70 ವರ್ಷಗಳ ಬಳಿಕ ಪಾಂಡವಪುರಕ್ಕೆ ಶಾಪ ವಿಮೋಚನೆ!
ಮಂಡ್ಯ

70 ವರ್ಷಗಳ ಬಳಿಕ ಪಾಂಡವಪುರಕ್ಕೆ ಶಾಪ ವಿಮೋಚನೆ!

June 7, 2018
  • ಮೇಲುಕೋಟೆಗೆ ಪ್ರಥಮ ಬಾರಿಗೆ ಮಂತ್ರಿಗಿರಿ- ಕಳಚಿದ ಸಚಿವ ಸ್ಥಾನವಿಲ್ಲದ ಕ್ಷೇತ್ರವೆಂಬ ಹಣೆಪಟ್ಟಿ
  • ಸಕ್ಕರೆ ನಾಡಿಗೆ ಡಬಲ್ ಧಮಾಕ- ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣಗೆ ಸಚಿವ ಸ್ಥಾನ
  • ನಾಗಯ್ಯ ಲಾಳನಕೆರೆ

ಮಂಡ್ಯ: ಇದು ಪಾಂಡವಪುರ ಅಲಿಯಾಸ್ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ವೃತ್ತಾಂತ. ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕ ಇದೀಗ ಶಾಪವಿಮೋಚನೆ ಪಡೆದ ಕ್ಷೇತ್ರ ವೆಂಬ ಕೀರ್ತಿಗೆ ಭಾಜನವಾಗುತ್ತಿರುವ ಪಾಂಡವಪುರ ರಾಜಕೀಯ ಚಿತ್ರಣ!ವಿಧಾನಸಭಾ ಕ್ಷೇತ್ರವಾಗಿದ್ದ ಪಾಂಡವ ಪುರ. 2008ರಲ್ಲಿ ನಡೆದ ಕ್ಷೇತ್ರ ವಿಂಗಡಣೆ ಯಿಂದಾಗಿ ಮೇಲುಕೋಟೆ ಕ್ಷೇತ್ರವಾಗಿ ನಾಮಕರಣಗೊಂಡಿತು. ಕ್ರಿಯಾಶೀಲರು, ಸಾಧಕರು, ಸಜ್ಜನರು, ರೈತಪರ ಹೋರಾಟ ಗಾರರು ಆಳ್ವಿಕೆ ನಡೆಸಿದ ಈ ಕ್ಷೇತ್ರದಲ್ಲಿ ಪಕ್ಷಾಂ ತರ ದೊಂಬರಾಟವನ್ನೂ ಕಾಣಬಹುದಾಗಿದೆ.

1952 ರಿಂದ 2018ರ ವರೆಗೆ ಮೇಲು ಕೋಟೆ ಕ್ಷೇತ್ರ 15 ಮಹಾ ಚುನಾವಣೆ ಕಂಡಿದ್ದು 10ಜನ ಶಾಸಕರಾಗಿದ್ದರೂ, ಈವರೆಗೆ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದ್ದ ರಿಂದ ಶಾಪಗ್ರಸ್ತ ಕ್ಷೇತ್ರ ಎಂಬ ಹಣೆ ಪಟ್ಟಿಯೂ ಇದಕ್ಕೆ ಅಂಟಿತ್ತು. ಕ್ಷೇತ್ರದಿಂದ 3ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಸಿ.ಎಸ್.ಪುಟ್ಟರಾಜು ಅವರು ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಇದರೊಂದಿಗೆ ಪಾಂಡವ ಪುರ ಶಾಪ ವಿಮೋಚನೆ ಪಡೆದಂತಾಗಿದೆ.

ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಮೇಲು ಕೋಟೆ(ಪಾಂಡವಪುರ) ಹೊರತು ಪಡಿಸಿ ಮಂಡ್ಯ, ಮದ್ದೂರು, ಮಳವಳ್ಳಿ, ನಾಗ ಮಂಗಲ, ಕೆಆರ್‍ಪೇಟೆ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿನ ನಾಯಕರು ಸಚಿವ ಸ್ಥಾನ ಪಡೆದುಕೊಂಡಿದ್ದರು. ಹೀಗಾಗಿ ಸುದೀರ್ಘ 70 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಪಾಂಡವಪುರ ಸಚಿವ ಸ್ಥಾನವನ್ನೇ ಕಾಣದ ಕ್ಷೇತ್ರವೆಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಪಾಂಡವಪುರಕ್ಕೆ ಮಂತ್ರಿಸ್ಥಾನದ ವರ ದೊರೆಯಲು ಇನ್ನೆಷ್ಟು ವರ್ಷಗಳು ಬೇಕೆಂಬ ಕ್ಷೇತ್ರದ ಜನರ ಕೊರಗಿಗೆ ತೆರೆಬೀಳುತ್ತಿದೆ.ಬಿ.ವೈ ನೀಲೇಗೌಡ (2ಬಾರಿ), ಬಿ.ಚಾಮಯ್ಯ, ಎನ್.ಚನ್ನೇಗೌಡ, ಡಿ.ಹಲಗೇಗೌಡ (2 ಬಾರಿ), ಕೆ.ಆರ್.ರಾಜಗೋಪಾಲ್, ಕೆ.ಕೆಂಪೇ ಗೌಡ(3 ಬಾರಿ), ಕೆ.ಎಸ್.ಪುಟ್ಟಣ್ಣಯ್ಯ, ಸಿ.ಎಸ್.ಪುಟ್ಟರಾಜು(3 ಬಾರಿ) ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಇದುವರೆಗೂ ಯಾರೂ ಸಹ ಮಂತ್ರಿ ಯಾಗಿರಲಿಲ್ಲ. 3ನೇ ಬಾರಿಗೆ ಆಯ್ಕೆಯಾಗಿ ರುವ ಸಿ.ಎಸ್.ಪುಟ್ಟರಾಜುಗೆ ಮಾತ್ರ ಮಂತ್ರಿ ಯಾಗುವ ಯೋಗ ಇದೀಗ ಕೂಡಿ ಬಂದಿದೆ.

ಕೂಡಿ ಬಂದ ಯೋಗ: ಈ ಬಾರಿ ಸಚಿವನಾಗುತ್ತೇನೆ. ಮಂತ್ರಿ ಯೋಗವನ್ನೇ ಕಾಣದ ಕ್ಷೇತ್ರವೆಂದು ಮೇಲುಕೋಟೆಗೆ ಅಂಟಿರುವ ಕಳಂಕ ದೂರ ಮಾಡುತ್ತೇನೆ. ಆದ್ದರಿಂದ ನನ್ನನ್ನು ಗೆಲ್ಲಿಸಿ ಎಂದು ಕ್ಷೇತ್ರದ ತುಂಬೆಲ್ಲಾ ಭರ್ಜರಿ ಪ್ರಚಾರ ಮಾಡಿ ಅಧಿಕ ಮತಗಳಿಂದ ಆಯ್ಕೆಯಾಗಿ ರುವ ಸಿ.ಎಸ್.ಪುಟ್ಟರಾಜು ಅವರಿಗೆ ಜೆಡಿ ಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಸಚಿವರಾಗುವ ಯೋಗ ಬಂದೊದಗಿದೆ.

