ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ನೀವೇ ಯಾರಾದರೂ ಸಿಎಂ ಆಗಿ
ಮೈಸೂರು

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ನೀವೇ ಯಾರಾದರೂ ಸಿಎಂ ಆಗಿ

May 25, 2019

ಬೆಂಗಳೂರು: ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಇಂದು ನಡೆದ ಅನೌಪಚಾರಿಕ ರಾಜ್ಯ ಸಂಪುಟ ಸಭೆಯಲ್ಲಿ ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀ ನಾಮೆ ನೀಡುವುದಾಗಿ ಕಾಂಗ್ರೆಸ್ ಸಚಿವರಿಗೆ ಎಚ್ಚರಿಕೆ ನೀಡಿದರೆ, ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತುಮಕೂರಿನ ಶಾಸಕರು ಹಾಗೂ ಮುಖಂಡರು ಸ್ವಲ್ಪ ಶ್ರಮ ವಹಿಸಿ ಕೆಲಸ ಮಾಡಿದ್ದರೆ ಗೆಲ್ಲಬಹುದಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನೌಪಚಾರಿಕ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ನೀಡಿರುವ ಎಲ್ಲಾ ಪತ್ರಗಳನ್ನು ಪರಿಗಣಿಸಿ ಕಾನೂನಿನನ್ವಯ ಕೆಲಸ ಮಾಡಿಕೊಟ್ಟಿದ್ದೇನೆ. ಒಂದೇ ಅಧಿಕಾರಿಯ ವರ್ಗಾವಣೆಗೆ ನಾಲ್ಕೈದು ಮಂದಿ ಪತ್ರ ಕೊಟ್ಟಾಗ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ರೈತರ ಸಾಲ ಮನ್ನಾ ಜೊತೆಗೆ ಹಿಂದಿನ ಕಾಂಗ್ರೆಸ್ ಸರ್ಕಾ ರದ ಎಲ್ಲಾ ಕಾರ್ಯಕ್ರಮಗಳನ್ನು ಮುಂದು ವರೆಸಿದ್ದೇನೆ. ಕಳೆದ 1 ವರ್ಷದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ. ಆದರೂ ಕೆಲ ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ನನ್ನ ಕಾರ್ಯ ವೈಖರಿಯನ್ನು ಬಹಿರಂಗ ವಾಗಿ ಟೀಕಿಸಿದ್ದಾರೆ. ನಾನು ಅವರ ಸಿಎಂ ಅಲ್ಲ ಎಂದು ಹೇಳಿಕೆ ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರ ಲ್ಲದೇ, ಇಂತಹ ಹೇಳಿಕೆಗಳೂ ಕೂಡ ಲೋಕ ಸಭಾ ಚುನಾವಣೆಯ ಸೋಲಿಗೆ ಕಾರಣ ವಾಗಿರಬಹುದು. ನಿಮಗೆ ನಾನು ಬೇಡವೆಂ ದರೆ ಹೇಳಿಬಿಡಿ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ನೀವೇ ಯಾರಾದರೂ ಸಿಎಂ ಆಗಿ. ನಾವೂ ಬೆಂಬಲ ಕೊಡುತ್ತೇವೆ ಎಂದು ಬೇಸರದಿಂದಲೇ ಹೇಳಿದರು. ಈ ವೇಳೆ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್ ಅವರುಗಳು ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಂತರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಚಿವ ರಾದ ಯು.ಟಿ.ಖಾದರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ ಮುಂತಾ ದವರು ಮುಖ್ಯಮಂತ್ರಿಗಳನ್ನು ಸಮಾಧಾನ ಪಡಿಸಿ ನೀವು ದುಡುಕಿ ರಾಜೀನಾಮೆ ಕೊಡುವುದು ಬೇಡ. ಮೈತ್ರಿ ಸರ್ಕಾರವನ್ನು ಮುಂದುವರೆಸಿಕೊಂಡು ಹೋಗೋಣ. ಕಾಂಗ್ರೆಸ್‍ನ ಸಚಿವರು, ಶಾಸಕರು ನಿಮ್ಮ ವಿರುದ್ಧ ಮಾತನಾಡದಂತೆ ಶಾಸಕಾಂಗ ಪಕ್ಷದ ಸಭೆ ಕರೆದು ಎಚ್ಚರಿಕೆ ನೀಡುತ್ತೇವೆ ಎಂದರು.

ನಂತರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ತುಮ ಕೂರಿನ ಶಾಸಕರು ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಇನ್ನೂ ಸ್ವಲ್ಪ ಶ್ರಮ ವಹಿಸಿ ಕೆಲಸ ಮಾಡಿದ್ದರೆ ನಾವು ಗೆಲ್ಲಬಹುದಾಗಿತ್ತು. ಆಗಿದ್ದಾಗಿದೆ. ಈಗ ಸೋತಿರುವುದಕ್ಕೆ ಧೃತಿಗೆಡದೇ ಪಕ್ಷವನ್ನು ಸಂಘಟಿಸಿ ಎಂದು ಶಾಸಕರಿಗೆ ಕರೆ ನೀಡಿ ದರು. ಚುನಾವಣೆಯಲ್ಲಿ ಗೆಲುವು-ಸೋಲು ಸಹಜ ಎಂದ ಅವರು, ಯಾವುದೇ ಕಾರ ಣಕ್ಕೂ ಮೈತ್ರಿ ಸರ್ಕಾರ ಪತನವಾಗುವು ದಿಲ್ಲ. ಕುಮಾರಸ್ವಾಮಿಯವರೇ ಮುಖ್ಯ ಮಂತ್ರಿಯಾಗಿ ಮುಂದುವರೆ ಯಲಿದ್ದಾರೆ. ಆದ್ದರಿಂದ ನಮ್ಮ ಯಾವುದೇ ಶಾಸಕರು ಬಿಜೆಪಿಯ ಕುತಂತ್ರಕ್ಕೆ ಬಲಿಯಾಗಬಾರದು ಎಂದು ಅವರು ಹೇಳಿದ್ದಾರೆ.

ಸಿಎಂ-ಸಿದ್ದರಾಮಯ್ಯ ಭೇಟಿ: ಇಂದು ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರನ್ನು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರವನ್ನು ಅಸ್ಥಿರ ಗೊಳಿಸುವ ಪ್ರಯತ್ನ ನಡೆಸುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಮಾಡಬೇಕಾಗಿರುವ ಕಾರ್ಯಗಳ ಬಗ್ಗೆ ಉಭಯ ಮುಖಂಡರು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.

Translate »