ಜಮೀನಿನ ತಂತಿ ಬೇಲಿಗೆ ವಿದ್ಯುತ್ ಹರಿಸದಂತೆ ಸೂಚನೆ
ಚಾಮರಾಜನಗರ

ಜಮೀನಿನ ತಂತಿ ಬೇಲಿಗೆ ವಿದ್ಯುತ್ ಹರಿಸದಂತೆ ಸೂಚನೆ

December 19, 2018

ಗುಂಡ್ಲುಪೇಟೆ: ಕಾಡಂಚಿನ ಗ್ರಾಮಸ್ಥರು ಯಾವುದೇ ಕಾರ ಣಕ್ಕೂ ತಮ್ಮ ಜಮೀನಿನ ತಂತಿ ಬೇಲಿಗಳಿಗೆ ವಿದ್ಯುತ್ ಹರಿಸಬಾರದು ಎಂದು ಸೆಸ್ಕ್ ಜಾಗೃತ ದಳದ ಎಸ್‍ಪಿ ರಶ್ಮಿ ಸೂಚಿಸಿದರು.ತಾಲೂಕಿನ ಕಾಡಂಚಿನ ಬಾಚಹಳ್ಳಿ ಗ್ರಾಮ ದಲ್ಲಿ ಸೆಸ್ಕ್ ಜಾಗೃತ ದಳದಿಂದ ಸಾರ್ವಜ ನಿಕರಿಗೆ ವಿದ್ಯುತ್ ದುರ್ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಕಾಡಂಚಿನ ಗ್ರಾಮಗಳ ರೈತರು ವನ್ಯ ಜೀವಿಗಳ ಹಾವಳಿಯಿಂದ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡುವುದರಿಂದ ವನ್ಯ ಜೀವಿಗಳು ಹಾಗೂ ಜನರು ಸಾವಿಗೀಡಾಗು ತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೆÇಲೀಸ್ ಹಾಗೂ ಸೆಸ್ಕ್ ಪ್ರಕರಣ ದಾಖಲಿಸಬೇಕಾಗು ತ್ತಿದೆ. ಇನ್ನು ಮುಂದೆ ವಿದ್ಯುತ್ ಕಳ್ಳತನ ಹಾಗೂ ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊ ಳ್ಳುವ ಬಗ್ಗೆ ಮಾಹಿತಿ ಬಂದರೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ. ಆದ್ದ ರಿಂದ ಯಾರೂ ಅಕ್ರಮಗಳಲ್ಲಿ ತೊಡಗಬಾ ರದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯವರು ಆನೆಗಳು ದಾಳಿ ನಡೆ ಸಿದಾಗ ರೈತರ ನೆರವಿಗೂ ಬರುವುದಿಲ್ಲ. ಅಲ್ಲದೆ ಬೆಳೆ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ದರು. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಗಮನಕ್ಕೆ ತರುವುದಾಗಿ ಅಧಿಕಾರಿಗಳು ಮನವರಿಕೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಕೆ.ಬೊಮ್ಮಯ್ಯ, ಸೆಸ್ಕ್ ಕಾರ್ಯ ಪಾಲಕ ಇಂಜಿನಿಯರ್ ಸಿದ್ದಲಿಂಗಪ್ಪ, ಲೋಕೇಶ್, ಜಾಗೃತ ದಳದ ಡಿವೈಎಸ್‍ಪಿ ಸುರೇಶ್ ಬಾಬು, ಪೆÇಲೀಸ್ ಇನ್‍ಸ್ಪೆÉಕ್ಟರ್ ಮಹದೇವಯ್ಯ, ಸಿಬ್ಬಂದಿ ವಾಗೀಶ್, ಮಾದೇಶ್ ಕುಮಾರ್, ರಜನಿಕಾಂತ್, ಬಾಚಹಳ್ಳಿ ಗ್ರಾಪಂ ಅಧ್ಯಕ್ಷ ಮುದ್ದಪ್ಪ, ಮುಖಂಡ ಅಭಿಷೇಕ್ ಗುಡಿಮನೆ ಸೇರಿ ದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Translate »