ಜಿಲ್ಲೆಯಿಂದ ಇಬ್ಬರಿಗೆ ಸಚಿವ ಯೋಗ: ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರ ಮಂತ್ರಿ ಲಾಬಿ ಬಿರುಸು ಗೊಂಡಿತ್ತು. ಅಂತೆಯೇ ಮಾಜಿ ಸಂಸದ, ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು ಮತ್ತು ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಸಂಪುಟ ದರ್ಜೆ ಖಾತೆ ಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್.ಡಿ.ಜಯರಾಂ, ಕೆ.ಎನ್. ನಾಗೇ ಗೌಡರ ಬಳಿಕ ಇಬ್ಬರು ಒಟ್ಟಿಗೆ ಸಚಿವರಾ ಗುವ ಅವಕಾಶ ಮಂಡ್ಯ ಜಿಲ್ಲೆಗೆ ಒದಗಿ ಬಂದಿದೆ. ಸಿ.ಎಸ್.ಪುಟ್ಟರಾಜು ಸಾರಿಗೆ ಮಂತ್ರಿ, ಡಿ.ಸಿ.ತಮ್ಮಣ್ಣ ಉನ್ನತ ಶಿಕ್ಷಣ ಮಂತ್ರಿ ಆಗುವ ಸಾಧ್ಯತೆಗಳಿವೆ.

ಮಂತ್ರಿ ಸ್ಥಾನಕ್ಕೆ ಮಾನದಂಡ ಏನು?: ಶಾಸಕ ಡಿ.ಸಿ.ತಮ್ಮಣ್ಣ ಎರಡು ಬಾರಿ ಕಾಂಗ್ರೆಸ್ ನಿಂದ ಮತ್ತು ಎರಡು ಬಾರಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದು, 4 ಬಾರಿ ಶಾಸಕರಾಗಿ ಆಡಳಿತ ನಡೆಸಿದ ಅನುಭವದ ಜೊತೆಗೆ ದೇವೇಗೌಡರ ನೆಂಟಸ್ಥಿಕೆ ಮತ್ತೊಂದು ಮುಖ್ಯ ಮಾನದಂಡವಾಗಿದೆ. ಈ ಹಿನ್ನೆಲೆ ಯಲ್ಲಿ ಡಿ.ಸಿ.ತಮ್ಮಣ್ಣ ಅವರಿಗೆ ನಿರೀಕ್ಷೆ ಯಂತೆಯೇ ಸಚಿವ ಸ್ಥಾನ ಸಿಕ್ಕಿದೆ. ಒಂದು ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ಸಿಕ್ಕರೂ ಆಶ್ಚರ್ಯಪಡುವಂತಿಲ್ಲ.

ಈಗಾಗಲೇ ಎನ್.ಚಲುವರಾಯಸ್ವಾಮಿ ಅವರ ತೆರವಾದ ಜೆಡಿಎಸ್‍ನ ಜಿಲ್ಲಾ ನಾಯಕತ್ವ ವನ್ನು ವಹಿಸಿಕೊಂಡಿರುವ ಸಿ.ಎಸ್.ಪುಟ್ಟ ರಾಜು 3 ಬಾರಿ ಜೆಡಿಎಸ್‍ನಿಂದಲೇ ಶಾಸಕ ರಾಗಿ ಆಯ್ಕೆಯಾಗಿ 4 ವರ್ಷಗಳ ಕಾಲ ಸಂಸದರಾಗಿ ಕೂಡ ಅಧಿಕಾರ ನಡೆಸಿದ್ದಾರೆ. 2004ರಲ್ಲಿ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಸಚಿವರಾಗುವ ಸಾಧ್ಯತೆ ಇತ್ತಾದರೂ ಚಲುವರಾಯಸ್ವಾಮಿ ಅವರಿಗೆ ಆದ್ಯತೆ ನೀಡಿದ ಪರಿಣಾಮ ಆ ಸಂದರ್ಭದಲ್ಲಿ ಪುಟ್ಟರಾಜು ಅವರಿಗೆ ಮಂತ್ರಿಗಿರಿ ಒಲಿಯಲಿಲ್ಲ. ಹೀಗಾಗಿ ಈ ಬಾರಿ ಸಿ.ಎಸ್. ಪುಟ್ಟರಾಜುಗೆ ಮಂತ್ರಿಸ್ಥಾನ ಪಕ್ಕಾ ಎನ್ನ ಲಾಗುತ್ತಿದ್ದ ಮಾತು ಇದೀಗ ನಿಜವಾಗಿದೆ.

