Tag: D.C. Thammanna

ಜೂ.1ರಿಂದ ಬಸ್ ದರ ಏರಿಕೆಯಾಗಲ್ಲ
ಮೈಸೂರು

ಜೂ.1ರಿಂದ ಬಸ್ ದರ ಏರಿಕೆಯಾಗಲ್ಲ

May 26, 2019

ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಳ ಬಗ್ಗೆ ಇದುವರೆಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಸದ್ಯಕ್ಕೆ ಬಸ್ ದರ ಹೆಚ್ಚಳ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಬಸ್ ಪ್ರಯಾಣ ದರ ಹೆಚ್ಚಳ ಬಗ್ಗೆ ಈ ಹಿಂದೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರಸ್ತಾಪ ಕಳುಹಿಸಲಾಗಿತ್ತಾದರೂ ಅದರ ಬಗ್ಗೆ ಇನ್ನೂ ಚರ್ಚೆಯೇ ನಡೆದಿಲ್ಲ. ನಮ್ಮ ಹಂತದಲ್ಲಿಯೂ ಇನ್ನೂ ಚರ್ಚೆ ಯಾಗಿಲ್ಲ. ಪ್ರಯಾಣ ದರ ಹೆಚ್ಚಳ ಬಗ್ಗೆ ಮುಖ್ಯಮಂತ್ರಿಗಳು ಅನುಮತಿ ನೀಡಿಲ್ಲ. ಪ್ರಸ್ತಾವನೆ ಇನ್ನೂ ಚರ್ಚೆಯ ಹಂತ ದಲ್ಲಿಯೇ…

ಕೆಎಸ್‍ಆರ್‍ಟಿಸಿಯಲ್ಲಿ ಕೋಟ್ಯಾಂತರ ಅವ್ಯವಹಾರ
ಮೈಸೂರು

ಕೆಎಸ್‍ಆರ್‍ಟಿಸಿಯಲ್ಲಿ ಕೋಟ್ಯಾಂತರ ಅವ್ಯವಹಾರ

February 24, 2019

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ನಡೆದಿರುವ ಅವ್ಯವ ಹಾರ-ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸ ಲಾಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮಗಳಲ್ಲಿ ಬಿಡಿ ಭಾಗಗಳು, ರೆಕ್ಸಿನ್, ಕಂಪ್ಯೂಟರ್ ಹಾಗೂ ಸರ್ವರ್ ಗಳ ಖರೀದಿಯಲ್ಲಿ ಅವ್ಯವಹಾರ ಆಗಿರು ವುದು, ಅಗತ್ಯಕ್ಕಿಂತ ಹೆಚ್ಚು ಖರೀದಿಸಿರು ವುದು, ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ನೀಡಿರುವುದು ಪತ್ತೆಯಾಗಿದೆ. ಹೀಗಾಗಿ ಎಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಸಾರಿಗೆ ನಿಗಮಗಳು ಕಳೆದ ಮೂರು…

ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಲು ಸೂಚನೆ
ಮಂಡ್ಯ

ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಲು ಸೂಚನೆ

August 2, 2018

ರೈತರಿಗೆ ತೊಂದರೆ ನೀಡಿದರೆ ಶಿಸ್ತು ಕ್ರಮ: ಸಚಿವ ಡಿ.ಸಿ.ತಮ್ಮಣ್ಣ ಎಚ್ಚರಿಕೆ ಮದ್ದೂರು: ‘ಸಾರ್ವಜನಿಕರ ಸರಳ ಕೆಲಸಗಳಿಗೆ ತೊಡಕು ಆಗದಂತೆ ಕೆಲಸನಿರ್ವಹಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೂಚಿಸಿದರು.ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸಾರ್ವಜನಿಕರಿಂದ ಹಾಗೂ ರೈತರಿಂದ ಹೆಚ್ಚು ದೂರು ಬಂದ ಹಿನ್ನೆಲೆಯಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಎರಡು ತಿಂಗಳಲ್ಲಿ ತಾಲೂಕು ಮಟ್ಟದ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದ್ದು…

