ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಪ್ರಚಾರ ಪೋಸ್ಟರ್ ಬಿಡುಗಡೆ
ಮೈಸೂರು

ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಪ್ರಚಾರ ಪೋಸ್ಟರ್ ಬಿಡುಗಡೆ

October 6, 2018

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ಡಿಸೆಂಬರ್ 15 ಹಾಗೂ 16 ನಡೆಯಲಿರುವ ಬೃಹತ್ ಬ್ರಾಹ್ಮಣ ಸಮಾವೇಶದ ಪ್ರಚಾರ ಸಮಿತಿಯ ಪೆÇೀಸ್ಟರನ್ನು ಶ್ರೀ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಶ್ರೀಗಳು ಆಶ್ರಮ ದಲ್ಲಿ ಬಿಡುಗಡೆಗೊಳಿಸಿ, ಆಶೀರ್ವಾದ ಮಾಡಿದರು.
ಈ ಬ್ರಾಹ್ಮಣ ಸಮಾವೇಶವನ್ನು ಯಶಸ್ವಿಗೊಳಿಸ ಬೇಕು. ಜೊತೆಗೆ ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಂಬ ಭಾವನೆಯಿಂದ ಭಾಗವಹಿಸಬೇಕು ಆಗ ಮಾತ್ರ ಸಮಾಜದಲ್ಲಿ ಸಾಮರಸ್ಯ ಉಂಟಾಗು ತ್ತದೆ. ದತ್ತ ಕ್ಷೇತ್ರವು ಅತ್ಯಂತ ಶುಚಿಯಾದ, ಪವಿತ್ರ ವಾದ ಲಕ್ಷ್ಮಿ ಆವಾಸಸ್ಥಾನವಾದ್ದರಿಂದ ಶುಚಿತ್ವಕ್ಕೆ ಮೂಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ಮಾತನಾಡಿ, ನಮ್ಮ ಬ್ರಾಹ್ಮಣ ಸಮುದಾಯ ಸಂಘಟನೆಯ ವಿಚಾರ ದಲ್ಲಿ ಬಲಿಷ್ಠವಾಗಿ ಬೇರೂರಬೇಕಾದರೆ ಎಲ್ಲಾ ವಿಭಾಗದಲ್ಲಿ ದುಡಿಯುತ್ತಿರುವ ಬ್ರಾಹ್ಮಣರ ಪಾತ್ರ ತುಂಬಾ ಅವಶ್ಯಕವಾಗಿದೆ, ಈ ನಿಟ್ಟಿನಲ್ಲಿ ಭವಿಷ್ಯದ ಪರಿಕಲ್ಪನೆಯಿಂದ ಮೈಸೂರಿನಲ್ಲಿ ಡಿಸೆಂಬರ್ 15 ಮತ್ತು 16ರಂದು ಗಣಪತಿ ಸಚ್ಚಿದಾನಂದ ಆಶ್ರಮ ದಲ್ಲಿ ಬ್ರಾಹ್ಮಣ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ.

ಪ್ರತಿಯೊಂದು ತಾಲೂಕು ಮತ್ತು ಜಿಲ್ಲೆಯಿಂದ ಆಗಮಿಸುವ ಬ್ರಾಹ್ಮಣ ಸಂಘಟಿತರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಬ್ರಾಹ್ಮಣರ ಶ್ರೇಯೋ ಭಿವೃದ್ಧಿಗಾಗಿ ವಿವಿಧ ಗೋಷ್ಠಿಗಳು ನಡೆಯಲಿದ್ದು ಬ್ರಾಹ್ಮಣರು ನಡೆದು ಬಂದ ದಾರಿ, ಕುಲಕಸು ಬನ್ನು ಕಾಪಾಡುವಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಹೀಗೆ ವಿವಿಧ ಕ್ಷೇತ್ರದಲ್ಲಿರುವವರನ್ನು ಗುರುತಿಸಿ ಮುಖ್ಯವಾಹಿನಿಗೆ ತಂದು ಅವರನ್ನು ಪೆÇೀಷಿಸುವುದೇ ಸಮಾವೇಶದ ಮುಖ್ಯ ಅಂಶವಾಗಿದ್ದು, ಸಮಾವೇಶದಲ್ಲಿ ತೆಗೆದು ಕೊಂಡ ನಿರ್ಣಯಗಳನು ಬ್ರಾಹ್ಮಣರು ಕೈಗೊ ಳ್ಳುವ ಮೂಲಕ ಬದಲಾವಣೆಯ ಮುನ್ನುಡಿ ಬರೆಯಲಿದ್ದಾರೆ.