ಇದರ ನಡುವೆ ಬಂಡಾಯ ಶಾಸಕರಾದ ಎನ್.ಚಲುವರಾಯಸ್ವಾಮಿ ಮತ್ತು ರಮೇಶ್‍ಬಾಬು ಬಂಡಿಸಿದ್ದೇಗೌಡರನ್ನು ಹಣ ಯಲೇಬೇಕೆಂದ ಶಪಥÀ ಮಾಡಿರುವ ಜೆಡಿಎಸ್ ವರಿಷ್ಠರು ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲದ ಕೆ.ಸುರೇಶ್‍ಗೌಡರಿಗೆ ಕೊನೆಗಳಿಗೆಯಲ್ಲಿ ಮಂತ್ರಿಸ್ಥಾನ ಕೊಟ್ಟರೂ ಅಚ್ಚರಿಯಿಲ್ಲ.
ಎಸ್‍ಸಿ ಕೋಟಾದಿಂದ ಮಳವಳ್ಳಿಯ ಅನ್ನದಾನಿ ಹೆಸರೂ ಕೂಡ ಚಾಲ್ತಿಯಲ್ಲಿತ್ತು. 3 ಬಾರಿ ಶಾಸಕರಾಗಿರುವ ಮಂಡ್ಯದ ಎಂ. ಶ್ರೀನಿವಾಸ್, 2 ಬಾರಿ ಶಾಸಕರಾಗಿರುವ ಕೆ.ಆರ್.ಪೇಟೆಯ ನಾರಾಯಣಗೌಡ ಕೂಡ ಸಚಿವ ಸ್ಥಾನದ ಪೈಪೋಟಿ ಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಹೊರಗಿನವರೇ ಹೆಚ್ಚು ಬಾರೀ ಉಸ್ತುವಾರಿ ಮಂತ್ರಿ

ಸ್ಥಳೀಯ ನಾಯಕರಿಗಿಂತ ಹೊರಗಿನವರೇ ಜಿಲ್ಲಾ ಉಸ್ತು ವಾರಿ ಸಚಿವರಾಗಿರುವ ಇತಿಹಾಸ ಜಿಲ್ಲೆಗಿದೆ. ಸುಮಾರು 9 ಮಂದಿ ಜಿಲ್ಲಾ ಮಂತ್ರಿಯಾಗಿರುವ ದಾಖಲೆಯಿದೆ. ಜಿಲ್ಲೆಯ ವರು 5 ಬಾರಿ ಉಸ್ತುವಾರಿ ಸಚಿವರಾಗಿದ್ದಾರೆ.

1989ರಲ್ಲಿ ಎಸ್.ಎಂ.ಕೃಷ್ಣ, ಆತ್ಮಾನಂದ, ವಿರೇಂದ್ರ ಪಾಟೀಲ್ ಸಂಪುಟದಲ್ಲಿ ಸಚಿವರಾಗಿದ್ದರು. ಆಗ ಮಂಡ್ಯ ಉಸ್ತುವಾರಿ ಸಚಿವರಾಗಿದ್ದವರು ಮೈಸೂರಿನ ಟಿ.ಎನ್.ನರಸಿಂಹಮೂರ್ತಿ. 1999ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಿವಣ್ಣ, ಬಿ.ಕೆ.ಚಂದ್ರಶೇಖರ್, ಟಿ.ಬಿ. ಜಯಚಂದ್ರ ಕಾರ್ಯನಿರ್ವಹಿಸಿದರೆ. 2004ರ ಸಮ್ಮಿಶ್ರ ಸರ್ಕಾರ (ಕಾಂಗ್ರೆಸ್-ಜೆಡಿಎಸ್)ದಲ್ಲಿ ಚಲುವರಾಯಸ್ವಾಮಿ ಆರೋಗ್ಯ ಸಚಿವ ಹಾಗೂ ಜೆಡಿಎಸ್-ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು.

