ಸಾಲಮನ್ನಾ: ರೈತರ ದಾಖಲೆ ಸಂಗ್ರಹಿಸಲು ಸೂಚನೆ
ಹಾಸನ

ಸಾಲಮನ್ನಾ: ರೈತರ ದಾಖಲೆ ಸಂಗ್ರಹಿಸಲು ಸೂಚನೆ

December 19, 2018

ಹಾಸನ:  ರೈತರ ಸಾಲ ಮನ್ನಾ ಸಂಬಂಧಿಸಿದಂತೆ ಮುಂದಿನ 10 ದಿನ ದೊಳಗಾಗಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರ ದಾಖಲೆ ಸಂಗ್ರಹಿಸಿ ನಿಗದಿತ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ. ಹಾಗಾಗಿ, ಅಧಿಕಾರಿಗಳು ನಿಗದಿತ ಸಮಯದಲ್ಲಿ ರೈತರ ದಾಖಲೆ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ತಹಶೀಲ್ದಾರರು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು, ಸಾಲ ಮನ್ನಾ ಯೋಜನೆ ಜಾರಿಯಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಲ್ಲೆಲ್ಲಿ 100ಕ್ಕಿಂತ ಕಡಿಮೆ ಖಾತೆಗಳಿವೆ. ಅಬುಗಳನ್ನು 2 ದಿನಗಳಲ್ಲಿ ಪೂರ್ಣಗೊಳಿಸಬೇಕು. 1,000 ಮತ್ತು ಅದಕ್ಕೂ ಹೆಚ್ಚಿನ ಖಾತೆಗಳಿರುವ ಕಡೆಗಳಲ್ಲಿ ಇತರ ಕಡೆಗಳಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಎಲ್ಲಾ ಬ್ಯಾಂಕ್ ಶಾಖೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿ ಮೇಲ್ವಿಚಾರಣೆ ನಡೆಸಬೇಕು. ಯಾವುದೇ ಬ್ಯಾಂಕ್‍ಗಳಲ್ಲಿ ವಿನಾಕಾರಣ ನೆಪ ಹೇಳಿ ಸಾಲಮನ್ನಾ ದಾಖಲೆಗಳ ಸಂಗ್ರಹವನ್ನು ವಿಳಂಬ ಮಾಡು ವಂತಿಲ್ಲ. ಹಾಗೇನಾದರೂ ಆದರೆ, ಮುಖ್ಯ ಮಹಾ ಪ್ರಬಂಧಕರಿಗೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮುಂದು ವರೆದಿದೆ. ಅರಸೀಕೆರೆ, ಚನ್ನರಾಯಪ್ಟಣ ಮತ್ತು ಬೇಲೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿ ಸಲಾಗಿದೆ. ಹಾಗಾಗಿ, ಈ ತಾಲೂಕು ಗಳಲ್ಲಿ ಬರ ಪರಿಹಾರ ಕ್ರಮಗಳ ವಿಸ್ತೃತ ಕ್ರಿಯಾ ಯೋಜನಾ ವರದಿ ಶೀಘ್ರವಾಗಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ ಅವರು, ಬರ ಹಾಗೂ ನೆರೆ ಪರಿಹಾರಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಹೇಳಿದರು.

ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಗ್ರಾಮದಲ್ಲೂ ತೊಂದರೆ ಉಂಟಾಗಬಾರದು. ಜಾನುವಾರಗಳ ಮೇವಿಗೆ ಕೊರತೆಯಾಗಬಾರದು ಜಿಲ್ಲೆ ಯಲ್ಲಿ ಸಾಕಷ್ಟು ಮೇವು ಲಭ್ಯವಿದ್ದು ಸಾವಿ ರಾರೂ ಮೇವಿನ ಬೀಜದ ಮಿನಿ ಕಿಟ್ ಗಳನ್ನು ವಿತರಿಸಲಾಗಿದೆ. ಅಧಿಕಾರಿಗಳು ಮುಂಜಾಗ್ರತೆವಹಿಸಬೇಕು ಎಂದರು.

ಅರಸೀಕೆರೆ ಮತ್ತು ಚನ್ನರಾಯಪಟ್ಟಣ ದಲ್ಲಿ ಬೆಳೆ ಹಾನಿ ಬಗ್ಗೆ ಮರು ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರಕ್ಕೆ ಹೊಸ ಪ್ರಸ್ತಾವನೆ ಶೀಘ್ರವಾಗಿ ಸಲ್ಲಿಸಬೇಕು. ಅತಿ ವೃಷ್ಠಿಯಿಂದ ಸಕಲೇಶಪುರ, ಆಲೂರು, ಅರಕಲಗೂಡು, ಹೊಳೆನರಸೀಪುರ ಸಾಕಷ್ಟು ಹಾನಿ ಸಂಭವಿಸಿದ್ದು, ಪರಿಹಾರ ವಿತರಣೆ ಶೀಘ್ರವಾಗಿ ಮುಗಿಯಬೇಕು. ದಾಖಲೆಗಳ ಅಪ್ ಲೋಡ್ ಮಾಡುವ ಕಾರ್ಯವನ್ನು ಬೇಗನೆ ಮುಗಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿ ಕಾರಿಗಳಾದ ಲಕ್ಷ್ಮಿಕಾಂತರೆಡ್ಡಿ, ಡಾ.ಹೆಚ್. ಎಲ್.ನಾಗರಾಜ್, ಜಂಟಿ ಕೃಷಿ ನಿರ್ದೇ ಶಕ ಡಾ.ಮಧುಸೂಧನ್, ತೋಟಗಾರಿಕಾ ಉಪನಿರ್ದೇಶಕ ಡಾ.ಸಂಜಯ್ ಮತ್ತು ಕಾಫಿ ಮಂಡಳಿ ಅಧಿಕಾರಿಗಳು ಹಾಜರಿದ್ದರು.

