ರಜನಿಕಾಂತ್ ಹೇಳಿಕೆ ಖಂಡಿಸಿ ಪ್ರತಿಭಟನೆ
ಮಂಡ್ಯ

ರಜನಿಕಾಂತ್ ಹೇಳಿಕೆ ಖಂಡಿಸಿ ಪ್ರತಿಭಟನೆ

June 7, 2018

ಮಂಡ್ಯ:  ಕಾವೇರಿ ನದಿ ನೀರು ವಿಚಾರದಲ್ಲಿ ತಮಿಳು ನಟ ರಜನಿಕಾಂತ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬುಧ ವಾರ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.

ಬಹುಭಾಷಾ ನಟರಾಗಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಚಲಚಿತ್ರ ಗಳಲ್ಲಿ ಅಭಿನಯಿಸಿರುವ ರಂಜನಿಕಾಂತ್ ಅವರು ಕನ್ನಡಿಗರ ಬಗ್ಗೆ ಕಾವೇರಿ ವಿಷಯ ದಲ್ಲಿ ಅಗೌರವಯುತವಾಗಿ, ಸ್ವಾರ್ಥಪರ ವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಮತ್ತೋರ್ವ ನಟ ಪ್ರಕಾಶ್‍ರೈ ಅವರು ಬೆಂಬಲಿಸುವಂತೆ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಇಬ್ಬರು ನಟರ ಬೆಳವಣ ಗೆಗೆ ಕನ್ನಡಿಗರ ಕೊಡುಗೆ ಅಪಾರವಾಗಿದೆ. ಅದನ್ನು ಮನಗಾಣಬೇಕಿದೆ. ತಮಿಳಿಗರು, ಕನ್ನಡಿಗರು ಸಹೋದರರಂತೆ ಬದುಕುವ ವಾತಾವರಣ ಕಲ್ಪಿಸಬೇಕಿದೆ. ಎರಡು ರಾಜ್ಯಗಳಿಗೂ ಅನು ಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ರಾಜಕೀಯ ಸ್ವಾರ್ಥಕ್ಕಾಗಿ ಕಾವೇರಿ ನಿರ್ವ ಹಣಾ ಮಂಡಳಿ ರಚನೆ ಮಾಡಬೇಕು ಎನ್ನುವ ಒತ್ತಾಯವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ರಜನಿಕಾಂತ್ ಅವರು ಕನ್ನಡ ವಿರೋಧಿ ಹೇಳಿಕೆಗಳಿಗೆ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ರಾಜ್ಯದಲ್ಲಿ ಅವರ ‘ಕಾಲಾ’ ಚಿತ್ರವನ್ನು ಬಿಡುಗಡೆ ಗೊಳಿಸಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮುಖಂಡರಾದ ಜಿ.ಮಹಂತಪ್ಪ, ಕೆ.ಟಿ.ಹನುಮೇಶ್, ಶ್ರೀನಿವಾಸ ಮೂರ್ತಿ, ಎ.ಎಸ್.ಸಿದ್ದು, ಜಯಮ್ಮ, ಅರ ವಿಂದ, ಬಿ.ಸಿ.ಅಂದಾನಿ, ದೀಪಿಕಾ, ಹರೀಶ್, ಚೇತನ್‍ಕುಮಾರ್ ಪಾಲ್ಗೊಂಡಿದ್ದರು.

Translate »