ಸುತ್ತೂರು ಜೆಎಸ್‍ಎಸ್‍ಗೆ ಸಮಗ್ರ ಕ್ರೀಡಾ ಪ್ರಶಸ್ತಿ
ಮೈಸೂರು

ಸುತ್ತೂರು ಜೆಎಸ್‍ಎಸ್‍ಗೆ ಸಮಗ್ರ ಕ್ರೀಡಾ ಪ್ರಶಸ್ತಿ

December 9, 2018

ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣೆಯ ಅಂಗವಾಗಿ ಇತ್ತೀಚೆಗೆ ನಡೆದ 3 ದಿನಗಳ ಜೆಎಸ್‍ಎಸ್ ಅಂತರ-ಸಂಸ್ಥೆಗಳ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಬಹುಮಾನಗಳನ್ನು ಗಳಿಸುವ ಮೂಲಕ ಸುತ್ತೂರು ಜೆಎಸ್‍ಎಸ್ ಪ್ರೌಢಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಬಾಲಕರ ವಿಭಾಗದಲ್ಲಿ ಕರೆಪ್ಪ 400 ಮೀ. ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ, ಅನುಜ್ ಕುಮಾರ್ 200 ಮೀ., 100 ಮೀ. ಓಟದಲ್ಲಿ ತೃತೀಯ, ಜನ್‍ಮನ್‍ಜಯ್ 400 ಮೀ. ಓಟದಲ್ಲಿ ದ್ವಿತೀಯ, ರವೀಶ್ 1500 ಮೀ. ಓಟದಲ್ಲಿ ತೃತೀಯ, ಪ್ರಶಾಂತ್ ಚಕ್ರ ಎಸೆತದಲ್ಲಿ ತೃತೀಯ, ಭಲ್ಲೇ ಎಸೆತದಲ್ಲಿ ದ್ವಿತೀಯ, ಮೌನೇಶ್ ಭಲ್ಲೆ ಎಸೆತದಲ್ಲಿ ಪ್ರಥಮ, ರೇವಣಸಿದ್ದ ಎತ್ತರ ಜಿಗಿತದಲ್ಲಿ ತೃತೀಯ, 4ಘಿ100ಮೀ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಗುಂಪು ಆಟಗಳಲ್ಲಿ ಖೋಖೋ ಮತ್ತು ವಾಲಿಬಾಲ್‍ನÀಲ್ಲಿ ಶಾಲಾ ಕ್ರೀಡಾಪಟುಗಳು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ವಾಲಿಬಾಲ್‍ನಲ್ಲಿ ದಾನೇಶ್ ಹಾಗೂ ಖೋಖೋ ಆಟದಲ್ಲಿ ಪ್ರಶಾಂತ್ ‘ಉತ್ತಮ ಆಟಗಾರ’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಕವನ 100 ಮೀ. ಓಟದಲ್ಲಿ ದ್ವಿತೀಯ, ದೀಪ 200 ಮೀಟರ್ ಓಟದಲ್ಲಿ ದ್ವಿತೀಯ, ಪವಿತ್ರ 800 ಮೀ. ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಲಯಂಸೇನಾ ಭಲ್ಲೆ ಎಸೆತದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರೆ, ಲಕ್ಷ್ಮೀ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 4ಘಿ100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಗುಂಪು ಆಟಗಳಲ್ಲಿ ಖೋಖೋ ಮತ್ತು ಥ್ರೋಬಾಲ್‍ನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಖೋಖೋ ಆಟದಲ್ಲಿ ಕುಮಾರಿ ದೀಪಾ ‘ಉತ್ತಮ ಆಟಗಾರ್ತಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Translate »