ಪತ್ರಕರ್ತರಿಗೆ ಸ್ವಾಸ್ಥ್ಯ ಸಮಾಜ ಕಟ್ಟುವ ಹೊಣೆ
ಚಾಮರಾಜನಗರ

ಪತ್ರಕರ್ತರಿಗೆ ಸ್ವಾಸ್ಥ್ಯ ಸಮಾಜ ಕಟ್ಟುವ ಹೊಣೆ

July 30, 2018

ಕೊಳ್ಳೇಗಾಲ: ಸ್ವಾಸ್ಥ್ಯ ಸಮಾಜ ಕಟ್ಟುವ ಗುರುತರ ಜವಾ ಬ್ದಾರಿ ಪತ್ರಕರ್ತರ ಮೇಲಿದೆ. ಪತ್ರಕರ್ತರು ಪತ್ರಿಕಾ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಪತ್ರಿಕಾಧರ್ಮವನ್ನು ಉಳಿಸ ಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.

ಅವರು ಪಟ್ಟಣದ ತಾಲೂಕು ಪಂಚಾ ಯಿತಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಆಯೋ ಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಪತ್ರಿಕಾ ರಂಗ ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಆಗಿರುವುದು ಈ ದೇಶದ ದೊಡ್ಡ ದುರಂತ ಎಂದ ಅವರು, ಪ್ರಜಾಪ್ರಭುತ್ವದ 4ನೇ ಅಂಗ ವಾಗಿರುವ ಪತ್ರಿಕಾರಂಗ ದೇಶದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇದೆ. ಪತ್ರಕರ್ತರು ತಮ್ಮ ಮೇಲಿನ ಜವಾಬ್ದಾರಿ ಅರ್ಥ ಮಾಡಿಕೊಂಡು ಪತ್ರಿಕಾ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಹೇಳಿದರು.

ಸೋಷಿಯಲ್ ಮೀಡಿಯಾ ಸಮಾಜ ದಲ್ಲಿ ಅತ್ಯಂತ ಅಪಾಯಕಾರಿ ವ್ಯವಸ್ಥೆಯನ್ನು ಹುಟ್ಟುಹಾಕುವ ಮೂಲಕ ಸಮಾಜದ ಆರೋಗ್ಯಕರ ಬೆಳವಣಿಗೆಗೆ ಕುಂದುಂಟು ಮಾಡುವತ್ತ ಸಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯ ಮಗಳೂ ಸಹ ತಮ್ಮ ಜವಾಬ್ದಾರಿಯಿಂದ ಹೊರನಡೆದು ಅಪಾಯಕಾರಿ ಸನ್ನಿವೇಶ ಸೃಷ್ಠಿಸುತ್ತಿವೆ ಎಂದರು. ನಾನು ಟಿವಿ ನೋಡಲೇ ಬಾರದು ಎನ್ನುವ ತೀರ್ಮಾನಕ್ಕೆ ಬರುವಂತಾಗಿದೆ. ಸೋಷಿಯಲ್ ಮೀಡಿಯಾ ಮತ್ತು ಎಲೆಕ್ಟ್ರಾನಿಕ್ ಮೀಡಿಯಾಗಳು ಎಂತಹ ಸಮಾಜವನ್ನು ಸೃಷ್ಟಿಸುತ್ತಿವೆ ಎಂಬ ಆತಂಕ ನನ್ನಲ್ಲಿ ಮೂಡಿದ್ದು, ನಾನು ಮೌನಿಯಾಗಿಬಿಡಬೇಕು ಎನಿಸುವಂತಾಗಿದೆ ಎಂದು ಹೇಳಿದರು.

ಸ್ವಾಸ್ತ್ಯ ಸಮಾಜ ನಿರ್ಮಾಣ ಪತ್ರಿಕಾ ರಂಗದಿಂದ ಸಾಧ್ಯ. ಇದನ್ನು ಅರಿತು, ಸರ್ಕಾರದ ಅಭಿವೃದ್ಧಿ ಯೋಜನೆಗಳ ಅನು ಷ್ಠಾನ ಕುರಿತ ಆಡಳಿತಯಂತ್ರವನ್ನು ಎಚ್ಚರಿಸುವ ಲೇಖನಗಳನ್ನು ಪ್ರಕಟಿಸುವ ಮೂಲಕ ಉತ್ತಮ ಸಮಾಜ ಕಟ್ಟಲು ಪತ್ರಿಕೋದ್ಯಮ ಮುಂದಾಗಬೇಕು. ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಎಸ್ಟಿಮೇಟ್ ಮಾಡಿಸಿ. ನಾನೇ ಖುದ್ದಾಗಿ ನಿಂತು ಎಂಪಿ, ಎಂಎಲ್‍ಎ, ಎಂಎಲ್‍ಸಿ ಇತರರ ಗಮನ ಸೆಳೆದು ಅಗತ್ಯ ಅನುದಾನ ಬಿಡುಗಡೆ ಮಾಡಿಸಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ ಮಾಡಿಸಿಕೊಡುವ ಭರವಸೆ ನೀಡಿದರು.

ಮಾಸಾಶನದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ಅರ್ಹರಿಗೆ ಮಾಸಾಶನ ದೊರೆಯುವಂತೆ ಮಾಡು ವುದಾಗಿ ಅಲ್ಲದೆ ಪತ್ರಕರ್ತರಿಗೆ ಅನು ಕೂಲ ಕಲ್ಪಿಸುವುದಾಗಿ ತಿಳಿಸಿದರು.

ಪತ್ರಿಕಾ ದಿನಾಚರಣೆ ಅಂಗವಾಗಿ ಯೂನುಸ್, ರಂಗಸ್ವಾಮಿ, ವಸಂತ್, ಮರಿಸ್ವಾಮಿ(ಸೋಮು) ಇವರುಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಗೌರವ ಅಧ್ಯಕ್ಷ ರಾಜೇಶ್, ಸಂಘದ ಅಧ್ಯಕ್ಷ ನಾಗೇಂದ್ರಸ್ವಾಮಿ, ಹಿರಿಯ ಪತ್ರ ಕರ್ತರಾದ ಎ.ಎಚ್.ಗೋವಿಂದ, ಡಿ.ವೆಂಕ ಟಾಚಲ, ಉಪಾಧ್ಯಕ್ಷ ಮಹೇಶ್, ಕಾರ್ಯ ದರ್ಶಿ ಬಸಂತ್‍ಮೊಟಾಯ್, ರಾಜು, ಆ.ನಾಗರಾಜು. ಮಹೇಶ, ಗುರು, ನಾಗ ರಾಜು, ಕುಮಾರ, ಸಾಗರ್, ಸುರೇಶ್, ಸಿದ್ದರಾಜು, ನಿಂಗರಾಜು, ಅವಿನ್ ಪ್ರಕಾಶ್, ಗಿರೀಶ್ ಇದ್ದರು.

Translate »