ಹೊನಗಾನಹಳ್ಳಿ ಗ್ರಾಮಸ್ಥರಿಂದ ಅಬಕಾರಿ ಕಚೇರಿಗೆ ಮುತ್ತಿಗೆ
ಮಂಡ್ಯ

ಹೊನಗಾನಹಳ್ಳಿ ಗ್ರಾಮಸ್ಥರಿಂದ ಅಬಕಾರಿ ಕಚೇರಿಗೆ ಮುತ್ತಿಗೆ

June 4, 2018

ಮಂಡ್ಯ: ಮದ್ಯದ ಅಂಗಡಿ ತೆರವುಗೊಳಿಸಬೇಕೆಂದು ಆಗ್ರಹಿಸಿ ಪಾಂಡವಪುರ ತಾಲೂಕಿನ ಹೊನಗನಹಳ್ಳಿ ಗ್ರಾಮಸ್ಥರು ನಗರದ ಅಬಕಾರಿ ಇಲಾಖೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಮಹಿಳೆಯರೊಂದಿಗೆ ಬೆಳಿಗ್ಗೆ ನಗರಕ್ಕೆ ಆಗಮಿಸಿದ ಗ್ರಾಮಸ್ಥರು, ಅಬಕಾರಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಗ್ರಾಮದಲ್ಲಿ ಮದ್ಯದಂಗಡಿ ತೆರೆದಿರುವುದನ್ನು ಖಂಡಿಸಿ ಅಬಕಾರಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಕಣ ವೆ ಯೋಗೇಶ್, ಹೊನಗನಹಳ್ಳಿಯಲ್ಲಿ 150 ಮನೆಗಳಿವೆ. ಸಣ್ಣ ಹಳ್ಳಿಯಾಗಿರುವು ದರಿಂದ ಹೆಚ್ಚಿನ ಜನರು ಕೃಷಿ ಹಾಗೂ ಕೂಲಿ ಮಾಡಿಕೊಂಡು ಜೀವನ ನಡೆಸು ತ್ತಿದ್ದಾರೆ. ಗ್ರಾಮದಲ್ಲಿ ಮದ್ಯದಂಗಡಿ ತೆರೆದಿ ರುವುದರಿಂದ ಸಂಜೆಯಾದ ನಂತರ ಯುವಕರು ಸೇರಿದಂತೆ ಕೂಲಿ ಕಾರ್ಮಿಕರು ಪ್ರತಿನಿತ್ಯ ಕುಡಿತದ ದಾಸರಾಗಿ ಕುಟುಂಬ ಬೀದಿ ಪಾಲಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುತ್ತಮುತ್ತಲ ಗ್ರಾಮದ ಕೆಲವು ಮಂದಿ ಮದ್ಯ ಸೇವಿಸಲು ಬಂದು ರಸ್ತೆಯಲ್ಲಿ ಓಡಾಡುವ ಮಹಿಳೆಯರು ಹಾಗೂ ಮಕ್ಕಳಿಗೆ ತೊಂದರೆ ನೀಡುತ್ತಿದ್ಧಾರೆ . ಕೂಡಲೇ ಮದ್ಯದಂಗಡಿಯನ್ನು ಮುಚ್ಚಿಸ ಬೇಕು. ಕಳೆದ ಮಾರ್ಚ್ 12ರಂದು ಪ್ರತಿ ಭಟನೆ ನಡೆಸಿ ಮದ್ಯದಂಗಡಿ ಮುಚ್ಚಿಸು ವಂತೆ ಒತ್ತಾಯಿಸಿz್ದÉವು. ಗ್ರಾಪಂನಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ಮದ್ಯದಂಗಡಿ ತೆರೆಯಲಾಗಿದೆ. ಮದ್ಯ ದಂಗಡಿ ತೆರದ ನಂತರ ಗ್ರಾಮದಲ್ಲಿ ಒಬ್ಬ ಯುವಕನ ಕೊಲೆಯಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮದ್ಯದಂಗಡಿ ಮುಚ್ಚಿಸಬೇಕು ಎಂದು ಆಗ್ರಹಿಸಿದರು. ಇದಕ್ಕೂ ಮುನ್ನ ಜಿ¯್ಲÁಧಿಕಾರಿ ಕಚೇರಿಗೆ ತೆರಳಿ ಜಿ¯್ಲÁಧಿಕಾರಿ ಸಹಾಯಕ ಪ್ರಸನ್ನ ಮೂರ್ತಿಗೆ ಮನವಿ ಸಲ್ಲಿಸಿದ್ದರು. ಪ್ರತಿ ಭಟನೆಯಲ್ಲಿ ಕಣ ವೆ ಯೋಗೇಶ್, ಕಾವ್ಯ, ಜಯಲಕ್ಷ್ಮಿ, ರೂಪಾ, ಜಯಮ್ಮ, ಯಶೋದ, ಶಕುಂತಳ, ಲಕ್ಷ್ಮಿ, ಅಂಕಮ್ಮ, ನಿಂಗಮ್ಮ, ಕಾವ್ಯ, ಪ್ರಮೀಳ, ಸುಂದರಮ್ಮ ಸೇರಿದಂತೆ ಹಲವರಿದ್ದರು.

Translate »