ವಿಷಕುಡಿದು ಆತ್ಮಹತ್ಯೆಗೆ ಯತ್ನಿಸಿದ ನವ ವಿವಾಹಿತ
ಮಂಡ್ಯ

ವಿಷಕುಡಿದು ಆತ್ಮಹತ್ಯೆಗೆ ಯತ್ನಿಸಿದ ನವ ವಿವಾಹಿತ

June 4, 2018

ಮಂಡ್ಯ:  ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲೇ ನವ ವಿವಾಹಿತ ನೋರ್ವ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿ ಸಿರುವÀ ಘಟನೆ ನಗರದ ವಿಶ್ವೇಶ್ವರಯ್ಯ ಪಾರ್ಕ್ ಬಳಿ ನಡೆದಿದೆ. ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ಪ್ರಕಾಶ್(33) ವಿಷಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ ನವ ವಿವಾಹಿತÀ. ವಿವರ: ಪ್ರಕಾಶ್‍ಗೆ 20 ದಿನದ ಹಿಂದೆಯಷ್ಟೇ ಮದುವೆಯಾಗಿತ್ತು. ಮದುವೆ ನಂತರ ಮೇ 21 ರಿಂದ ಮನೆಯಿಂದ ನಾಪತ್ತೆಯಾಗಿದ್ದನು. ನಾಪತ್ತೆಯಾದ ಬಗ್ಗೆ ಮೇ 24 ರಂದು ಬೆಳಕವಾಡಿ ಪೊಲೀಸ್ ಠಾಣೆಗೆ ಪ್ರಕಾಶ್ ಸಂಬಂಧಿಕರು ದೂರು ನೀಡಿದ್ದರು. ಆದರೆ ಇಂದು ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪಾರ್ಕ್‍ನಲ್ಲಿ ವಿಷ ಸೇವಿಸಿದ್ದಾನೆ. ವಿಷ ಸೇವಿಸಿ ಅಸ್ವಸ್ಥನಾಗಿ ನರಳಾಡುತ್ತಿದ್ದ ಪ್ರಕಾಶ್‍ನನ್ನು ಕಂಡ ಸಾರ್ವಜನಿಕರು, ಕೂಡಲೇ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಸಂಬಂಧ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ಆದರೆ ಈತ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುದು ತಿಳಿದು ಬಂದಿಲ್ಲ.

Translate »