ಮುಂಬೈ ಚೆ ರಾಜೆ ತಂಡಕ್ಕೆ ಜಯ
ಮೈಸೂರು

ಮುಂಬೈ ಚೆ ರಾಜೆ ತಂಡಕ್ಕೆ ಜಯ

May 26, 2019

ಮೈಸೂರು: ಮೈಸೂರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಮುಂಬೈ ಚೆ ರಾಜೆ ತಂಡವು ಚೆನ್ನೈ ಚಾಲೆಂಜರ್ಸ್ ತಂಡದ ವಿರುದ್ಧ 4 ಅಂಕಗಳ ಗೆಲುವು ಸಾಧಿಸಿತು.

ಇಂಡೋ ಇಂಟರ್‍ನ್ಯಾಷನಲ್ ಕಬಡ್ಡಿ ಫೆಡರೇಷನ್ ಮತ್ತು ಡಿ ಸ್ಪೋಟ್ರ್ಸ್ ಸಹ ಯೋಗದೊಂದಿಗೆ ಆಯೋಜಿಸಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿ ಯರ್ ಕಬಡ್ಡಿ ಪಂದ್ಯಾವಳಿಯ ಶನಿವಾರ ನಡೆದ ಪಂದ್ಯದಲ್ಲಿ ಆರಂಭದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಮುಂಬೈ ಚೆ ರಾಜೆ ತಂಡ ದ್ವಿತೀಯಾರ್ಧದಲ್ಲಿ ಉತ್ತಮ ಆಟ ಪ್ರದರ್ಶಿಸಿ ಚೆÀನ್ನೈ ಚಾಲೆಂಜರ್ಸ್ ತಂಡದ ವಿರುದ್ಧ 4 ಅಂಕಗಳಿಂದ ಗೆಲುವು ಸಾಧಿಸಿತು.

ಆರಂಭದಲ್ಲಿ ಮುಂಬೈ ಚೆ ರಾಜೆ ಮತ್ತು ಚೆನ್ನೈ ಚಾಲೆಂಜರ್ಸ್ ತಂಡಗಳು ಉತ್ತಮ ಆಟ ಪ್ರದರ್ಶಿಸಿ ಮೊದಲ ಸುತ್ತಿನಲ್ಲಿ 7-7 ಅಂಕ ಪಡೆಯುವ ಮೂಲಕ ಸಮಬಲ ಸಾಧಿಸಿದರು. 2ನೇ ಅವಧಿ ಆರಂಭದಲ್ಲಿ ಚೆನ್ನೈ ತಂಡದಲ್ಲಿ ಐವರು ಮತ್ತು ಮುಂಬೈ ತಂಡದಲ್ಲಿ ಮೂವರು ಆಟಗಾರರಿದ್ದು, 2 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, 2ನೇ ಅವಧಿ ಆರಂಭವಾದ ಮೂರೇ ನಿಮಿಷದಲ್ಲಿ ಮುಂಬೈ ಚೆ ರಾಜೆ ತಂಡ ಆಲೌಟ್ ಆಯಿತು.

ನಂತರ ದ್ವಿತೀಯಾರ್ಧದಲ್ಲಿ ಮುಂಬೈ ಚೆ ರಾಜೆ ಮತ್ತು ಚೆನ್ನೈ ಚಾಲೆಂಜರ್ಸ್ ತಂಡದ ಆಟಗಾರರ ನಡುವೆ ತೀವ್ರ ಪೈಪೋಟಿ ನಡೆದು 16ನೇ ನಿಮಿಷಕ್ಕೆ ಚೆನ್ನೈ ಚಾಲೆಂಜರ್ಸ್ ತಂಡ ಆಲೌಟ್ ಆಯಿತು. ಈ ವೇಳೆ ಮುಂಬೈ ಜೆ ರಾಜೆ 32 ಅಂಕ ಗಳಿಸಿದರೆ, ಚೆನ್ನೈ ಚಾಲೆಂಜರ್ಸ್ ತಂಡ 28 ಅಂಕ ಗಳಿಸಿತ್ತು.

ಚೆನ್ನೈ ಚಾಲೆಂಜರ್ಸ್ ಆಟಗಾರರಾದ ಇಳಯರಾಜ 6, ನಮದೇವ್ ಇಸ್ವಲ್ಕರ್ 5, ಆರ್.ವೆಂಕಟೇಶ್ 5, ಸುನೀಲ್ ಕುಮಾರ್ 3, ರಜತ್ ರಾಜು ಬೋಬಡೆ 2, ಸುರೇಶ್ ಕುಮಾರ್ 2, ರಾಜೇಶ್ ಧಿಮನ್ 1 ಅಂಕ ಪಡೆದರೆ, ಮುಂಬೈ ಚೆ ರಾಜೆ ತಂಡದ ಆಟಗಾರರಾದ ಮಹೇಶ್ ಮಗ್ದಮ್ 7, ಎ.ಅರುಲ್ 6, ಮಣಿವೀರ ಕಾಂತ 5, ರಷಿದ್ ಸೈಕ್ 3, ರವಿ ದೇಸ್ವಾಲ್ 2, ಕರ್ಮಿರ್ 2, ದೇವೇಂದ್ರ ಕಾದಮ್ 2, ವಿಜಯ್ ರಾಜ್‍ಪುತ್ 1 ಅಂಕ ಪಡೆದುಕೊಂಡರು.

Translate »