ಅಕ್ರಮವಾಗಿ ಸಾಗಿಸುತ್ತಿದ್ದ ಮರ ವಶ
ಮಂಡ್ಯ

ಅಕ್ರಮವಾಗಿ ಸಾಗಿಸುತ್ತಿದ್ದ ಮರ ವಶ

June 7, 2018

ಮಂಡ್ಯ:  ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರವನ್ನು ಅರಣ್ಯ ಅಧಿಕಾರಿಗಳು ವಶ ಪಡಿಸಿ ಕೊಂಡಿರುವ ಘಟನೆ ಜಿಲ್ಲೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಬಳಿ ಬುಧವಾರ ನಡೆದಿದೆ.

ಲಾರಿಯಲ್ಲಿ ಗೊಬ್ಬಳಿ, ಹೊಂಗೆ, ಸಿಜಲೆ, ಬಾಗೆ, ಗೋಣ ಸೇರಿದಂತೆ ವಿವಿಧ ಜಾತಿಯ 25 ಟನ್ ನಷ್ಟಿರುವ ಒಂದು ಲೋಡ್ ಮರವನ್ನು ಮೇಲುಕೋಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿ ಯ ಬೇವುಕಲ್ಲು ಹಟ್ನ ಕಡೆಯಿಂದ ಹುಣಸೂರಿಗೆ ಸಾಗಾಣ ಕೆ ಮಾಡುತ್ತಿದ್ದಾಗ ಅರಣ್ಯಧಿಕಾರಿಗಳು ದಾಳಿ ನಡೆಸಿ ಲಾರಿ ಸಮೇತ ಮರವನ್ನು ವಶಪಡಿಸಿಕೊಂಡಿದ್ದಾರೆ.

Translate »