ಗಣಪತಿ ಸಚ್ಚಿದಾನಂದ ಶ್ರೀಗಳ 77ನೇ ವರ್ಧಂತ್ಯುತ್ಸವ
ಮೈಸೂರು

ಗಣಪತಿ ಸಚ್ಚಿದಾನಂದ ಶ್ರೀಗಳ 77ನೇ ವರ್ಧಂತ್ಯುತ್ಸವ

May 26, 2019

ಮೈಸೂರು: ಮೈಸೂರಿನ ಊಟಿ ರಸ್ತೆಯಲ್ಲಿರುವ ಅವ ಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾ ನಂದ ಆಶ್ರಮದಲ್ಲಿ ಶನಿವಾರ ವಿಕಲಚೇ ತನರಿಗೆ ವಿವಿಧ ಸಹಾಯ ವಸ್ತುಗಳ ವಿತರಣೆ ಮತ್ತು ದತ್ತಪೀಠ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರ 77ನೇ ವರ್ಧಂತ್ಯುತ್ಸವ, ನಾದ ಮಂಟಪದ 21ನೇ ವಾರ್ಷಿಕೋತ್ಸವ ಹಾಗೂ ಶ್ರೀ ದತ್ತವೆಂಕಟೇಶ್ವರ ಸ್ವಾಮಿ ಕ್ಷೇತ್ರದ 20ನೇ ಬ್ರಹ್ಮೋತ್ಸವ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು 5 ಮಂದಿ ವಯಸ್ಕರರಿಗೆ ಮೊಣಕೈ ಊರು ಗೋಲು, 20 ಮಂದಿಗೆ ವ್ಹೀಲ್ ಚೇರ್ಸ್, 11 ಮಂದಿಗೆ ಹೊಲಿಗೆ ಯಂತ್ರ ಹಾಗೂ 10 ಮಕ್ಕಳಿಗೆ ಸ್ಟ್ಯಾಂಡಿಗ್ ಫ್ರೇಮ್, 51 ಮಕ್ಕಳಿಗೆ ಎಂ.ಆರ್.ಕಿಟ್ ಹಾಗೂ 20 ಮಕ್ಕಳಿಗೆ ಸಿ.ಪಿ.ಚೇರ್ ಒಟ್ಟು 162 ಮಂದಿ ವಿಕಲಚೇತ ನರಿಗೆ ಸಹಾಯ ವಸ್ತುಗಳನ್ನು ವಿತರಿಸಿದರು.

ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜಮಂಡ್ರಿಯ ಗುಳ್ಲಪಲ್ಲಿ ಸೀತಾರಾಮ ಚಂದ್ರ ಘನಪಾಠಿ(ಯಜುರ್ವೇದ) ಅವರಿಗೆ `ವೇದನಿಧಿ’, ಗೋವಾದ ಡಾ.ದೇವದತ್ತ ಪಾಟೀಲ್(ತರ್ಕ,ಮೀಮಾಂಸೆ) ಅವರಿಗೆ `ಶಾಸ್ತ್ರನಿಧಿ’, ಚೆನ್ನೈನ ವಿದ್ವಾನ್ ಕಾರೈಕುಡಿ ಆರ್.ಮಣಿ(ಮೃದಂಗ) ಅವರಿಗೆ `ನಾದನಿಧಿ’, ಮತ್ತೂರಿನ ಡಾ.ಸನತ್ ಕುಮಾರ್ ಶರ್ಮ(ಶೌತ್ರ ಮತ್ತು ಗಮಕ), ಚೆನ್ನೈನ ವಿದ್ವಾನ್ ಅಭಿಷೇಕ್ ರಘುರಾಮ್ (ಗಾಯನ) ಮತ್ತು ಬೆಂಗಳೂರಿನ ವಿದ್ವಾನ್ ಗಿರಿಧರ್ ಉಡುಪ(ಘಟಂ) ಅವರಿಗೆ `ಆಸ್ಥಾನ ವಿದ್ವಾನ್’, ಹೈದ್ರಾಬಾದ್‍ನ ಕಲ್ಯಾಣ್ ದಾಸ್ ಮತ್ತು ಬುರ್ರಾ ಭಾಸ್ಕರ್ ದತ್ ಅವರಿಗೆ `ದತ್ತಪೀಠ ಬಂಧು’, ಮೈಸೂರಿನ ಪುಷ್ಪ ಅಯ್ಯಂಗಾರ್ ಅವರಿಗೆ `ಜಯಲಕ್ಷ್ಮಿ ಪುರಸ್ಕಾರ’, ಹೈದ್ರಾಬಾದ್‍ನ ಭಕ್ತಿ ಟಿವಿ ಸ್ಥಾಪಕ ನರೇಂದ್ರ ಚೌದರಿ ಅವರಿಗೆ `ವಿಶ್ವಹಿಂದೂ’, ಮೈಸೂರಿನ ಡಾ.ಹೆಚ್.ಸುಭಾಷ್ ಅವರಿಗೆ `ಪ್ರಾಣಿಬಂಧು’ ಹಾಗೂ ಮುಂಬೈನ ಜ್ಯೋತಿ ಎನ್.ಪರೇಖ್ ಅವರಿಗೆ `ಸಸ್ಯಬಂಧು’ ಪ್ರಶಸ್ತಿ ನೀಡಿದರು.

ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ವಿಕಲಚೇತನರಿಗೆ ಸಹಾಯ ಮಾಡುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಅವರಿಗೆ ಸಹಾಯ ಮಾಡಿದರೆ ನಿಜವಾದ ಚೈತನ್ಯಾರ್ಚನೆ ಆಗುತ್ತದೆ. ದೇವರೂ ಕೂಡ ಸಂತೋಷ ಪಡುತ್ತಾನೆ. ದೇವರ ಕೃಪೆ ಇದ್ದರೆ ಮಾತು ಬರದವನು ಮಾತನಾಡುತ್ತಾನೆ. ನಡೆ ಯಲು ಆಗದವನು ನಡೆದಾಡುತ್ತಾನೆ. ಹಾಗಾಗಿ ಜನರು ಸಹಾಯ ಮಾಡಲಿಲ್ಲ ಎನ್ನುವ ಬದಲಾಗಿ ಪರಮಾತ್ಮನನ್ನು ಸ್ಮರಿಸಿ ಎಂದು ಸಲಹೆ ನೀಡಿದರು. ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

Translate »