡೆ ಚಲಿಸುವುದರಿಂದ ಮಕರ ಸಂಕ್ರಾಂತಿ ಹಬ್ಬದವರೆಗೂ ದೇವಾಲಯ ದಲ್ಲಿ ಧನುರ್ಮಾಸದ ವಿಶೇಷ ಪೂಜೆ ಇರುತ್ತದೆ ಹೆಚ್ಚಿನ ರೀತಿಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಲಯದ ಪ್ರಧಾನ ಅರ್ಚಕ ಮರುಳಿ ತಿಳಿಸಿದ್ದಾರೆ.

ಬಿಳಿಗಿರಿರಂಗ ಸ್ವಾಮಿಗೆ ವಿಶೇಷ ಪೂಜೆ: ತಾಲೂ ಕಿನ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ಶ್ರೀ ಬಿಳಿ ಗಿರಿ ರಂಗನಾಥಸ್ವಾಮಿ ಮತ್ತು ಆಲಮೇಲು ರಂಗ ನಾಯಕಿ ಅಮ್ಮನವರಿಗೆ ವೈಕುಂಠ ಏಕಾದಶಿ ವಿಶೇಷ ಪೂಜೆ ನಡೆಯಿತು.
ಮುಂಜಾನೆಯಿಂದಲ್ಲೇ ಕಾಶಿ ಗುರುಗಳ ಮಂಟ ಪದಲ್ಲಿ ಇರುವ ಶ್ರೀಬಿಳಿಗಿರಿರಂಗನಾಥಸ್ವಾಮಿ ಅವ ರಿಗೆ ವಿಶೇಷ ಪೂಜೆ ನೈವೇದ್ಯ ಅರ್ಪಿಸಲಾಯಿತು. ನಂತರ ತುಳಸಿ ಮಾಲೆಯಿಂದ ಅಲಂಕರಿಸಿ ಪೂಜಾ ಕಾರ್ಯವನ್ನು ದೇವಾಲಯದ ಪ್ರಧಾನ ಅರ್ಚಕ ರವಿ ಮತ್ತು ತಂಡದವರಿಂದ ನಡೆಸಲಾಯಿತು.

ಗುಂಡ್ಲುಪೇಟೆ ವರದಿ (ಸೋಮ್.ಜಿ): ವೈಕುಂಠ ಏಕಾದಶಿಯ ಅಂಗವಾಗಿ ಪಟ್ಟಣ ದಲ್ಲಿರುವ ಪುರಾತನ ಪ್ರಸಿದ್ಧ ಶ್ರೀ ವಿಜಯ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.
ಪಟ್ಟಣದ ಪುರಾತನ ವಿಜಯನಾರಾಯಣ ಸ್ವಾಮಿ ದೇವಸ್ಥಾನ, ತಾಲೂಕಿನ ತೆರಕಣಾಂಬಿಯ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನ, ಕೋದಂಡ ರಾಮ ದೇವಸ್ಥಾನ, ಹುಲುಗನಮುರಡಿಯ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಪಟ್ಟಣದ ವಿಜಯ ನಾರಾಯಣಸ್ವಾಮಿ ದೇವ ಸ್ಥಾನದಲ್ಲಿ ಸ್ವಾಮಿಯ ಮೂಲ ವಿಗ್ರಹಕ್ಕೆ ಬೆಳ್ಳಿಯ ಆಭರಣಗಳನ್ನು ತೊಡಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಯಿಂದ ಹೆಚ್ಚಿನ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮಹಿಳಾ ಭಕ್ತ ವೃಂದದಿಂದ ದೇವರ ನಾಮಸ್ಮರಣೆ ಯೊಂದಿಗೆ ಸ್ವರ್ಗದ ಬಾಗಿಲು ನಿರ್ಮಿಸಿ ಅದರ ಮೇಲೆ ಉತ್ಸವ ಮೂರ್ತಿ ಇಟ್ಟು ಪೂಜೆ ಸಲ್ಲಿಸಲಾಯಿತು. ಮುಂಜಾನೆಯಿಂದಲೂ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ದೇವಾಲಯಗಳಲ್ಲಿ ವಿತರಣೆಯಾಗದ ‘ಪ್ರಸಾದ’
ಚಾಮರಾಜನಗರ:  ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ನೀಡಿದ ‘ವಿಷ’ ಪ್ರಸಾದ ಸೇವನೆಯಿಂದ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ದೇವಾಲಯಗಳಲ್ಲಿ ವಿತರಿಸುತ್ತಿದ್ದ ‘ಪ್ರಸಾದ’ಕ್ಕೆ ಬ್ರೇಕ್ ಬಿದ್ದಿದೆ.

ಯಾವುದೇ ದೇವಾಲಯಗಳಲ್ಲಿ ಭಕ್ತರುಗಳಿಗೆ ಪ್ರಸಾದ ವಿತರಿಸುವ ಮುನ್ನ ಆರೋಗ್ಯ ಇಲಾಖೆಯ ದೃಢೀಕರಣ ಪಡೆಯಬೇಕು ಎಂದು ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಇಂದು ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜಾ ಕೈಕಂರ್ಯಗಳು ಮಾತ್ರ ನಡೆಯಿತ್ತು. ಯಾವುದೇ ರೀತಿಯ ಪ್ರಸಾದ ವಿತಣೆಯಾಗಲಿಲ್ಲ.
‘ಚಾಮರಾಜನಗರದ ಕೊಳದ ಬೀದಿಯಲ್ಲಿ ಇರುವ ಕಾಡಾ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷವೂ ವೈಕುಂಠ ಏಕದಶಿಯನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಅದರಂತೆ ಇಂದು ಸಹ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನಡೆದವು. ಆದರೆ, ಪೂಜೆಯ ನಂತರ ಪ್ರತಿವರ್ಷ ಭಕ್ತರಿಗೆ ಹುಳಿ ಅವಲಕ್ಕಿ ಪ್ರಸಾದವನ್ನು ವಿತರಿಸಲಾಗುತ್ತಿತ್ತು. ಆದರೆ, ಈ ಬಾರಿ ಯಾವುದೇ ರೀತಿಯ ಪ್ರಸಾದ ವಿತರಿಸಿಲ್ಲ’ ಎಂದು ಭಕ್ತರೊಬ್ಬರು ತಿಳಿಸಿದರು.

 

Translate »