2008ರಲ್ಲಿ ಪಕ್ಷೇತರವಾಗಿ ಗೆದ್ದಿದ್ದ ಪಿ.ಎಂ.ನರೇಂದ್ರಸ್ವಾಮಿ, ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಆಗ ರಾಮಚಂದ್ರೇಗೌಡ, ಸಿ.ಪಿ.ಯೋಗೇಶ್ವರ್, ಆರ್.ಅಶೋಕ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2013ರಲ್ಲಿ ಅಂಬರೀಶ್ ವಸತಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅವರು ಸಚಿವ ಸ್ಥಾನ ಕಳೆದುಕೊಂಡ ಬಳಿಕ ಡಿ.ಕೆ.ಶಿವಕುಮಾರ್, ನಂತರ ಎಂ.ಕೃಷ್ಣಪ್ಪ ಸಚಿವರಾಗಿದ್ದುದನ್ನು ಇಲ್ಲಿ ಕಾಣಬಹುದಾಗಿದೆ.

ಒಟ್ಟಾರೆ ಈ ಬಾರಿ ಮಂತ್ರಿಗಿರಿಯ ಡಬಲ್ ಧಮಾಕ ಪಡೆಯುವ ಭಾಗ್ಯ ಪಡೆದಿರುವ ಸಕ್ಕರೆ ನಾಡು. ಮುಂದೆ ಯಾವ ರೀತಿಯ ಅಭಿವೃದ್ಧಿಯ ಪಥವನ್ನು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ. ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕøತಿಕ ನಗರಿ ಮೈಸೂರು ರಾಜಮಾರ್ಗದ ನಡುವೆ ಇದ್ದರೂ ಬೆಳವಣ ಗೆಯನ್ನೇ ಕಾಣದೆ ನಗರವೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ, ದೊಡ್ಡ ಹಳ್ಳಿಯಂತಿರುವ ಮಂಡ್ಯದ ಹಣೆಬರಹವನ್ನು ಇದೀಗ ಮಂತ್ರಿಗಳಾಗಿ ಬರುತ್ತಿರುವ ಸಚಿವದ್ವಯರು ಬದಲಾಯಿಸುವರೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಈ ಹಿಂದೆ ಮೂವರಿಗೆ ಸಚಿವ ಭಾಗ್ಯ

ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಮೂವರು ಮಂಡ್ಯ ಜಿಲ್ಲೆಯಲ್ಲೇ ಸಚಿವರಾಗಿದ್ದರು. ಎಸ್.ಡಿ.ಜಯರಾಂ, ಕೆ.ಎನ್.ನಾಗೇಗೌಡ, ಬಿ.ಸೋಮ ಶೇಖರ್ ಸಚಿವರಾಗಿದ್ದರು. ವಿಶೇಷವೆಂದರೆ ಮೂವರು ಕೂಡ ಕ್ಯಾಬಿನೇಟ್ ಸಚಿವ ರಾಗಿದ್ದರು. ಜತೆಗೆ ಆಗ ಎಸ್.ಡಿ.ಜಯರಾಂ ಉಸ್ತುವಾರಿ ಸಚಿವರಾಗಿದ್ದರು. ಅವರ ಮರಣಾನಂತರ ನಾಗೇಗೌಡ ಉಸ್ತುವಾರಿ ಸಚಿವರಾದರು. ಅದಕ್ಕೂ ಮೊದಲು ವೀರಪ್ಪ ಮೋಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಎಸ್.ಎಂ.ಕೃಷ್ಣ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಎಂ.ಎಸ್.ಆತ್ಮಾನಂದ ಸಣ್ಣ ನೀರಾವರಿ, ಕೆ.ಎನ್.ನಾಗೇಗೌಡ ಪಶುಸಂಗೋಪನಾ ಸಚಿವರಾಗಿದ್ದರು.

Translate »