ಗೂಡ್ಸ್ ವಾಹನಗಳಲ್ಲಿ ಕಾರ್ಮಿಕರ ಸಾಗಾಣಿಕೆಗೆ ತಡೆ ಕಾರ್ಮಿಕರ ಸುರಕ್ಷತೆಗಾಗಿ ಕ್ರಮ: ಸಚಿವ ಡಿ.ಸಿ. ತಮ್ಮಣ್ಣ ಸ್ಪಷ್ಟನೆ
ಮಂಡ್ಯ

ಗೂಡ್ಸ್ ವಾಹನಗಳಲ್ಲಿ ಕಾರ್ಮಿಕರ ಸಾಗಾಣಿಕೆಗೆ ತಡೆ ಕಾರ್ಮಿಕರ ಸುರಕ್ಷತೆಗಾಗಿ ಕ್ರಮ: ಸಚಿವ ಡಿ.ಸಿ. ತಮ್ಮಣ್ಣ ಸ್ಪಷ್ಟನೆ

July 27, 2018

ಭಾರತೀನಗರ:  ಕಾನೂನು ಬಾಹಿರವಾಗಿ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರನ್ನು ಗೂಡ್ಸ್ ಹಾಗೂ ಆಟೋಗಳಲ್ಲಿ ತುಂಬಿ ಕೊಂಡು ಹೋಗುತ್ತಿ ರುವುದಕ್ಕೆ ಕಡಿವಾಣ ಹಾಕುವಂತೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಇದರಿಂದ ಆಗಬಹು ದಾದ ಅನಾಹುತ ತಪ್ಪಿಸಬಹುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮದ್ದೂರು ತಾಲೂಕಿನಲ್ಲಿರುವ ಗಾರ್ಮೆಂಟ್ಸ್‍ಗಳಿಗೆ ಮಂಡ್ಯ, ಮದ್ದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಂದ ಕಾನೂನು ಬಾಹಿರವಾಗಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರನ್ನು ಗೂಡ್ಸ್ ಹಾಗೂ…

ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ
ಮಂಡ್ಯ

ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ

July 22, 2018

ಮಂಡ್ಯ: ನಿತ್ಯ ಸಚಿವರೆಂದು ಬಿರುದು ಪಡೆದುಕೊಂಡಿರುವ ಕೆ.ವಿ. ಶಂಕರೇಗೌಡರ ಸಾಧನೆ ಅವಿಸ್ಮರಣೀಯ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು. ನಗರದ ಕರ್ನಾಟಕ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ವಿ.ಶಂಕರೇಗೌಡ ಶತಮಾನೋತ್ಸವ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೆ.ವಿ.ಶಂಕರ ಗೌಡರ ಆದರ್ಶ, ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಕೆಲಸ ಮಾಡ ಲಿದೆ ಎಂಬ ನಂಬಿಕೆ ನನಗಿದೆ. ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ ರುವುದು ಶ್ಲಾಘನೀಯ. ಕರ್ನಾಟಕ ಸಂಘದ ವತಿಯಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಇಡಲಾಗಿರುವ…

