ಭಾವಸಾರ್ ವಿಷನ್ ಇಂಡಿಯಾ ಮೈಸೂರು ಘಟಕದ ಪದಗ್ರಹಣ
ಮೈಸೂರು

ಭಾವಸಾರ್ ವಿಷನ್ ಇಂಡಿಯಾ ಮೈಸೂರು ಘಟಕದ ಪದಗ್ರಹಣ

December 19, 2018

ಮೈಸೂರು: ಭಾವಸಾರ್ ವಿಷನ್ ಇಂಡಿಯಾ (ಬಿವಿಐ)ದ ಮೈಸೂರು ಘಟಕದ ಪದಾಧಿಕಾರಿಗಳ ಪದಗ್ರಹಣ ಮೈಸೂರಿನ ಪಾಂಡುರಂಗ ವಿಠಲ ದೇವಸ್ಥಾನದ ರಾಮಮಂದಿರ ಸಭಾಂಗಣದಲ್ಲಿ ನಡೆಯಿತು. ಬಿವಿಐ ರಾಷ್ಟ್ರೀಯ ಅಧ್ಯಕ್ಷ ಗಜೇಂದ್ರನಾಥ್ ಮಾಲೋದೆ ಸಮ್ಮುಖದಲ್ಲಿ ಬಿವಿಐ 108ರ ಗವರ್ನರ್ ಮಲ್ಲಾರಿರಾವ್ ಕಾಂಗೋಕರ್ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಬಿವಿಐ ರಾಷ್ಟ್ರೀಯ ಅಧ್ಯಕ್ಷ ಗಜೇಂದ್ರನಾಥ್ ಮಾಲೋದೆ ಮಾತನಾಡಿ, 18 ವರ್ಷಗಳ ಹಿಂದೆ ಸ್ಥಾಪಿತವಾದ ಬಿವಿಐ ಹಿಂದುಳಿದ ಭಾವಸಾರ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ದೇಶಾದ್ಯಂತ ನೂರಾರು ಘಟಕಗಳು ನಾನಾ ಸೇವಾ ಕಾರ್ಯಗಳಲ್ಲಿ ತೊಡ ಗಿವೆ. ಅಂತೆಯೇ ಮೈಸೂರು ಘಟಕವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಕೈಗೊಳ್ಳುವಂತೆ ಸಲಹೆ ನೀಡಿದರು.

ಮೈಸೂರು ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಜಯ ರಾಮರಾವ್ ಲಾಳಿಗೆ, ಬಿವಿಐ ಪ್ರತಿಷ್ಠಾನದ ಟ್ರಸ್ಟಿ ಪ್ರಕಾಶ್ ರಾಶಿಂಕರ್, ಬಿವಿಐ 108ರ ಉಪ ಗವರ್ನರ್ ಯೋಗೇಶ್ ಸಾಕ್ರೆ, ಖಜಾಂಚಿ ಡಾ.ಆರ್.ಪಿ.ಸಾತ್ವಿಕ್ ರಂಗಧೋಳ್, ಎಐಬಿ ಕೆಎಂ ಯುವ ಪರಿಷತ್ ರಾಜ್ಯಾಧ್ಯಕ್ಷ ಗಣೇಶ್ ಲಾಳಿಗೆ, ಬಿವಿಐ ಕಡೂರು ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್, ಕಾರ್ಯದರ್ಶಿ ಕೆ.ಎಂ.ಮಂಜುನಾಥ್, ಮೈಸೂರು ಘಟಕದ ಅಧ್ಯಕ್ಷ ಜಗದೀಶ್ ಕುತ್ನೀಕರ್, ಉಪಾಧ್ಯಕ್ಷ ಕೃಷ್ಣ ಮಾವಟ್ಕರ್, ಕಾರ್ಯದರ್ಶಿ ಮಂಜುನಾಥ್ ಲಾಳಿಗೆ, ನಾಯಕ ಸಂತೋಷ್ ಪತಂಗೆ, ಸಲಹೆಗಾರರಾದ ಶಿವಾಜಿರಾವ್ ರಂಪೂರೆ, ರಾಕೇಶ್ ನಾಯಕ್, ನಾಗರಾಜ ಪತಂಗೆ, ಸುಭಾಷ್ ಪತಂಗೆ, ಶ್ರೀನಿ ವಾಸರಾವ್ ಸುತ್ರಾವೆ ಇನ್ನಿತರರು ಉಪಸ್ಥಿತರಿದ್ದರು.

Translate »