Tag: Cauvery

`ಸಿಡಿಮದ್ದು’ ಬಳಸಿ ಮೀನುಗಾರಿಕೆ
ಮೈಸೂರು

`ಸಿಡಿಮದ್ದು’ ಬಳಸಿ ಮೀನುಗಾರಿಕೆ

January 1, 2019

ಮೈಸೂರು: ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದನೆ ಮಾಡುವ ದುರಾಸೆಯಿಂದಾಗಿ ಕೆಲವು ಮೀನುಗಾರರು ವಾಮಮಾರ್ಗದಲ್ಲಿ ಮೀನುಗಾರಿಕೆಗೆ ಮುಂದಾಗಿದ್ದು, ಕಾವೇರಿ ನದಿಯಲ್ಲಿ ಸಿಡಿಮದ್ದು ಬಳಸಿ ಮೀನು ಹಿಡಿಯುತ್ತಿದ್ದಾರೆ. ಈ ಅಪಾಯಕಾರಿ ವಿಧಾನದಿಂದಾಗಿ ಕೆಲವರು ಕೈ ಕಳೆದು ಕೊಂಡು ಪರಿತಪಿಸುತ್ತಿದ್ದಾರೆ. ಕಾವೇರಿ ನದಿಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿದ್ದು, ಆದರೆ ಕೆಲವು ಮೀನುಗಾರರು ಕಡಿಮೆ ಶ್ರಮ ಹಾಕಿ ಹೆಚ್ಚು ಸಂಪಾದಿಸಲು ವಿನಾಶಕ ಮಾರ್ಗ ಅನುಸರಿಸುವ ಮೂಲಕ ತಮ್ಮನ್ನೂ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ನದಿಯಲ್ಲಿ ಮೀನುಗಳೊಂದಿಗೆ ನೀರುನಾಯಿ ಸೇರಿದಂತೆ ಇನ್ನಿತರ ಜಲ ಚರಗಳಿಗೆ ಸಂಚಕಾರ ತಂದಿಡುತ್ತಿದ್ದಾರೆ….

ಜಲಾಶಯ ಭರ್ತಿ ಹಿನ್ನೆಲೆ ಜೂನ್, ಜುಲೈನಲ್ಲಿ ಕೆ.ಆರ್.ಎಸ್.  ಪ್ರವೇಶದಿಂದ 1,00,52,000 ರೂ. ಆದಾಯ
ಮೈಸೂರು

ಜಲಾಶಯ ಭರ್ತಿ ಹಿನ್ನೆಲೆ ಜೂನ್, ಜುಲೈನಲ್ಲಿ ಕೆ.ಆರ್.ಎಸ್.  ಪ್ರವೇಶದಿಂದ 1,00,52,000 ರೂ. ಆದಾಯ

August 2, 2018

ಮೈಸೂರು: ಕಾವೇರಿ ಕಣಿವೆಯಲ್ಲಿ ಅಧಿಕ ಮಳೆಯಾದ ಪರಿಣಾಮ ಕೃಷ್ಣರಾಜಸಾಗರ ಅಣೆಕಟ್ಟೆ ಅತೀ ಬೇಗ ತುಂಬಿದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗಿದೆ. ಕಳೆದ ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿ ಕೆಆರ್‍ಎಸ್ ಜಲಾಶಯ ಮೈದುಂಬಿದ ಹಿನ್ನೆಲೆಯಲ್ಲಿ ನೈಸರ್ಗಿಕ ಸೌಂದರ್ಯ ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಧಾವಿಸಿದ್ದು, ಅಣೆಕಟ್ಟೆಯಲ್ಲಿ ನೀರು ಗರಿಷ್ಟ ಮಟ್ಟ ತಲುಪಿದ ನಂತರ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಟ್ಟು ನಂತರವಂತೂ ಬೋರ್ಗರೆಯುವ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಕೆಆರ್‍ಎಸ್‍ನತ್ತ ಮುಗಿಬಿದ್ದಿದ್ದರು. ಕ್ರಸ್ಟ್…