ತೆಂಗು ಬೆಳೆ ಬಗ್ಗೆ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ

ಹಾಸನ: ಜಿಲ್ಲೆಯಲ್ಲಿ ಅರಸೀಕೆರೆ ಮತ್ತು ಚನ್ನರಾಯ ಪಟ್ಟಣ ತಾಲೂಕುಗಳಲ್ಲಿ ಹಾನಿಗೀಡಾಗಿರುವ ತೆಂಗು ಬೆಳೆ ಬಗ್ಗೆ ಸಮೀಕ್ಷೆಯನ್ನು 10 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ತೋಟ ಗಾರಿಕೆ ಇಲಾಖೆಯ ವಿವಿಧ ವಿಷಯಗಳ ಕುರಿತು ಸಭೆ ನಡೆಸಿದ ಅವರು, ಈಗಾಗಲೇ ಒಂದು ಹಂತದ ಸಮೀಕ್ಷೆ ನಡೆ ದಿದೆ. ಅದರೆ ಮತ್ತೊಮ್ಮೆ ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದನ್ನು ತ್ವರಿತವಾಗಿ ಮುಗಿಸಿ ರೈತರಿಗೆ 60 ಕೋಟಿ ರೂಪಾಯಿ ಪರಿಹಾರ ಹಣವನ್ನು ವಿತರಿಸಬೇಕು ಎಂದು ನಿರ್ದೇಶನ ನೀಡಿದರು.

ಆಲೂಗೆಡ್ಡೆ ಬೆಳೆಗಾರರಿಗೆ ಅಗತ್ಯವಿರುವ ದೃಢೀಕೃತ ಆಲೂ ಗೆಡ್ಡೆ ಬಿತ್ತನೆ ಬೀಜವನ್ನು ಈಗಾಗಲೇ ಅಂದಾಜಿಸಿ ಇಂಡೆಂಟ್ ಸಲ್ಲಿಸಿ ಈ ಬಗ್ಗೆ ನೋಂದಾಯಿಸಿಕೊಳ್ಳಲು ಅವಧಿ ನಿಗದಿ ಮಾಡಿ ರೈತರಿಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದರು.
ನಗರದ ಸಿಲ್ವರ್ ಪಾರ್ಕ್ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಅನುದಾನ ಲಭ್ಯವಿದ್ದು, ಇದನ್ನು ಶೀಘ್ರವಾಗಿ ಅಭಿವೃದ್ಧಿಪಡಿ ಸಬೇಕು. ಬಿ.ಎಂ.ರಸ್ತೆಗೆ ಮುಂಭಾಗದ ಕಚೇರಿ ಕಟ್ಟಡ ಹೋಗು ತ್ತಿದ್ದು ಅದನ್ನು ಶೀಘ್ರವೇ ತೆರವುಗೊಳಿಸಬೇಕು ಎಂದು ಸೂಚಿಸಿದರು.

ತೆಂಗುಬೆಳೆ ಪ್ರೋತ್ಸಾಹದ ನಿಟ್ಟಿನಲ್ಲಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಮಾಡಿ ರುವಂತೆ ಜಿಲ್ಲೆಯ ವಿವಿಧ ಕಡೆ ಕಲ್ಪಮೃತ ಮಾರಾಟ ಮಳಿಗೆ ಸ್ಥಾಪನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಮಹಾಮಸ್ತಕಾಭಿಷೇಕ ಮಹೋತ್ಸವದ ವಿಶೇಷಾಧಿಕಾರಿ ಬಿ.ಎಸ್. ವರಪ್ರಸಾದ್ ರೆಡ್ಡಿಯವರು ಸಭೆಯಲ್ಲಿ ಹಾಜರಿದ್ದು, ಚನ್ನರಾಯಪಟ್ಟಣ ಹಾಗೂ ಜಿಲ್ಲೆಯ ವಿವಿಧೆÉಡೆ ಎಲ್ಲಲ್ಲಿ ಕಲ್ಪವೃತ ಮಳಿಗೆ ಸ್ಥಾಪಿಸಬಹುದು ಯಾವ ರೀತಿಯ ತಾಂತ್ರಿಕ ಆರ್ಥಿಕ ನೆರವು ನೀಡಬಹುದು ಎಂಬುದನ್ನು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಲಕ್ಷ್ಮಿಕಾಂತರೆಡ್ಡಿ, ಡಾ.ಹೆಚ್.ಎಲ್.ನಾಗರಾಜ್, ಜಂಟಿ ಕೃಷಿ ನಿರ್ದೇಶಕ ಡಾ.ಮಧುಸೂಧನ್, ತೋಟಗಾರಿಕಾ ಉಪನಿರ್ದೇಶಕ ಡಾ.ಸಂಜಯ್ ಹಾಜರಿದ್ದರು.

 

Translate »