ಈ ಬಾರಿಯಾದರೂ ಅಭಿವೃದ್ಧಿಯತ್ತ ಗಮನ ಕೊಡಲಿ: ಜಿ.ಟಿ.ದೇವೇಗೌಡ ಸಲಹೆ
ಮೈಸೂರು

ಈ ಬಾರಿಯಾದರೂ ಅಭಿವೃದ್ಧಿಯತ್ತ ಗಮನ ಕೊಡಲಿ: ಜಿ.ಟಿ.ದೇವೇಗೌಡ ಸಲಹೆ

May 26, 2019

ಬೆಂಗಳೂರು: ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟ್ರೈಕ್‍ಗಳನ್ನು ಮುಂದಿಟ್ಟು ಕೊಂಡು ಚುನಾವಣೆಗಳನ್ನು ನಡೆಸಿ, ಕೇಂದ್ರದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ ಈ ಬಾರಿ ಯಾದರೂ ಅಭಿವೃದ್ಧಿಯತ್ತ ಗಮನ ಕೊಡಲಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಲಹೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಮೋದಿ ಈ ಮೊದಲು ಭರವಸೆ ಕೊಟ್ಟಂತೆ 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರ ಖಾತೆಗೆ ಹಾಕಲಿ. ರಾಜ್ಯದ ಬರ ಪರಿಸ್ಥಿತಿಗೆ, ಕುಡಿ ಯುವ ನೀರಿಗೆ ಸರಕಾರ ಕಳುಹಿಸಿರುವ ಪ್ರಸ್ತಾವನೆಯಂತೆ ಹಣ ನೀಡಲಿ. ರೈತರ ಕಡೆ ಗಮನ ಕೊಡಲಿ ಎಂದು ಹೇಳಿದರು.

ಲೋಕಸಭಾ ಚುನಾವಣಾ ಫಲಿತಾಂಶ ನಮಗೆ ದೊಡ್ಡ ಪಾಠ ಆಗಿದೆ. ಕೆಲವು ವಿಷಯಗಳನ್ನು ನಾನು ನೇರವಾಗಿ ಹೇಳು ವಂತಿಲ್ಲ. ಮಾತನಾಡಿದರೆ ವಿವಾದಗಳಾಗುತ್ತವೆ. ರಾಜ್ಯದ ನಾಯಕರು ರಾಜಕಾರ ಣದ ಬಗ್ಗೆ ಯಾವ ಸಚಿ ವರೂ ಮಾತನಾಡ ಬಾರದು. ಕೇವಲ ಇಲಾಖೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡಬೇಕು ಎಂದು ಸೂಚನೆ ನೀಡಲಾಗಿದೆ. ಅದ ರಂತೆ ನಡೆದುಕೊಳ್ಳುತ್ತೇವೆ ಎಂದರು.

ಲೋಕಸಭೆ ಚುನಾವಣೆಯ ಫಲಿ ತಾಂಶದ ಬಳಿಕ ರಾಜ್ಯದ ಮುಂದಿನ ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವಂತೆ ಸಮ್ಮಿಶ್ರ ಸರಕಾರದ ಉಭಯ ಪಕ್ಷಗಳಿಗೂ ಚಾಟಿ ಬೀಸಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನಾವು ಒಂದು ವರ್ಷ ಆಡಳಿತ ಪೂರೈಸಿದ್ದೇವೆ, ಉಳಿದ ಅವಧಿಯಲ್ಲಿ ಅಭಿವೃದ್ಧಿ ಯತ್ತ ಗಮನ ಕೊಡಲಿ ಎಂಬುದು ಜನರ ತೀರ್ಪಾ ಗಿದೆ ಎಂದು ಹೇಳಿದರು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿರುವುದಕ್ಕೆ ಅವರೂ ಬೇಸರಗೊಂಡಿಲ್ಲ. ಸೋಲೇ ಗೆಲುವಿನ ಸೋಪಾನ ಎಂದು ಚಿಕ್ಕ ವಯಸ್ಸಿನಲ್ಲೇ ಅರ್ಥ ಮಾಡಿಕೊಂಡು ಫಲಿತಾಂಶವನ್ನು ಸ್ಫೂರ್ತಿಯಾಗಿ ತೆಗೆದು ಕೊಂಡಿದ್ದಾರೆ. ಹಾಸನದಲ್ಲಿ ಜಯಗಳಿಸಿ ರುವ ಪ್ರಜ್ವಲ್ ರೇವಣ್ಣ ದೇವೇಗೌಡರಿ ಗಾಗಿ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿ ದ್ದರು. ಆದರೆ ಅದನ್ನು ದೇವೇಗೌಡರು ತಿರಸ್ಕರಿಸಿದ್ದಾರೆ. ನನ್ನ ಉತ್ತರಾಧಿಕಾರಿಯಾಗಿ ಹಾಸನದಲ್ಲಿ ಕೆಲಸ ಮಾಡು ಎಂದು ಆಶೀರ್ವದಿಸಿದ್ದಾರೆ ಎಂದು ತಿಳಿಸಿದರು.

ಜನರು ಕೊಟ್ಟ ಚಾಟಿಯೇಟು: ಲೋಕಸಭಾ ಚುನಾವಣೆಯ ಫಲಿತಾಂಶ ಜನರು ಕೊಟ್ಟ ಚಾಟಿಯೇಟಾಗಿದೆ. ಇದರಲ್ಲಿ ಜನರ ತೀರ್ಪು ಅಂತಿಮ. ಮೈತ್ರಿ ಅಭ್ಯರ್ಥಿಗಳಿಗೆ ಸೋಲಾಗಿರುವುದು, ಒಂದು ವರ್ಷದ ಆಡಳಿತಕ್ಕೆ ಜನರು ನೀಡಿದ ಚಾಟಿಯೇಟಾಗಿದೆ. ಇನ್ನು ನಾಲ್ಕು ವರ್ಷ ಉತ್ತಮ ಕೆಲಸ ಮಾಡಿ ಅನ್ನುವ ಉತ್ತರ ಇದಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದ್ದು ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದರು.

Translate »