`ಸರ್ವೀಸ್ ಆರ್ಗನೈಜೇಷನ್ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಮೈಸೂರು

`ಸರ್ವೀಸ್ ಆರ್ಗನೈಜೇಷನ್ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

December 9, 2018

ಮೈಸೂರು: ಮೈಸೂರು ರೌಂಡ್ ಟೇಬಲ್-21 ವತಿಯಿಂದ ಆಯೋ ಜಿಸಿರುವ `ಸರ್ವೀಸ್ ಆರ್ಗನೈಜೇಷನ್ ಕಪ್’ ವಾರ್ಷಿಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಶನಿವಾರ ಚಾಲನೆ ಪಡೆದು ಕೊಂಡಿದ್ದು, ಎಂಎಆರ್‍ಟಿ-156 ತಂಡ ಮತ್ತು ರೋಟರಿ ಸೆಂಟ್ರಲ್ ಸೆಮಿ ಫೈನಲ್ ಹಂತಕ್ಕೆ ತಲುಪಿವೆ. ಎರಡು ದಿನಗಳು ನಡೆ ಯಲಿರುವ ಈ ಪಂದ್ಯಾವಳಿಯಲ್ಲಿ ಮೊದಲ ದಿನವಾದ ಇಂದು ಏಕಕಾಲದಲ್ಲಿ ಮೈಸೂ ರಿನ ಸ್ಪೋಟ್ರ್ಸ್ ಪೆವಿಲಿಯನ್ ಮೈದಾನ ಹಾಗೂ ರೈಲ್ವೆ ಮೈದಾನದಲ್ಲಿ ಲೀಗ್ ಪಂದ್ಯ ಗಳು ನಡೆದವು. ಮತ್ತೆರಡು ತಂಡಗಳು ಸೆಮಿ ಫೈನಲ್ ತಲುಪಬೇಕಿದೆ. ಈ ಸಂಬಂಧದ ಪಂದ್ಯಗಳು ನಾಳೆ ನಡೆಯಲಿವೆ.

ಸ್ಪೋಟ್ರ್ಸ್ ಪೆವಿಲಿಯನ್‍ನಲ್ಲಿ ನಡೆದ ಲೀಗ್‍ನ ಮೊದಲ ಪಂದ್ಯದಲ್ಲಿ ಎಂಇ ಆರ್‍ಟಿ-256 ತಂಡದ (90 ರನ್‍ಗಳು) ವಿರುದ್ಧ ಎಂಎಆರ್‍ಟಿ-156 ತಂಡ 96 ರನ್ ಗಳಿಸಿ ಗೆಲುವು ಸಾಧಿಸಿತು. 2ನೇ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡ 75 ರನ್‍ಗಳನ್ನು ಕಲೆ ಹಾಕಿದರೆ ಎದುರಾಳಿ ಪಿಕೆಎಸ್ ತಂಡ 111 ರನ್ ದಾಖಲಿಸಿ ಜಯ ಗಳಿಸಿತು.

ಅದೇ ರೀತಿ 3ನೇ ಪಂದ್ಯದಲ್ಲಿ ಎಂಆರ್‍ಟಿ -21 ತಂಡದ (70 ರನ್‍ಗಳು) ವಿರುದ್ಧ ಎಂಇಆರ್‍ಟಿ-256 ತಂಡ 71 ರನ್‍ಗಳನ್ನು ಗಳಿಸಿ ಗೆಲುವು ಕಂಡಿತು. 4ನೇ ಪಂದ್ಯದಲ್ಲಿ ಎಂಆರ್‍ಟಿ-21 ತಂಡದ (89 ರನ್‍ಗಳು) ವಿರುದ್ಧ ಎಂಎಆರ್‍ಟಿ-156 ತಂಡ 109 ರನ್‍ಗಳನ್ನು ಕಲೆ ಹಾಕಿ ಗೆದ್ದು ಬೀಗಿತು.

ರೈಲ್ವೆ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎಂಹೆಚ್‍ಆರ್‍ಟಿ-109 ತಂಡದ (51 ರನ್‍ಗಳು) ವಿರುದ್ಧ ರೋಟರಿ ಸೆಂಟ್ರಲ್ 52 ರನ್‍ಗಳನ್ನು ಗಳಿಸಿ ಗೆಲುವು ಪಡೆಯಿತು. 2ನೇ ಪಂದ್ಯದಲ್ಲಿ ಕಲಿಸು ಫೌಂಡೇಷನ್ ತಂಡದ (74 ರನ್‍ಗಳು) ವಿರುದ್ಧ ರೋಟರಿ ಸೆಂಟ್ರಲ್ 75 ರನ್‍ಗಳನ್ನು ಭಾರಿಸಿ ಜಯ ಸಾಧಿಸಿತು. 3ನೇ ಪಂದ್ಯದಲ್ಲಿ ಎಂಹೆಚ್‍ಆರ್‍ಟಿ-109 ತಂಡದ ವಿರುದ್ಧ ಕಲಿಸು ಫೌಂಡೇಶನ್ ಗೆಲುವು ಸಾಧಿಸಿದರೆ, 4ನೇ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ (71) ವಿರುದ್ಧ ರೋಟರಿ ಮಿಡ್‍ಟೌನ್ ತಂಡ 139 ರನ್ ದಾಖಲಿಸಿ ಗೆದ್ದು ಬೀಗಿತು.

ಸ್ಪೋಟ್ರ್ಸ್ ಪೆವಿಲಿಯನ್‍ನಲ್ಲಿ ಡಿ.9ಕ್ಕೆ ಫೈನಲ್: 8 ಓವರ್‍ಗಳಲ್ಲಿ ಪಂದ್ಯಗಳು ನಡೆಯುತ್ತಿದ್ದು, ಪಂದ್ಯಾವಳಿಯಲ್ಲಿ 9 ತಂಡಗಳು ಪಾಲ್ಗೊಂಡಿವೆ. ನಾಳೆ (ಡಿ.9) ಸ್ಪೋಟ್ರ್ಸ್ ಪೆವಿಲಿಯನ್ ಮೈದಾನದಲ್ಲಿ ಸೆಮೀ ಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಮೊದಲ ಸೆಮಿ ಫೈನಲ್ ಬೆಳಿಗ್ಗೆ 10ಕ್ಕೆ ಹಾಗೂ ಎರಡನೇ ಸೆಮೀ ಫೈನಲ್ ಮಧ್ಯಾಹ್ನ 12ಕ್ಕೆ ನಡೆಯಲಿದ್ದು, ಬಳಿಕ ಮಧ್ಯಾಹ್ನ 3ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಇಂದು ಬೆಳಿಗ್ಗೆ ರೈಲ್ವೆ ಮೈದಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ರೌಂಡ್ ಟೇಬಲ್-21 ಅಧ್ಯಕ್ಷ ಹೆಚ್.ಹೆಚ್. ರಾಮ್, ಪಂದ್ಯಾವಳಿ ಸಂಚಾಲಕ ಸಂತೋಷ್ ರೆಡ್ಡಿ ಮತ್ತಿತರರು ಹಾಜರಿದ್ದರು.

Translate »