7 ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿ ಅಬೀದ್ ಪಾಷಾ ಬಂಧನಕ್ಕೆ ಶಿಂಧೆ ಆಗ್ರಹ
ಮೈಸೂರು

7 ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿ ಅಬೀದ್ ಪಾಷಾ ಬಂಧನಕ್ಕೆ ಶಿಂಧೆ ಆಗ್ರಹ

December 9, 2018

ಮೈಸೂರು:  ರಾಜ್ಯದ ವಿವಿಧೆಡೆ ನಡೆದ ಹಿಂದುತ್ವವಾದಿ 7 ಕಾರ್ಯಕರ್ತರ ಹತ್ಯೆ ಪ್ರಕರಣದ ಆರೋಪಿ ಅಬೀದ್ ಪಾಷಾನನ್ನು ಕೂಡಲೇ ಬಂಧಿಸಿ, ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳು ವಂತೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದುತ್ವವಾದಿಗಳ ಹತ್ಯೆ ಮಾಡಿ ರುವ ಆರೋಪಿಗಳ ರಕ್ಷಣೆಗೆ ನಿಂತಿರುವಂತೆ ವರ್ತಿಸುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‍ಐಟಿ ರಚಿಸಿ, 16 ಹಿಂದೂ ಕಾರ್ಯಕರ್ತರನ್ನು ಬಂಧಿಸಿ, ಯಾವುದೇ ಅಪರಾಧ ಹಿನ್ನೆಲೆ ಇಲ್ಲದಿದ್ದರೂ ಅವರ ವಿರುದ್ಧ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಆದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೈಸೂರಿನ ಅಬೀದ್ ಪಾಶಾ ಮತ್ತು ತಂಡ, ಹಿಂದೂ ಸಂಘ ಟನೆಗಳ 7 ಹಿಂದುತ್ವವಾದಿ ಕಾರ್ಯಕರ್ತರನ್ನು ಹತ್ಯೆ ಮಾಡಿ ದ್ದರೂ ಅವರ ಮೇಲೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖ ಲಿಸದೇ ಇರುವುದು ಅನುಮಾನಗಳಿಗೆ ಎಡೆಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಹಿಂದು ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ, ನ್ಯಾಯವಾದಿ ಅಮೃತೇಶ್ ಎನ್.ಪಿ ಮಾತನಾಡಿ, ರಾಜ್ಯ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಾಗೂ ಸಮುದಾಯವೊಂದನ್ನು ಓಲೈಸಿಕೊಳ್ಳುವುದಕ್ಕಾಗಿ ಹಿಂದುತ್ವವಾದಿಗಳ ಹತ್ಯೆಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹತ್ಯೆ ಆರೋಪಿ ಅಬೀದ್ ಪಾಶಾ ತಂಡ 7 ಮಂದಿ ಯನ್ನು ಹತ್ಯೆ ಮಾಡಿ, ಮೈಸೂರಿನಲ್ಲಿ ಬಹಿರಂಗವಾಗಿ ತಿರುಗಾಡು ತ್ತಿದೆ. ಅಲ್ಲದೇ ವಿಘ್ನೇಶ ಮತ್ತು ಸುಧೀಂದ್ರ ವಿದ್ಯಾರ್ಥಿಗಳ ಹತ್ಯೆ ಪ್ರಕರಣದ ಸಾಕ್ಷಿದಾರ ಕ್ಯಾತಮಾರನ ಹಳ್ಳಿ ಕೆ.ರಾಜುನನ್ನು ಹತ್ಯೆ ಮಾಡಿರುವ ಉದಾಹರಣೆ ಇದ್ದರೂ, ಯಾವುದೇ ಸಾಕ್ಷಿದಾರನಿಗೂ ಭದ್ರತೆ ಒದಗಿಸಿಲ್ಲ ಎಂದು ಕಿಡಿಕಾರಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್ ಗೌಡ, ಅಬೀದ್ ಪಾಷಾ ಮತ್ತು ಗ್ಯಾಂಗಿನ ಸದಸ್ಯರು ಜಾಮೀನಿನ ಷರತ್ತು ಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿರುವುದರಿಂದ ಅವರ ಜಾಮೀನು ರದ್ದುಗೊಳಿಸಿ, ಕೂಡಲೇ ಬಂಧಿಸಬೇಕು. ಕೊಲೆಯಾದ ಹಿಂದುತ್ವವಾದಿಗಳ ಕುಟುಂಬದವರಿಗೆ ರಕ್ಷಣೆ ಮತ್ತು ಆರ್ಥಿಕ ಸಹಾಯ ನೀಡಬೇಕು. ಈ ಪ್ರಕರಣಗಳ ತನಿಖೆಯನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ಮೈಸೂರಿನಲ್ಲಿ ನಡೆದ ಹತ್ಯೆ ಪ್ರಕರಣಗಳ ರೂವಾರಿ ಟಿಂಬರ್ ಆತಿಕ್‍ನನ್ನು ಪತ್ತೆ ಹಚ್ಚ ಬೇಕು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಬೇ ಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂಪರ ಸಂಘ ಟನೆಗಳ ಮುಖಂಡ ವಿ.ಗಿರಿಧರ್, ವರದರಾಜ ಪಿಳ್ಳೈ ಇದ್ದರು.

Translate »