ಬೆಳೆ ಸಾಲ ಮನ್ನಾ: ರೈತರು ಹೆಸರು ನೋಂದಾಯಿಸಿಕೊಳ್ಳಲು ಡಿಸಿ ಮನವಿ
ಚಾಮರಾಜನಗರ

ಬೆಳೆ ಸಾಲ ಮನ್ನಾ: ರೈತರು ಹೆಸರು ನೋಂದಾಯಿಸಿಕೊಳ್ಳಲು ಡಿಸಿ ಮನವಿ

December 19, 2018

ಚಾಮರಾಜನಗರ: ರಾಜ್ಯ ಸರ್ಕಾ ರವು ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಮಾಡಿರುವ ರೈತರಿಗೆ ಸಾಲ ಮನ್ನಾ ಮಾಡÀಲು ತಂತ್ರಾಂಶವೊಂದನ್ನು ಜಾರಿಗೆ ತಂದಿದ್ದು, ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ಸಾಲ ಪಡೆದ ವಾಣಿಜ್ಯ ಬ್ಯಾಂಕ್‍ಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ ಮಾಡಿದ್ದಾರೆ.
2009ರ ಏಪ್ರಿಲ್ 1 ರಿಂದ 2017ರ ಡಿಸೆಂ ಬರ್ 31ರವರೆಗೆ ಬಾಕಿ ಇರುವ ಬೆಳೆ ಸಾಲ (sಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್‍ಪಿಎ (ನಾನ್ ಪರ್ಫಾಮಿಂಗ್ ಅಸೆಟ್ ಸಾಲಗಳು) ಪಡೆದಿರುವ ರೈತರು ಸಾಲ ಮನ್ನಾ ಯೋಜನೆಗೆ ಅರ್ಹರಾಗಿದ್ದಾರೆ. ಯೋಜನೆಯಡಿ ಒಂದು ರೈತ ಕುಟುಂ ಬವು (ಗಂಡ+ಹೆಂಡತಿ+ಅವಲಂಬಿತ ಮಕ್ಕಳು) ಗರಿಷ್ಠ 2 ಲಕ್ಷ ರೂ.ವರೆಗೆ ಮಾತ್ರ ಬೆಳೆ ಸಾಲ ಮನ್ನಾ ಸೌಲಭ್ಯ ಪಡೆ ಯಲು ಅವಕಾಶವಿದೆ.

ಜಿಲ್ಲೆಯ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಪಡೆದ ರೈತರ ಸಂಖ್ಯೆ 22,978 ಆಗಿದ್ದು ಈ ಪೈಕಿ 19,325 ರೈತರ ಬೆಳೆ ಸಾಲ ಮನ್ನಾ ಕುರಿತು ಪರಿಶೀಲಿಸಲಾ ಗಿದೆ. ಜಿಲ್ಲಾ ವ್ಯಾಪ್ತಿಯ ವಾಣಿಜ್ಯ ಬ್ಯಾಂಕಿನ ಶಾಖೆಗಳಲ್ಲಿ ಪ್ರತಿದಿನ ಕನಿಷ್ಟ 40 ರೈತರು ಹೆಸರÀು ನೋಂದಾಯಿಸಿಕೊಳ್ಳಲು ಅವ ಕಾಶ ಕಲ್ಪಿಸಲಾಗಿದೆ. ಪ್ರತಿ ರೈತರಿಗೆ ಕ್ರಮ ಬದ್ಧವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿದ ಟೋಕನ್‍ಗಳನ್ನು ನೀಡ ಲಾಗುವುದು. ನಿಗದಿಪಡಿಸಿದ ದಿನಾಂಕಗ ಳಂದು ರೈತರು ಬ್ಯಾಂಕ್ ಶಾಖೆಗೆ ತೆರಳಿ ಸ್ವಯಂ ದೃಢೀಕರಣ ಪತ್ರದೊಂದಿಗೆ, ಆಧಾರ್ ಕಾರ್ಡ್, ಪಡಿತರ ಚೀಟಿ (ದಿನಾಂಕ 5.7. 2018ಕ್ಕಿಂತ ಮುಂಚಿತವಾಗಿ ಪಡೆದ ಪಡಿ ತರ ಚೀಟಿ) ನಕಲು, ಪಹಣಿ ಪತ್ರದೊಂದಿಗೆ ಬೆಳೆ ಸಾಲ ಮನ್ನಾ ತಂತ್ರಾಂಶದಲ್ಲಿ ನೋಂದಾ ಯಿಸಿಕೊಳ್ಳಬೇಕು.

