ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದಿನಿಂದ 9ರವರೆಗೆ ವಿಶ್ವಶಾಂತಿಗಾಗಿ ವೈರಾಜ ಮಹಾ ನಾರಾಯಣ ಯಜ್ಞ
ಮೈಸೂರು

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದಿನಿಂದ 9ರವರೆಗೆ ವಿಶ್ವಶಾಂತಿಗಾಗಿ ವೈರಾಜ ಮಹಾ ನಾರಾಯಣ ಯಜ್ಞ

June 4, 2018

ಮೈಸೂರು:  ವಿಶ್ವಶಾಂತಿ ಹಾಗೂ ಜನತೆಯ ಕ್ಷೇಮಾಭಿವೃದ್ಧಿಗಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜೂ.4ರಿಂದ 9ರವರೆಗೆ ವೈರಾಜ ಮಹಾ ನಾರಾಯಣ ಯಜ್ಞ ನಡೆಸಲಾಗುತ್ತಿದೆ.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಆಶ್ರಮದ ಪೌಂಡರೀಕ ರಂಗ ಸ್ಥಳದಲ್ಲಿ ನಡೆಯುವ ಈ ಯಜ್ಞದಲ್ಲಿ 400 ವೇದ ಪಂಡಿತರು ಪುರುಷ ಸೂಕ್ತವನ್ನು ಒಂದು ಲಕ್ಷ ಬಾರಿ ನಾಲ್ಕು ವೇದಗಳಿಂದ ಹಾಗೂ ನಾರಾಯಣ ಅಷ್ಟಾಕ್ಷರ ಮಂತ್ರ, ಸುದರ್ಶನ ಮಂತ್ರ, ನರಸಿಂಹ ಮಂತ್ರಗಳನ್ನು ಪಠಿಸುತ್ತಾರೆ. ಜೊತೆಗೆ ರಾಮಾಯಣ, ಭಾಗವತ, ಭಗವದ್ಗೀತೆ, ವಿಷ್ಣು ಪುರಾಣ, ವಿಷ್ಣು ಸಹಸ್ರನಾಮಗಳ ಪಾರಾಯಣವೂ ನಡೆಯಲಿದೆ.

ವಿಷ್ಣುವಿನ (ನಾರಾಯಣ) ದೈವತ್ವ ಅವತಾರಗಳನ್ನು ವೇದಗಳಲ್ಲಿ ತಿಳಿಸಲಾಗಿದ್ದು, ನಾಲ್ಕು ವೇದಗಳಲ್ಲೂ ನೂರಾರು ಮಂತ್ರಗಳು ದೈವದ ಭವ್ಯತೆಯನ್ನು ವಣ ್ಸಲಾಗಿದೆ. ಪಂಡಿತರು ಒಟ್ಟುಗೂಡಿ ಧ್ಯಾನಿಸುತ್ತಾ ಮಂತ್ರಗಳನ್ನು ಪಠಿಸಿ, ಮಹಾಯಜ್ಞದಲ್ಲಿ ಆಹುತಿಯನ್ನು ಕೊಡಲಿದ್ದಾರೆ.

ಯಜ್ಞದ ಕಾರ್ಯಕ್ರಮಗಳು ಪ್ರತಿದಿನ ಬೆಳಿಗ್ಗೆ 7ರಿಂದ ಮದ್ಯಾಹ್ನ 12 ಮತ್ತು ಸಂಜೆ 3ರಿಂದ ಸಂಜೆ 7ರವರೆಗೆ ನಡೆಯಲಿದೆ. ಜೂ.4ರಂದು ಬೆಳಿಗ್ಗೆ 10ಕ್ಕೆ ಆಶ್ರಮದ ವೇದ ಪಾಠಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 25ನೇ ವೇದ ಪರೀಕ್ಷೆಗಳ ಉದ್ಘಾಟನೆ. ಜೂ.6ರಂದು 12ನೇ ವಾರ್ಷಿಕ ವೇದ ಸಭೆ, ಜೂ.8ರಂದು ಸಂಜೆ 3 ಗಂಟೆಗೆ ವೇದ ಪರೀಕ್ಷೆಗಳ ಘಟಿಕೋತ್ಸವ. ಜೂ.9ರಂದು ಮಧ್ಯಾಹ್ನ 12 ಗಂಟೆಗೆ ವೈರಾಜ ಮಹಾ ನಾರಾಯಣ ಯಜ್ಞದ ಪೂರ್ಣಾಹುತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂ.0821-2486486 ಅಥವಾ ಮೊ- 9448390946 ಸಂಪರ್ಕಿಸುವಂತೆ ಆಶ್ರಮದ ಪ್ರಕಟಣೆ ತಿಳಿಸಿದೆ.

Translate »