ಮಂಡ್ಯ: ಜೀವನದಿ ಕಾವೇರಿ ನದಿಯ ಸ್ವಚ್ಛತೆಗೆ ಶ್ರೀರಂಗಪಟ್ಟಣದಲ್ಲಿಂದು ಚಾಲನೆ ನೀಡಲಾಯಿತು. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ವಿವಿಧ ಸಂಘಟನೆ ಗಳ 300ಕ್ಕೂ ಹೆಚ್ಚು ಜನರು ಕಾವೇರಿ ನದಿಗಿಳಿದು ಬೆಳೆದಿದ್ದ ಜೊಂಡು, ಕಸ, ಕಡ್ಡಿಯನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾರ್ಯ ನಡೆಸಿದರು.ಪಟ್ಟಣದ ಉತ್ತರ ಕಾವೇರಿ ಸೇತುವೆಯ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಭಾನುವಾರ ಮುಂಜಾನೆ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಅವರು ಕಾವೇರಿ ನದಿ ಸ್ವಚ್ಛತೆಗೆ ಚಾಲನೆ ನೀಡಿದರು.
ಶ್ರೀರಂಗಪಟ್ಟಣ ನಾಗರಿಕ ಹಿತರಕ್ಷಣಾ ಸಮಿತಿ, ಅಭಿನವ ಭಾರತ್, ಚೈತನ್ಯ ಪಡೆ, ಮೀನುಗಾರರ ಸಂಘ, ಪುರಸಭೆ ಸದಸ್ಯರು, ವಕೀಲರು ಸೇರಿದಂತೆ ಹಲವು ಸಂಘ ಸಂಸ್ಥೆಯ ಒಟ್ಟು 300ಕ್ಕೂ ಹೆಚ್ಚು ಜನರು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ರವರೆಗೆ ಸ್ವಚ್ಛತೆ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿ ಜೀವನದಿ ಕಾವೇರಿಯನ್ನು ಶುಚಿಗೊಳಿಸಿದರು.
ಸ್ಥಳೀಯ ಪುರಸಭೆ ವತಿಯಿಂದ 2 ಜೆಸಿಬಿ ಹಾಗೂ 2 ಟ್ರಾಕ್ಟರ್‍ಗಳನ್ನು ಸಿಬ್ಬಂದಿ ಗಳೊಂದಿಗೆ ಪಡೆಯಲಾಗಿತ್ತು. ಸಾರ್ವಜನಿಕ ಹಿತರಕ್ಷಾ ಸಮಿತಿ ವತಿಯಿಂದ ಸಂಗ್ರಹಿ ಸಿದ್ದ 10 ತೆಪ್ಪ (ದೋಣ ), 64 ಲೈಫ್ ಜಾಕೆಟ್, ಹ್ಯಾಂಡ್ ಗ್ಲೌಸ್, ಕುಡುಗೋಲು, ಮಚ್ಚು, ಗುದ್ದಲಿ, ಪಿಕಾಸಿ ಸೇರಿದಂತೆ ಇತರ ಪರಿಕರ ಗಳನ್ನು ಹಿಡಿದು ನದಿಯಲ್ಲಿ ಇಳಿದ ಯುವ ಜನರು ಹಾಗೂ ವಿದ್ಯಾರ್ಥಿಗಳು ಉರಿಬಿಸಿಲನ್ನು ಲೆಕ್ಕಿಸದೇ ಮಧ್ಯಾಹ್ನದವ ರೆಗೆ ಬೆಳೆದಿದ್ದ ಜೊಂಡು ಹಾಗೂ ಕಳೆ ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿದರು. ಕಾವೇರಿ ನದಿಯಲ್ಲಿ 1 ಕಿಲೋಮೀಟರ್ ನಷ್ಟು ಉದ್ದ ಜೋಂಡು ಬೆಳೆದಿದ್ದು, ಭಾನು ವಾರ 300 ಮೀಟರ್ ಉದ್ದದಷ್ಟು ಕಳೆ ಯನ್ನು ಕಿತ್ತು ಸದಸ್ಯರು ಹಸನು ಮಾಡಿ ದ್ದಾರೆ. ಪಟ್ಟಣದ ಹೋಟೆಲ್ ಮಾಲೀಕರು, ಕಾರ್ಖಾನೆ, ಸಂಘ-ಸಂಸ್ಥೆ ಸೇರಿದಂತೆ ಹಲವಾರು ದಾನಿಗಳು ಸ್ವಚ್ಛತೆಯಲ್ಲಿ ತೊಡ ಗಿದ್ದವರಿಗೆ ಮಜ್ಜಿಗೆ, ತಿಂಡಿ, ಮಧ್ಯಾಹ್ನದ ಊಟೋಪಚಾರಗಳನ್ನು ವಹಿಸಿಕೊಂಡಿದ್ದರು.