ಇಂದು ಕಾವೇರಿಗೆ ಸಿಎಂ ಬಾಗೀನ
ಮಂಡ್ಯ

ಇಂದು ಕಾವೇರಿಗೆ ಸಿಎಂ ಬಾಗೀನ

July 20, 2018

ಮಂಡ್ಯ: ಜಿಲ್ಲೆಯ ಜೀವ ನಾಡಿ ಕೃಷ್ಣರಾಜ ಸಾಗರ ಜಲಾಶಯ ಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ (ಜು.20) ಬಾಗೀನ ಅರ್ಪಿಸಲಿದ್ದು, ಸಕಲ ಸಿದ್ಧತೆ ನಡೆದಿದೆ. ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕೊಡಗು ಜಿಲ್ಲೆಯಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ  ಅವರು ಅಣೆಕಟ್ಟೆ ಯಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ, ತರುವಾಯ ಬಾಗೀನ ಅರ್ಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಇಂಧನ ಸಚಿವ…

ರೈತರ ಬೆಳೆ, ಕೆರೆಗಳಿಗೆ ನೀರು ಹರಿಸಲು ಸಿಎಂ ಸೂಚನೆ
ಮೈಸೂರು

ರೈತರ ಬೆಳೆ, ಕೆರೆಗಳಿಗೆ ನೀರು ಹರಿಸಲು ಸಿಎಂ ಸೂಚನೆ

July 15, 2018

ಬೆಂಗಳೂರು: ಕಾವೇರಿ ನದಿ ಪಾತ್ರದ ರೈತರ ಬೆಳೆಗೆ ಹಾಗೂ ಕೆರೆಗಳ ಭರ್ತಿ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶಿಸಿದ್ದಾರೆ. ರಾಜ್ಯಕ್ಕೆ ಹೆಚ್ಚು ವರಿಯಾಗಿ ಒದಗಿ ರುವ 14.5 ಟಿಎಂಸಿ ನೀರನ್ನು ಪ್ರಸಕ್ತ ವರ್ಷದಿಂದಲೇ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೆಚ್ಚುವರಿ ನೀರನ್ನು ಮೊದಲು ಕೆರೆಗಳಿಗೆ ಭರ್ತಿ ಮಾಡಿ ಉಳಿದ ನೀರನ್ನು ಕೃಷಿ ಭೂಮಿ ವಿಸ್ತರಣೆ ಮತ್ತು ಕುಡಿಯುವ ನೀರಿನ ಕ್ರಿಯಾ ಯೋಜನೆ ರೂಪಿಸುವಂತೆ ತಿಳಿಸಿದ್ದಾರೆ. ಈಗಾಗಲೇ ನದಿ ಪಾತ್ರಕ್ಕೆ ನೀರು ಬಿಡಲಾಗುತ್ತಿದ್ದು ರೈತರು ಸಾಂಪ್ರದಾಯಿಕ ಬೆಳೆ ಜೊತೆಗೆ…

ಜುಲೈ ತಿಂಗಳು ತಮಿಳುನಾಡಿಗೆ 31 ಟಿಎಂಸಿ ನೀರು ಹರಿಸಬೇಕು
ಮೈಸೂರು

ಜುಲೈ ತಿಂಗಳು ತಮಿಳುನಾಡಿಗೆ 31 ಟಿಎಂಸಿ ನೀರು ಹರಿಸಬೇಕು

July 3, 2018

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ 31.24 ಟಿಎಂಸಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವ ಹಣಾ ಪ್ರಾಧಿಕಾರ ಸೋಮವಾರ ಕರ್ನಾ ಟಕಕ್ಕೆ ಸೂಚನೆ ನೀಡಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ನಂತರ ಇಂದು ನಡೆದ ಮೊದಲ ಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತು ಚರ್ಚೆ ನಡೆಸಿ, ಸುಪ್ರೀಂ ಆದೇಶದಂತೆ ಕರ್ನಾಟಕ ಈಗಾಗಲೇ ಜೂನ್ ತಿಂಗಳಿನಲ್ಲಿ ನಿಗದಿಗಿಂತ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿದೆ. ಸುಮಾರು 2.5ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬಿಡಲಾಗಿದೆ….

ಕಾವೇರಿ ನೀರು ಹಂಚಿಕೆ ವಿಚಾರ: ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಿದ ರಾಜ್ಯ ಸರ್ಕಾರ
ಮೈಸೂರು

ಕಾವೇರಿ ನೀರು ಹಂಚಿಕೆ ವಿಚಾರ: ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಿದ ರಾಜ್ಯ ಸರ್ಕಾರ

June 26, 2018

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಕೇಶ್ ಸಿಂಗ್, ಹೆಚ್.ಎನ್. ಪ್ರಸನ್ನ ಹೆಸರು ಶಿಫಾರಸ್ಸು ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಿದ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಇಬ್ಬರು ಪ್ರತಿನಿಧಿ ಗಳ ಹೆಸರನ್ನು ಶಿಫಾರಸ್ಸು ಮಾಡಿದೆ. ರಾಜ್ಯ ಸರ್ಕಾರವನ್ನು ಕಡೆಗಾಣಿಸಿ, ನಿರ್ವ ಹಣಾ ಪ್ರಾಧಿಕಾರ ಜುಲೈ 2 ರಂದು ಮೊದಲ ಸಭೆ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ತರಾತುರಿಯಾಗಿ ಈ ನೇಮಕಾತಿಯಾಗಿದೆ. ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‍ಸಿಂಗ್ ಹಾಗೂ ಕಾವೇರಿ ಜಲ ನಿಗಮದ ವ್ಯವಸ್ಥಾಪಕ…

ಹತ್ತು ದಿನಕ್ಕೊಮ್ಮೆ ತಮಿಳ್ನಾಡಿಗೆ ಕಾವೇರಿ ನೀರು ಕೇಂದ್ರದ ನಿರ್ಣಯಕ್ಕೆ ಸಿಎಂ ಕುಮಾರಸ್ವಾಮಿ ತೀವ್ರ ಆಕ್ಷೇಪ
ಮೈಸೂರು

ಹತ್ತು ದಿನಕ್ಕೊಮ್ಮೆ ತಮಿಳ್ನಾಡಿಗೆ ಕಾವೇರಿ ನೀರು ಕೇಂದ್ರದ ನಿರ್ಣಯಕ್ಕೆ ಸಿಎಂ ಕುಮಾರಸ್ವಾಮಿ ತೀವ್ರ ಆಕ್ಷೇಪ

June 19, 2018

ಬೆಂಗಳೂರು: ರಾಜ್ಯದ ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿ ಹತ್ತು ದಿನಕ್ಕೊಮ್ಮೆ ನೀರು ಬಿಡಬೇಕೆಂಬ ಕೇಂದ್ರದ ನಿರ್ಣಯಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ದೆಹಲಿಯಲ್ಲಿಂದು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಕಾವೇರಿ ನಿರ್ವ ಹಣಾ ಮಂಡಳಿ ರಚಿಸಿ, ರಾಜ್ಯಕ್ಕೆ ಮತ್ತು ರೈತರಿಗೆ ಮಾರಕವಾಗುವಂತಹ ಕೆಲವು ನಿರ್ಣಯ ಕೈಗೊಂಡಿದ್ದಾರೆ. ಕಾವೇರಿ ನಿರ್ವ ಹಣಾಮಂಡಳಿಗಿರುವ ಕೆಲವು ಅಧಿಕಾರ ಮೊಟಕು ಇಲ್ಲವೇ ನಿರ್ಣಯಗಳಲ್ಲಿ…

ಕಾವೇರಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ರಜನಿಕಾಂತ್ ವಿರುದ್ಧ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಕಾವೇರಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ರಜನಿಕಾಂತ್ ವಿರುದ್ಧ ಮೈಸೂರಲ್ಲಿ ಪ್ರತಿಭಟನೆ

June 7, 2018

ಮೈಸೂರು: ನಟ ರಜನಿಕಾಂತ್ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕರ್ನಾಟಕದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಸೌಹಾರ್ದತೆ ಹಾಗೂ ಸಾಮರಸ್ಯ ಕಾಯ್ದುಕೊಳ್ಳುವುದು ಮುಖ್ಯ. ಆದರೆ ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಕಾವೇರಿ ವಿಚಾರವನ್ನು ಬಳಿಸಿಕೊಂಡರು. ಇದೀಗ ನಟ ರಜನಿಕಾಂತ್ ಅದೇ…

ರಜನಿಕಾಂತ್ ಹೇಳಿಕೆ ಖಂಡಿಸಿ ಪ್ರತಿಭಟನೆ
ಮಂಡ್ಯ

ರಜನಿಕಾಂತ್ ಹೇಳಿಕೆ ಖಂಡಿಸಿ ಪ್ರತಿಭಟನೆ

June 7, 2018

ಮಂಡ್ಯ:  ಕಾವೇರಿ ನದಿ ನೀರು ವಿಚಾರದಲ್ಲಿ ತಮಿಳು ನಟ ರಜನಿಕಾಂತ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬುಧ ವಾರ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು. ಬಹುಭಾಷಾ ನಟರಾಗಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಚಲಚಿತ್ರ ಗಳಲ್ಲಿ ಅಭಿನಯಿಸಿರುವ ರಂಜನಿಕಾಂತ್ ಅವರು ಕನ್ನಡಿಗರ ಬಗ್ಗೆ ಕಾವೇರಿ ವಿಷಯ ದಲ್ಲಿ ಅಗೌರವಯುತವಾಗಿ, ಸ್ವಾರ್ಥಪರ ವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಮತ್ತೋರ್ವ ನಟ ಪ್ರಕಾಶ್‍ರೈ ಅವರು ಬೆಂಬಲಿಸುವಂತೆ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ…

ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಸ್ವಚ್ಛತೆಗೆ ಚಾಲನೆ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಸ್ವಚ್ಛತೆಗೆ ಚಾಲನೆ

June 4, 2018

ಮಂಡ್ಯ:  ಜೀವನದಿ ಕಾವೇರಿ ನದಿಯ ಸ್ವಚ್ಛತೆಗೆ ಶ್ರೀರಂಗಪಟ್ಟಣದಲ್ಲಿಂದು ಚಾಲನೆ ನೀಡಲಾಯಿತು. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ವಿವಿಧ ಸಂಘಟನೆ ಗಳ 300ಕ್ಕೂ ಹೆಚ್ಚು ಜನರು ಕಾವೇರಿ ನದಿಗಿಳಿದು ಬೆಳೆದಿದ್ದ ಜೊಂಡು, ಕಸ, ಕಡ್ಡಿಯನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾರ್ಯ ನಡೆಸಿದರು.ಪಟ್ಟಣದ ಉತ್ತರ ಕಾವೇರಿ ಸೇತುವೆಯ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಭಾನುವಾರ ಮುಂಜಾನೆ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಅವರು ಕಾವೇರಿ ನದಿ ಸ್ವಚ್ಛತೆಗೆ ಚಾಲನೆ ನೀಡಿದರು. ಶ್ರೀರಂಗಪಟ್ಟಣ ನಾಗರಿಕ ಹಿತರಕ್ಷಣಾ ಸಮಿತಿ, ಅಭಿನವ ಭಾರತ್, ಚೈತನ್ಯ…

1 2
Translate »