ಕರ್ಜನ್ ಪಾರ್ಕ್‍ನಲ್ಲಿ ಮಾವು, ಹಲಸು ಮೇಳ ಆರಂಭ
ಮೈಸೂರು

ಕರ್ಜನ್ ಪಾರ್ಕ್‍ನಲ್ಲಿ ಮಾವು, ಹಲಸು ಮೇಳ ಆರಂಭ

May 25, 2019

ಮೈಸೂರು: ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣನ್ನು ರೈತರಿಂದ ಕಡಿಮೆ ದರದಲ್ಲಿ ಗ್ರಾಹಕರಿಗೆ ತಲುಪಿಸಲು ಮೈಸೂರಿನ ಕರ್ಜನ್ ಪಾರ್ಕ್‍ನಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಐದು ದಿನ ಗಳ ಮಾವು ಮತ್ತು ಹಲಸು ಮೇಳ ಶುಕ್ರವಾರ ಆರಂಭವಾಗಿದ್ದು, ಮೊದಲ ದಿನವೇ ಗ್ರಾಹಕರು ಮುಗಿಬಿದ್ದರು.

ಮೇಳ ಮೇ 28ರ ಸಂಜೆ 7 ಗಂಟೆ ವರೆಗೂ ನಡೆಯಲಿದೆ. ಇಂದು ಬೆಳಿಗ್ಗೆ ಜಿ.ಪಂ ಸಿಇಒ ಕೆ.ಜ್ಯೋತಿ ಮೇಳ ಉದ್ಘಾಟಿಸಿ ದರು. ಬಳಿಕ ಅವರು ಮಾತನಾಡಿ, ರೈತ ರಿಗೆ ಮಾರುಕಟ್ಟೆ ಒದಗಿಸುವುದರೊಂದಿಗೆ ಗುಣಮಟ್ಟದ 15 ಬಗೆಯ ಮಾವಿನ ಹಣ್ಣು ಗಳನ್ನು ಮಾರಾಟಕ್ಕಿಡಲಾಗಿದೆ ಎಂದರು.

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಸಂಜಯ್ ಮಾತನಾಡಿದರು. ಮೇಳದಲ್ಲಿ ಮಾರುಕಟ್ಟೆಗಿಂತ ಎರಡು ರೂ. ಕಡಿಮೆ ದರದಲ್ಲಿ ಮಾವಿನ ಹಣ್ಣನ್ನು ಮಾರಾಟ ಮಾಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇ ಶಕಿ ಹಬೀಬಾ ನಿಶಾತ್ ತಿಳಿಸಿದರು.

ಮಳಿಗೆದಾರರು ದರ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಮಾರುಕಟ್ಟೆಯಲ್ಲಿನ ದರ ಪರಿಶೀಲಿಸಿದಾಗ ತೋಟಗಾರಿಕಾ ಇಲಾಖೆ ನಿಗದಿಪಡಿಸಿದ ದರ ಸಮಂಜಸ ವಾಗಿದೆ ಎನಿಸಿತು. ಈ ಹಿನ್ನೆಲೆಯಲ್ಲಿ ಇಲಾಖೆ ನಿಗದಿ ಪಡಿಸಿದ ದರದಲ್ಲಿಯೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ ಎಂದರು.

ಮೇಳದ ಸಸ್ಯಸಂತೆಯಲ್ಲಿ ತೆಂಗಿನ ಗಿಡ, ಮಾವು, ಹಲಸು, ಸಪೋಟ, ಸೀಬೆ, ನೇರಳೆ, ಜಂಬು ನೇರಳೆ, ನುಗ್ಗೆ, ಅಡಿಕೆ, ನಿಂಬೆ, ಹುಣಸೆ, ಸೀತಾಫಲ, ಚಕ್ರಮನಿ, ಪರಂಗಿ, ಬೆಟ್ಟದ ನೆÀಲ್ಲಿ, ಮೈಸೂರು ಮಲ್ಲಿಗೆ, ದಾಸ ವಾಳ, ವಿಳ್ಳೆದೆಲೆ, ಫ್ಯಾಷನ್ ಫ್ರೂಟ್ ಸೇರಿ ದಂತೆ ವಿವಿಧ ಗಿಡಗಳನ್ನು ಮಾರಾಟ ಮಾಡ ಲಾಗುತ್ತಿದೆ. ನಾಟಿ ತೆಂಗಿನ ಗಿಡಕ್ಕೆ 60 ರೂ, ಹೈಬ್ರಿಡ್ ತೆಂಗಿನ ಗಿಡಕ್ಕೆ 170 ರೂ. ನಿಗದಿ ಮಾಡಲಾಗಿದೆ. ಹಣ್ಣುಗಳ ಗಿಡಗಳು 35 ರೂ.ನಿಂದ ಆರಂಭವಾಗುತ್ತವೆ ಎಂದರು.

ಪರಿಶೀಲನೆ: ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ ಮಾತನಾಡಿ, ಮೇಳದಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾಗಿಸಿ ರುವ ಹಣ್ಣುಗಳ ಮಾರಾಟ ನಿಷೇಧಿಸಲಾಗಿದೆ. ದ್ರಾವಣವನ್ನು ಪೇಪರ್‍ಗೆ ಹಾಕಿ ಹಣ್ಣಿನ ಸಮೀಪ ಒಯ್ದರೆ ಪೇಪರ್ ನೀಲಿ ಬಣ್ಣಕ್ಕೆ ತಿರುಗಿದರೆ, ರಾಸಾಯನಿಕ ಬಳಸಿರುವುದು ಖಾತರಿಯಾಗುತ್ತದೆ. ಇಥಲೀನ್ ಬಳಕೆಗೆ ಅವಕಾಶ ನೀಡಲಾಗಿದೆ. ಇದರಿಂದ ಆರೋ ಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದರು.

Translate »