ಪ್ರಸಾದ ಸೇವನೆ ಪ್ರಕರಣ: ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಪರಿಹಾರ ವಿತರಣೆ
ಮೈಸೂರು

ಪ್ರಸಾದ ಸೇವನೆ ಪ್ರಕರಣ: ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಪರಿಹಾರ ವಿತರಣೆ

December 19, 2018

ಚಾಮರಾಜನಗರ: ಹನೂರು ತಾಲೂಕಿನ ಸುಳವಾಡಿಯ ಕಿಚ್‍ಗುತ್ ಮಾರ ಮ್ಮನ ದೇವಾಲಯದ ಪ್ರಸಾದ ಸೇವನೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದ ಪರಿಹಾರ ಹಣವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಶಾಸಕ ಆರ್.ನರೇಂದ್ರ ಅವರು ಮಂಗಳವಾರ ವಿತರಿಸಿದರು.

ಸುಳವಾಡಿ, ಕೋಟೆಪೊದೆ, ಬಿದರಹಳ್ಳಿ, ವಡ್ಡರದೊಡ್ಡಿ, ಎಂ.ಜಿ.ದೊಡ್ಡಿ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಮೃತರ ಕುಟುಂಬ ಸ್ಥರಿಗೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ಅಕ್ಕಿ, ಬೆಳೆ, ಸಕ್ಕರೆ, ಎಣ್ಣೆ, ಇನ್ನಿತರ ಪಡಿತರ ಪದಾರ್ಥಗಳನ್ನು ವಿತರಿಸಿ, ವೈಯಕ್ತಕವಾಗಿ ತಲಾ 50 ಸಾವಿರ ನೀಡಿದರು. ಮೊದಲು ಸುಳವಾಡಿ ಗ್ರಾಮಕ್ಕೆ ತೆರಳಿ ಸಚಿವ ಪುಟ್ಟರಂಗಶೆಟ್ಟಿ ಹಾಗೂ ಶಾಸಕ ನರೇಂದ್ರ ಅವರು, ಪ್ರಕರಣದಲ್ಲಿ ಮೃತಪಟ್ಟ ಬಾಲಕಿ ಲಕ್ಷ್ಮೀ ಕುಟುಂಬದ ವರಿಗೆ, ಕೋಟೆಪೊದೆ ಗ್ರಾಮದಲ್ಲಿ ಮೈಲಿ ಬಾಯಿ ಕುಟುಂಬದವರಿಗೆ ಹಾಗೂ ಗೋಡೆಸ್ಟ್ ನಗರ, ಬಿದರಹಳ್ಳಿ ಗ್ರಾಮದಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರ ವಿತರಿಸಿದರು.

ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕುಟುಂಬದಲ್ಲಿ ವ್ಯಾಸಂಗ ಮಾಡುತ್ತಿರುವವ ರಿಗೆ ಎಲ್ಲಾ ಬಗೆಯ ಶೈಕ್ಷಣಿಕ ನೆರವು ನೀಡಲಾ ಗುವುದು. ಯಾವುದೇ ಕಾರಣಕ್ಕೂ ವಿದ್ಯಾ ಭ್ಯಾಸ ಮೊಟಕುಗೊಳಿಸಬಾರದು. ಹಾಸ್ಟೆಲ್ ಸೇರಿದಂತೆ ಯಾವುದೇ ಸಹಾಯ ಮಾಡಲು ಸಿದ್ಧರಿದ್ದೇವೆ. ಮಕ್ಕಳ ಓದು ನಿಲ್ಲಬಾರದು ಎಂದು ಧೈರ್ಯ ತುಂಬಿದರು.

ಪ್ರಸಾದ ಸೇವನೆ ಪ್ರಕರಣ ದುರದೃಷ್ಠಕರವಾ ದದ್ದು, ಇಂತಹ ಘಟನೆ ನಡೆಯಬಾರ ದಿತ್ತು. ಪ್ರಕರಣ ಕುರಿತು ತನಿಖೆ ನಡೆಯು ತ್ತಿದ್ದು, ಶೀಘ್ರದಲ್ಲೇ ವರದಿ ಬರುವ ನಿರೀಕ್ಷೆ ಯಿದೆ. ಎಲ್ಲವೂ ತಿಳಿಯಲಿದೆ ಎಂದರು.

ಪರಿಹಾರ ಹಣ ಹೆಚ್ಚಳ, ಸಂತ್ರಸ್ತರಿಗೆ ಇನ್ನೂ ಯಾವ ಬಗೆಯ ಸಹಾಯ ನೀಡಿ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದೇವೆ. ನೊಂದ ಕುಟುಂಬಗಳಿಗೆ ಯಾವುದೇ ತೊಂದರೆಯಾಗದೇ ನೋಡಿ ಕೊಳ್ಳಬೇಕಿದೆ. ಸಂತ್ರಸ್ತರ ನೆರವಿಗೆ ಸ್ಪಂದಿಸ ಲಿದ್ದೇವೆ ಎಂದು ತಿಳಿಸಿದರು.

ಶಾಸಕರಾದ ಆರ್.ನರೇಂದ್ರ ಮಾತನಾಡಿ, ಪ್ರಕರಣದಲ್ಲಿ ಸಂತ್ರಸ್ತರಾದ ಕುಟುಂಬಕ್ಕೆ ಪರಿಹಾರ ಹಣವನ್ನು ಹೆಚ್ಚಳ ಮಾಡಬೇ ಕೆಂದು ಸದನದಲ್ಲಿಯೂ ಪ್ರಸ್ತಾಪಿಸಿದ್ದೇನೆ. ಸಂಸದ ಆರ್. ಧ್ರುವನಾರಾಯಣ ಅವರು ಸಂಸತ್ತಿನಲ್ಲಿ ಘಟನೆ ಕುರಿತು ಪ್ರಸ್ತಾಪಿಸಿದ್ದು, ಪರಿಹಾರ ನೀಡಬೇಕೆಂಬ ವಿಷಯ ಮುಂದಿ ಟ್ಟಿದ್ದಾರೆ. ಘಟನೆಯಲ್ಲಿ ನೊಂದವರಿಗೆ ಎಲ್ಲ ರೀತಿಯ ಸಹಾಯ ಮಾಡಲು ಮುಂದಾ ಗಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಗದಮಣಿ, ಸದಸ್ಯೆ ಲೇಖ, ಉಪವಿಭಾ ಗಾಧಿಕಾರಿ ಬಿ.ಫೌಜಿಯಾ ತರನ್ನಮ್, ತಹಶೀ ಲ್ದಾರ್ ರಾಯಪ್ಪ ಹುಣಸಗಿ ಇದ್ದರು.

Translate »