ಶೋಭಾ ಯಾತ್ರೆಯ ಮೂಲಕ ಸಂಘಟನೆಯ ಶಕ್ತಿ ಪ್ರದರ್ಶನ ಮತ್ತು ಸರ್ಕಾರ ದಿಂದ ಬ್ರಾಹ್ಮಣ ಸಮುದಾಯಕ್ಕೆ ಬ್ರಾಹ್ಮಣರ ಪ್ರಾಧಿಕಾರ ರಚನೆಯಾಗಿರುವು ದರಿಂದ ಮುಖ್ಯಮಂತ್ರಿಗಳಿಗೆ ಸನ್ಮಾನ ಸಮಾರಂಭ ನಡೆಸಲು ತೀರ್ಮಾ ನಿಸಲಾಗಿದೆ. ಅಲ್ಲದೇ ಚುನಾಯಿತ ವಿಪ್ರ ಶಾಸಕರು ಮತ್ತು ನಗರ ಪಾಲಿಕೆ ಸದಸ್ಯರುಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಸಲು ತೀರ್ಮಾ ನಿಸಲಾಗಿದೆ. ಆದ್ದರಿಂದ ಮನೆಗೊಬ್ಬರಂತೆ ವಿಪ್ರಬಾಂಧವರು ಸಮಾವೇಶ ದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸ ಬೇಕೆಂದು ಕರೆ ನೀಡಿದರು. ಸಮಾವೇಶದಲ್ಲಿ 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ನಂತರ ಮಾತನಾಡಿದ ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಮೈಸೂರಿನಲ್ಲಿ ಇಂತಹ ಬೃಹತ್ ಸಮಾವೇಶ ನಡೆದು 14 ವರ್ಷಗಳಾಗಿವೆ. ಈಗ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಡೆಸುತ್ತಿ ರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದ್ದು, ಸಮಾವೇಶವು ಯಶಸ್ವಿಯಾಗಿ ನಡೆಯಲು ಎಲ್ಲ ಜನಪ್ರತಿನಿಧಿಗಳು, ವಿಪ್ರ ಶಾಸಕರು ,ಸ್ಥಳೀಯ ಮುಖಂ ಡರು, ಯುವಕರು, ಮಹಿಳಾ ಸಂಘದ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಎಂ.ಸಿ. ರಮೇಶ್, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರಾದ ಗೋಪಾಲರಾವ್, ಬ್ರಾಹ್ಮಣ ಯುವ ಮುಖಂಡರಾದ ಕಡಕೊಳ ಜಗದೀಶ್, ಅಜಯ್ ರಾವ್, ಹರೀಶ್ ಭಾರದ್ವಾಜ್, ರಾಜಗೋಪಾಲ್, ಪ್ರದೀಪ್, ವಿಪ್ರ ಜಾಗೃತಿ ವೇದಿಕೆಯ ಮುಳ್ಳೂರು ಸುರೇಶ್, ಪುರಾಣಿಕ್,ರಾಧಾಕೃಷ್ಣ, ಬ್ರಾಹ್ಮಣ ಮಹಿಳಾ ಸಂಘಟನೆಯ ಲತಾ ಮೋಹನ್, ಕಾಂತ ರಾಜಗೋಪಾಲ್, ಜ್ಯೋತಿರವಿ ಹಾಜರಿದ್ದರು.ಸಮಾವೇಶದಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಮಾಹಿತಿ ಗಾಗಿ ದೂರವಾಣಿ ಸಂಖ್ಯೆ 9945266 832ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

Translate »