ಮನೆ ಮಾಲೀಕರಿಂದಲೇ ಬಾಡಿಗೆದಾರರ ಮನೆಯಲ್ಲಿ ಕಳವು
ಮಂಡ್ಯ

ಮನೆ ಮಾಲೀಕರಿಂದಲೇ ಬಾಡಿಗೆದಾರರ ಮನೆಯಲ್ಲಿ ಕಳವು

June 7, 2018

ಮಂಡ್ಯ: ಬಾಡಿಗೆ ದಾರರ ಮನೆಯಲ್ಲೇ ಕಳ್ಳತನ ಮಾಡಿದ್ದ ಮಾಲೀಕ ಅಪ್ಪ-ಮಗ ಈಗ ಪೊಲೀಸರ ವಶವಾಗಿದ್ದಾರೆ. ನಗರದ ಕಲ್ಲಹಳ್ಳಿಯ 13ನೇ ಕ್ರಾಸ್‍ನ ಎಂ.ಸಿ. ಸಂತೋಷ್ ಹಾಗೂ ಆತನ ತಂದೆ ಚಂದ್ರಶೇಖರ್ ಅಲಿಯಾಸ್ ಚಂದ್ರ ಬಂಧಿತರು. ಇವರಿಬ್ಬರು ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ಯು.ಕುಮಾರಸ್ವಾಮಿ ಎಂಬುವರ ಮನೆಗೆ ಮೇ 31ರಂದು ಮಧ್ಯಾಹ್ನ ನುಗ್ಗಿ 40 ಗ್ರಾಂ. ಚಿನ್ನಾಭರಣ, 5.94 ಲಕ್ಷ ನಗದನ್ನು ಅಪಹರಿಸಿದ್ದರು.

ಪೊಲೀಸರು ಪಕ್ಕದ ಶಾಲಾ ಕಟ್ಟಡದಲ್ಲಿ ಇದ್ದ ಸಿಸಿಟಿವಿ ಫುಟೇಜ್ ಪರಿಶೀಲಿಸಿ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿ ಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಣ, ಆಭರಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಟ್ಟಿಂಗ್, ಇಸ್ಪೀಟ್‍ಗೆ ದಾಸರು: ಚಂದ್ರ ಶೇಖರ್‍ಗೆ ಇಸ್ಪೀಟ್ ಹುಚ್ಚಾದರೆ, ಮಗ ಕ್ರಿಕೆಟ್ ಬೆಟ್ಟಿಂಗ್ ದಾಸನಾಗಿದ್ದ. ಇನ್ನು ಅವರ ಮನೆ ಚಂದ್ರಶೇಖರ್ ಅವರ ತಾಯಿಯ ಹೆಸರಿನಲ್ಲಿದೆ. ಮಗ, ಮೊಮ್ಮಗ ಮಾಡಿದ ಕಳ್ಳತನದ ವಿಚಾರ ಗೊತ್ತಿದ್ದರಿಂದ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದರು.

Translate »