ಯಾವ ರೈತರು ವಾರ್ಷಿಕ ಆದಾಯ ತೆರಿಗೆ ಪಾವತಿದಾರರರೋ ಮತ್ತು ರಾಜ್ಯ, ಕೇಂದ್ರ ಸರ್ಕಾರಿ, ಅರೆ ಸರ್ಕಾರಿ, ಸರ್ಕಾರ ದಿಂದ ಅನುದಾನ ಪಡೆಯುವ ಸಂಸ್ಥೆ ಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು 15,000 ರೂ.ಗಳಿಗಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್‍ನ ಬೆಳೆಸಾಲ ಮನ್ನಾ ಯೋಜ ನೆಗೆ ಅರ್ಹರಿರುವುದಿಲ್ಲ.

ಅರ್ಹ ರೈತರು ಬೆಳೆ ಸಾಲ ಮನ್ನಾ ಯೋಜ ನೆಯಡಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ಹೆಸರು ನೊಂದಾಯಿಸಿಕೊಳ್ಳಲು 2019ರ ಜನವರಿ 10ರವರೆಗೆ ಕಾಲಾವಕಾಶ ನೀಡಲಾಗಿದೆ. ರೈತರು ಯಾವುದೇ ಗೊಂದಲಗಳಿಗೆ ಒಳಗಾ ಗದೇ ಶಾಂತ ರೀತಿಯಿಂದ ಬ್ಯಾಂಕ್ ಅಧಿಕಾರಿ ಗಳೊಂದಿಗೆ ಸಹಕರಿಸಿ ಬೆಳೆ ಸಾಲ ಮನ್ನಾ ಯೋಜನೆಯ ಲಾಭ ಪಡೆದುಕೊಳ್ಳಬೇಕು.
ಬೆಳೆ ಸಾಲ ಮನ್ನಾ ಯೋಜನೆಗೆ ಸಂಬಂ ಧಿಸಿದಂತೆ ಜಿಲ್ಲಾ ಮಾಹಿತಿ ಕೇಂದ್ರವನ್ನು ನಗರದ ಜಿಲ್ಲಾಡಳಿತ ಭವನದ ಮೊದ ಲನೇ ಮಹಡಿಯ ಕೊಠಡಿ ಸಂಖ್ಯೆ 104 ರಲ್ಲಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 08226-223160 ಸಂಪರ್ಕಿಸಿಯೂ ಸಹ ವಿವರ ಪಡೆಯಬಹುದಾಗಿದೆ.

ಬೆಳೆ ಸಾಲ ಮನ್ನಾ ಯೋಜನೆಗೆ ಸಂಬಂ ಧಿಸಿದಂತೆ ಯಾವುದೇ ಗೊಂದಲ ಸಂದೇಹ ಗಳಿದ್ದಲ್ಲಿ ಪರಿಹಾರಕ್ಕಾಗಿ ಹಾಗೂ ಸಲ ಹೆಗಳನ್ನು ಪಡೆಯಲು ಆಯಾ ತಾಲೂ ಕಿಗೆÀ ಅಧಿಕಾರಿ, ಸಿಬ್ಬಂದಿಯನ್ನು ನಿಯೋ ಜಿಸಲಾಗಿದೆ. ದಿಲೀಪ್, ಚಾಮರಾಜನಗರÀ (ಮೊ. 9535803412), ರಾಜೇಂದ್ರ, ಕೊಳ್ಳೇ ಗಾಲ (ಮೊ. 9901885361), ಕಾರ್ತಿಕ್, ಹನೂರು (ಮೊ. 9743299941), ವಾಸು ದೇವ, ಗುಂಡ್ಲುಪೇಟೆ (ಮೊ. 97425 93734), ಶರತ್, ಯಳಂದೂರು (ಮೊ. 7829596655) ಅವರನ್ನು ಸಂಪರ್ಕಿಸಿ ಬೆಳೆ ಸಾಲ ಮನ್ನಾ ಮಾಹಿತಿ, ಸಲಹೆ ಹಾಗೂ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಕೋರಿದ್ದಾರೆ.

Translate »