ಸ್ವಚ್ಛತಾ ಕಾರ್ಯದಲ್ಲಿ ಯುವಕ ರೊಂದಿಗೆ ತೊಡಗಿ ಬಳಿಕ ಮಾತನಾಡಿದ ಬಿಜೆಪಿ ಮುಖಂಡ ಕೆ.ಎಸ್.ನಂಜುಂಡೇ ಗೌಡ, ಹಲವು ಮೂಢ ನಂಬಿಕೆಯಿಂದ ಬೆಂಗಳೂರು ಹಾಗೂ ಮೈಸೂರು ನಗರ ಗಳಿಗೆ ತೆರಳುವ ಸಂದರ್ಭದಲ್ಲಿ ತಿಳುವಳಿಕೆ ಇರುವ ಜನರೇ ಸೇತುವೆ ಮೇಲೆ ಕಾರು ನಿಲ್ಲಿಸಿ ಹೂ ತುಂಬಿದ ಪ್ಲಾಸ್ಟಿಕ್ ಕವರ್, ಬಾಟಲಿಗಳು, ಹಳೆಯ ಬಟ್ಟೆಗಳು ಸೇರಿ ದಂತೆ ಇತರ ವಸ್ತುಗಳನ್ನು ನದಿಯಲ್ಲಿ ಹಾಕುತ್ತಿದ್ದು, ಕಾವೇರಿ ನದಿ ಮಲಿನ ಆಗುವುದಕ್ಕೆ ಇದು ಕೂಡ ಕಾರಣವಾಗಿದೆ. ಮುಖ್ಯವಾಗಿ ನಗರ, ಪಟ್ಟಣ ಹಾಗೂ ಹಳ್ಳಿ ಗಳಲ್ಲಿ ವಾಸಿಸುವ ಜನರು ಉಪಯೋಗಿಸಿ ಬಳಿಕ ಬಿಡುವಂತಹ ನೀರನ್ನು ಚರಂಡಿ ಗಳ ಮೂಲಕ ನೇರವಾಗಿ ನದಿಗೆ ಬಿಡುವು ದರಿಂದ ಕಾವೇರಿ ನದಿ ಈ ರೀತಿ ಮಲಿನ ಗೊಂಡಿದೆ. ಇಲ್ಲಿ ಹರಿದು ಹೋಗುವ ಈ ನೀರನ್ನೇ ಬೆಂಗಳೂರು, ಮಂಡ್ಯ ಜನರು ಕುಡಿಯುತ್ತಿದ್ದು, ಇದನ್ನು ಅರಿತುಕೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾವೇರಿ ನದಿ ಉಳಿಸಿ ಎಂಬ ಯೋಜನೆ ಯಡಿ ಸ್ವಚ್ಛಗೊಳಿಸುವುದರಲ್ಲಿ ವಿಶೇಷ ಆದ್ಯತೆ ಕೊಟ್ಟು ನದಿ ಉಳಿಸಿಕೊಳ್ಳಬೇಕು.
ಅಭಿನವ್ ಭಾರತ ತಂಡದ ಮುಖ್ಯಸ್ಥ ಲಕ್ಷ್ಮೀಶ್ ಮಾತನಾಡಿ, ನದಿ ಸ್ವಚ್ಛತೆಗಾಗಿ ಪಟ್ಟಣಕ್ಕೆ ಆಗಮಿಸಿದ್ದವರನ್ನು ಪಶ್ಚಿಮ ಕಾವೇರಿ, ದಕ್ಷಿಣ ಕಾವೇರಿ, ಉತ್ತರ ಕಾವೇರಿ ಹಾಗೂ ಪೂರ್ವ ಕಾವೇರಿ ಹೀಗೆ ಒಟ್ಟು 4 ಭಾಗಗಳಾನ್ನಾಗಿ ವಿಂಗಡಿಸಲಾಗಿದೆ. ನುರಿತ ಈಜುಗಾರರನ್ನು ಪೂರ್ವ ಕಾವೇರಿ ತಂಡಕ್ಕೆ ನಿಯೋಜಿಸಿ ನದಿ ಸ್ವಚ್ಛತಾ ಕಾರ್ಯಕ್ಕೆ ಕಳುಹಿಸಲಾಗಿದೆ. ಭಾನುವಾರ ನಡೆದ ಮೊದಲ ದಿನದ ಸ್ವಚ್ಛತಾ ಕಾರ್ಯದಲ್ಲಿ ಯಶಸ್ಸು ಕಂಡಿದ್ದು, ಪುನಃ ಮುಂದಿನ ಭಾನುವಾರ ನಡೆಯಲಿರುವ ನದಿ ಸ್ವಚ್ಛತೆಗೆ ಮತ್ತಷ್ಟು ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರು ಬರುವ ನಿರೀಕ್ಷೆ ಇದೆ. ಪಟ್ಟಣದ ಸ್ನಾನ ಘಟ್ಟದಿಂದ ಹಿಡಿದು ಗಂಜಾಂನ ಶ್ರೀ ನಿಮಿಷಾಂಬ ದೇವಾಲಯದ ವರೆಗೂ ಕಾವೇರಿ ನದಿ ಸ್ವಚ್ಛತಾ ಕಾರ್ಯ ನಡೆಸುವ ಸಂಕಲ್ಪ ತೊಟ್ಟಿದ್ದು ಇದಕ್ಕಾಗಿ ಮತ್ತಷ್ಟು ಜನರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮೂಲಕ ಕೋರಿದ್ದಾರೆ.