ಸಾಲಮನ್ನಾ ಯೋಜನೆ ಒಕ್ಕಲಿಗರಿಗೆ ಮಾತ್ರ ಅನ್ವಯಿಸಲ್ಲ
ಮಂಡ್ಯ

ಸಾಲಮನ್ನಾ ಯೋಜನೆ ಒಕ್ಕಲಿಗರಿಗೆ ಮಾತ್ರ ಅನ್ವಯಿಸಲ್ಲ

July 21, 2018

ರಾಜ್ಯದ ಎಲ್ಲಾ ವರ್ಗದ ರೈತರನ್ನು ಸಾಲ ಮುಕ್ತರನ್ನಾಗಿಸಲು ಬದ್ಧ ಆತ್ಮಹತ್ಯೆಗೆ ಶರಣಾಗದಿರಲು ಸಿಎಂ ಮನವಿ ಮಂಡ್ಯ: ಸಾಲ ಮನ್ನಾ ಯೋಜನೆ ಒಕ್ಕಲಿಗ ಜನಾಂಗಕ್ಕೆ ಮಾತ್ರ ಅನ್ವಯಿ ಸುವುದಿಲ್ಲ. ಎಲ್ಲಾ ವರ್ಗದ ರೈತ ರಿಗೂ ಸಲ್ಲುತ್ತದೆ. ಆದರೆ ಮಾಧ್ಯಮಗಳು ಮತ್ತು ವಿರೋಧಿಗಳು ಜನರ ದಿಕ್ಕು ತಪ್ಪಿಸುತ್ತಿ ದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶ ದಲ್ಲಿ ಮಾತನಾಡಿದ ಅವರು, ಕೇವಲ ಒಕ್ಕಲಿಗರ ಸಾಲ ಮನ್ನಾ ಮಾಡಲಾಗಿದೆ ಎಂಬ…

ಅರಸೀಕೆರೆ: ನೂತನ ಬಸ್ ನಿಲ್ದಾಣ ನಿರ್ಮಾಣ
ಹಾಸನ

ಅರಸೀಕೆರೆ: ನೂತನ ಬಸ್ ನಿಲ್ದಾಣ ನಿರ್ಮಾಣ

July 2, 2018

ಅರಸೀಕೆರೆ: ಗ್ರಾಮೀಣ ಮತ್ತು ಎಕ್ಸ್‍ಪ್ರೆಸ್ ಬಸ್ ನಿಲುಗಡೆಗೆ ನಿಲ್ದಾಣ ಅವ ಶ್ಯಕವಾಗಿದ್ದು, ತಾಂತ್ರಿಕ ಅನುಮೋದನೆ ಯೊಂದಿಗೆ ಶೀಘ್ರವೇ ನೂತನ ಬಸ್ ನಿಲ್ದಾಣ ನಿರ್ಮಿಸಿ, ಹಾಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭರವಸೆ ನೀಡಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡರ ಕನಸಿನ ಕೂಸಾದ ನೂತನ ಬಸ್ ನಿಲ್ದಾಣ ನಿರ್ಮಾಣ ಮತ್ತು ಅಭಿವೃದ್ಧಿ ವಿಚಾರವಾಗಿ ನಗರಕ್ಕೆ ಇಂದು ಸಂಜೆ ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ಥಳೀಯ ಬಸ್ ಡಿಪೋ ನಿರ್ಮಾಣ ವಾಗಿ 50 ವರ್ಷವಾಗಿದ್ದು, ಈ ಡಿಪೋ ನವೀಕರಣ…

ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಡಿಸಿಟಿ ಚಾಲನೆ
ಮಂಡ್ಯ

ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಡಿಸಿಟಿ ಚಾಲನೆ

June 18, 2018

ಮದ್ದೂರು: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾ ಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭರವಸೆ ನೀಡಿದರು. ತಾಲೂಕಿನ ಮಾಲಗಾರನಹಳ್ಳಿಯಲ್ಲಿ ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ತಿಂಗಳ ಅಂತ್ಯದಲ್ಲಿ ತಾಲೂಕಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳ ಲಾಗುವುದು. ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ನಾನು ಹಿಂದೆ ಬೀಳುವುದಿಲ್ಲ ಎಂದು ತಿಳಿಸಿದರು. ನಾನು ಸಚಿವನಾದ ನಂತರ ತಾಲೂಕಿ ನಲ್ಲಿ ಮೊದಲಿನಂತೆ ಸಿಗುವುದಿಲ್ಲ ಎಂಬ ಆತಂಕ ಜನರಿಗೆ ಬೇಡ….

ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಾಗಯ್ಯ, ಲಾಳನಕೆರೆ
ಮಂಡ್ಯ

ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಾಗಯ್ಯ, ಲಾಳನಕೆರೆ

June 12, 2018

ಮಂಡ್ಯ: ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಆಂತರಿಕ ಭಿನ್ನಮತ ಸ್ಫೋಟ ಗೊಂಡಿದೆ. ಸಕ್ಕರೆ ನಾಡಿನ ಉಸ್ತುವಾರಿ ಪಟ್ಟಕ್ಕಾಗಿ ಸಚಿವರಿಬ್ಬರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಖಾತೆ ಹಂಚಿಕೆ ಕ್ಯಾತೆ ಮುಗಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿಗಾಗಿ ಸಚಿವ ಸಿ.ಎಸ್.ಪುಟ್ಟರಾಜು ಪಟ್ಟು ಹಿಡಿದಿದ್ದು, ಬೀಗರಾದ ಸಚಿವ ಡಿ.ಸಿ.ತಮ್ಮಣ್ಣ ಪರ ಜೆಡಿಎಸ್‍ನ ದೊಡ್ಡಗೌಡರು ಬ್ಯಾಟಿಂಗ್ ನಡೆಸುತ್ತಿರುವುದು ಜೆಡಿಎಸ್‍ನೊಳಗಿನ ಭಿನ್ನಮತಕ್ಕೆ ನಾಂದಿಯಾಗಿದೆ. ಮಂಡ್ಯ ದಳದೊಳಗಿನ ಈ ಆಂತರಿಕ ಕಚ್ಚಾಟ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಹಂಚಿಕೆ…

70 ವರ್ಷಗಳ ಬಳಿಕ ಪಾಂಡವಪುರಕ್ಕೆ ಶಾಪ ವಿಮೋಚನೆ!
ಮಂಡ್ಯ

70 ವರ್ಷಗಳ ಬಳಿಕ ಪಾಂಡವಪುರಕ್ಕೆ ಶಾಪ ವಿಮೋಚನೆ!

June 7, 2018

ಮೇಲುಕೋಟೆಗೆ ಪ್ರಥಮ ಬಾರಿಗೆ ಮಂತ್ರಿಗಿರಿ- ಕಳಚಿದ ಸಚಿವ ಸ್ಥಾನವಿಲ್ಲದ ಕ್ಷೇತ್ರವೆಂಬ ಹಣೆಪಟ್ಟಿ ಸಕ್ಕರೆ ನಾಡಿಗೆ ಡಬಲ್ ಧಮಾಕ- ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣಗೆ ಸಚಿವ ಸ್ಥಾನ ನಾಗಯ್ಯ ಲಾಳನಕೆರೆ ಮಂಡ್ಯ: ಇದು ಪಾಂಡವಪುರ ಅಲಿಯಾಸ್ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ವೃತ್ತಾಂತ. ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕ ಇದೀಗ ಶಾಪವಿಮೋಚನೆ ಪಡೆದ ಕ್ಷೇತ್ರ ವೆಂಬ ಕೀರ್ತಿಗೆ ಭಾಜನವಾಗುತ್ತಿರುವ ಪಾಂಡವಪುರ ರಾಜಕೀಯ ಚಿತ್ರಣ!ವಿಧಾನಸಭಾ ಕ್ಷೇತ್ರವಾಗಿದ್ದ ಪಾಂಡವ ಪುರ. 2008ರಲ್ಲಿ ನಡೆದ ಕ್ಷೇತ್ರ ವಿಂಗಡಣೆ ಯಿಂದಾಗಿ ಮೇಲುಕೋಟೆ ಕ್ಷೇತ್ರವಾಗಿ ನಾಮಕರಣಗೊಂಡಿತು….

Translate »