ಪ್ಲಾಸ್ಟಿಕ್ ಕಸ ನಿರ್ವಹಣಾ ಕಾರ್ಯಕ್ಕೆ ಮೇಯರ್ ಚಾಲನೆ
ಮೈಸೂರು

ಪ್ಲಾಸ್ಟಿಕ್ ಕಸ ನಿರ್ವಹಣಾ ಕಾರ್ಯಕ್ಕೆ ಮೇಯರ್ ಚಾಲನೆ

December 19, 2018

ಮೈಸೂರು:  ಮೈಸೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಪ್ಲಾಸ್ಟಿಕ್ ಕಸ ನಿರ್ವಹಣಾ ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಮಂಗಳವಾರ ಚಾಲನೆ ನೀಡಿ ದರು. ಮೈಸೂರಿನ ಕುಂಬಾರಕೊಪ್ಪಲಿನ ಶೂನ್ಯ ಕಸ ನಿರ್ವಹಣಾ ಕೇಂದ್ರದ ಆವ ರಣದಲ್ಲಿ ಮೈಸೂರು ಮಹಾನಗರಪಾಲಿಕೆ ಮತ್ತು ಐಪಿಸಿಎ, ರೆಕಿಟ್ ಬೆನ್‍ಕೈಸರ್ ಇಪಿಆರ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರೆಕಿಟ್ ಬೆನ್‍ಕೈಸರ್ ಇಪಿಆರ್ ಮೈಸೂ ರಿನ ಪ್ಲಾಸ್ಟಿಕ್ ಕಸವನ್ನು ಪ್ರತಿ ಕೆಜಿಗೆ 3.5 ರೂ.ನಂತೆ ಖರೀದಿಸಿ, ಅದನ್ನು ವಿದ್ಯುತ್ ಉತ್ಪಾದನೆ ಮತ್ತು ಇತರೆ ಉತ್ಪಾದನೆಗಳಿಗೆ ಬಳಸಿಕೊಳ್ಳುವ ಕಾರ್ಯಕ್ಕೆ ಇಂದು ಚಾಲನೆ ದೊರೆಯಿತು.

ಈ ವೇಳೆ ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ನಗರ ವನ್ನು ಮತ್ತಷ್ಟು ಸ್ವಚ್ಛಗೊಳಿಸಿ, ಪ್ಲಾಸ್ಟಿಕ್ ಮುಕ್ತ ಮಾಡಬೇಕಾಗಿದೆ. ಮೈಸೂರಿನಲ್ಲಿ ಪ್ರತಿದಿನ ಬೀಳುತ್ತಿರುವ ಟನ್‍ಗಟ್ಟಲೆ ಪ್ಲಾಸ್ಟಿಕ್ ಯುಕ್ತ ಕಸವನ್ನು ರೀ ಸೈಕ್ಲಿಂಗ್ ಮಾಡಿ ಇಂಧನವಾಗಿ ಪರಿವರ್ತಿಸಲು ರೆಕಿಟ್ ಬೆನ್ ಕೈಸರ್ ಕಂಪನಿ ಮುಂದೆ ಬಂದಿದೆ. ಇದು ಉತ್ತಮ ಬೆಳವಣಿಗೆ. ನಗರ ಸ್ವಚ್ಛತೆಗೂ ಅನು ಕೂಲವಾಗುವುದರಿಂದ ಇಂತಹ ಕಂಪನಿ ಗಳು ಮುಂದೆ ಬರಬೇಕು ಎಂದರು.

ಕಂಪನಿಯವರು ಇಲ್ಲಿಂದ ಕೊಂಡೊ ಯ್ಯುವ ಪ್ಲಾಸ್ಟಿಕ್ ಅನ್ನು ವಿದ್ಯುತ್ ಇನ್ನಿತರ ಉತ್ಪಾದನೆಗೆ ಬಳಸಿಕೊಳ್ಳುತ್ತಾರೆ. ಸದ್ಯಕ್ಕೆ ಈ ಕಂಪನಿಯ ಜೊತೆ ಕೈಜೋಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಯ ಮುಖ್ಯಸ್ಥರನ್ನು ಭೇಟಿಯಾಗಿ ಅವರೊಂ ದಿಗೆ ಚರ್ಚಿಸಿ, ಕಾರ್ಯೋನ್ಮುಖರಾಗ ಲಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ (ರಮಣಿ), ನಗರಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಅಶ್ವಿನಿ ಅನಂತು, ಶೋಭಾ ಸುನೀಲ್, ಶಾಂತ ಕುಮಾರಿ, ಉಷಾ, ಐಪಿಸಿಎ ನಿರ್ದೇಶಕ ಆಶೀಶ್ ಜೈನ್, ಅನುಪಂ ಭಟ್, ಇಂದೂ ಶರ್ಮ ಇನ್ನಿತರರು ಉಪಸ್ಥಿತರಿದ್ದರು.

Translate »