ಸಾಲಮನ್ನಾ ಯೋಜನೆ ಒಕ್ಕಲಿಗರಿಗೆ ಮಾತ್ರ ಅನ್ವಯಿಸಲ್ಲ
ಮಂಡ್ಯ

ಸಾಲಮನ್ನಾ ಯೋಜನೆ ಒಕ್ಕಲಿಗರಿಗೆ ಮಾತ್ರ ಅನ್ವಯಿಸಲ್ಲ

July 21, 2018
  • ರಾಜ್ಯದ ಎಲ್ಲಾ ವರ್ಗದ ರೈತರನ್ನು ಸಾಲ ಮುಕ್ತರನ್ನಾಗಿಸಲು ಬದ್ಧ
  • ಆತ್ಮಹತ್ಯೆಗೆ ಶರಣಾಗದಿರಲು ಸಿಎಂ ಮನವಿ

ಮಂಡ್ಯ: ಸಾಲ ಮನ್ನಾ ಯೋಜನೆ ಒಕ್ಕಲಿಗ ಜನಾಂಗಕ್ಕೆ ಮಾತ್ರ ಅನ್ವಯಿ ಸುವುದಿಲ್ಲ. ಎಲ್ಲಾ ವರ್ಗದ ರೈತ ರಿಗೂ ಸಲ್ಲುತ್ತದೆ. ಆದರೆ ಮಾಧ್ಯಮಗಳು ಮತ್ತು ವಿರೋಧಿಗಳು ಜನರ ದಿಕ್ಕು ತಪ್ಪಿಸುತ್ತಿ ದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶ ದಲ್ಲಿ ಮಾತನಾಡಿದ ಅವರು, ಕೇವಲ ಒಕ್ಕಲಿಗರ ಸಾಲ ಮನ್ನಾ ಮಾಡಲಾಗಿದೆ ಎಂಬ ಸಂಕುಚಿತತೆ ಬಿಡಬೇಕು. ಸಾಲಮನ್ನಾ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ದೊರೆತಿದೆ. ಮಂಡ್ಯ ನಗರಕ್ಕೆ ಬಜೆಟ್‍ನಲ್ಲಿ 100 ಕೋಟಿ ಹಣವನ್ನು ಘೋಷಣೆ ಮಾಡಿದರೆ ಬಿಜೆಪಿಯವರು ಮಂಡ್ಯ ಬಜೆಟ್ ಎಂದು ಟೀಕಿಸುತ್ತಾರೆ. ಇವರ ನಡವಳಿಕೆಯನ್ನು ಜನತೆಯೇ ನಿರ್ಧರಿಸಬೇಕೆಂದು ಟೀಕಿಸಿದರು.

ಹಂತ ಹಂತವಾಗಿ ಸಾಲ ಮನ್ನಾ: ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡರುವ ಸಾಲವನ್ನು ಹಂತ ಹಂತ ವಾಗಿ ಸಂಪೂರ್ಣವಾಗಿ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಭರವಸೆ ನೀಡಿದರು.

ಚುನಾವಣಾ ಪೂರ್ವದಲ್ಲಿ ನಮ್ಮ ಪಕ್ಷ ನೀಡಿದ ಭರವಸೆಯಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿ ಸಿದೆ. ರಾಜ್ಯದ ಜನತೆ ಸಂಪೂರ್ಣವಾಗಿ ಅಧಿಕಾರ ನೀಡಿದ್ದರೆ ಮುಖ್ಯಮಂತ್ರಿಯಾದ ಮೊದಲ ದಿನವೇ ರೈತರನ್ನು ಸಾಲ ಮುಕ್ತರನ್ನಾಗಿ ಮಾಡುತ್ತಿದ್ದೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗುವ ಅನಿವಾರ್ಯತೆ ಎದುರಾಗಿದೆ. ಆದರೂ, ಧೃತಿಗೆಡದೆ ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದೇನೆ ಎಂದರು. ರಾಷ್ಟ್ರದ ಇತಿಹಾದಲ್ಲಿ ಮಾವು, ರೇಷ್ಮೆ, ಭತ್ತದ ಬೆಳೆಗೆ ಬೆಂಬಲ ನೀಡಿದ್ದರೆ ಅದು ನಮ್ಮ ಸರ್ಕಾರ ಮಾತ್ರ. ಸಂಕಷ್ಟ ದಲ್ಲಿರುವ ರೇಷ್ಮೆ ಬೆಳೆಗಾರರು ಆತಂಕಕ್ಕೆ ಒಳಗಾಗುವುದು ಬೇಡ. ಮಿಶ್ರ ತಳಿಗೆ 40 ರೂ. ಬೆಂಬಲ ನೀಡುತ್ತಿದ್ದೇವೆ ಎಂದು ವೇದಿಕೆಯಲ್ಲಿ ಘೋಷಿಸಿದರು.

ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಸರ್ಕಾರ ರೈತರ ಹಿತವನ್ನು ಸದಾಗಮನದಲ್ಲಿಟ್ಟು ಕೊಂಡು ಆಳ್ವಿಕೆ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಕೃಷಿಕರು ಆತ್ಮಹತ್ಯೆ ಮಾಡಿ ಕೊಳ್ಳಬಾರದೆಂದು ಮನವಿ ಮಾಡಿದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಜನರು ನಿರಾತಂಕವಾಗಿ ಭತ್ತವನ್ನು ನಾಟಿ ಮಾಡ ಬೇಕು. ನಾನೇ ಹಳ್ಳಿಗೆ ಬಂದು ನಾಟಿ ಕೆಲಸದಲ್ಲಿ ತೊಡಗುತ್ತೇನೆ ಎಂದರು.

ರಾಜಕೀಯ ಜೀವನದಲ್ಲಿ ಪ್ರಮುಖ ಘಟಕ್ಕೆ ಕೊಂಡೊಯ್ದ ಮಂಡ್ಯ ಜಿಲ್ಲೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಕಾವೇರಿ ಕೊಳ್ಳದ ರೈತರು ಕಳೆದ ಹಲವು ವರ್ಷ ಗಳಿಂದ ಜಲಾಯಶದಲ್ಲಿ ನೀರಿನ ಕೊರತೆ ಯಿಂದ ಕೃಷಿಯನ್ನೇ ಮರೆಯುವಂತಹ ಪರಿಸ್ಥಿತಿ ಬಂದಿತ್ತು. ನಾನು ಪ್ರಮಾಣ ವಚನ ಸ್ವೀಕರಿಸಿದ ಮೊದಲನೆ ದಿನದಿಂದಲೂ ಮಳೆ ಬಿದ್ದು ಅಣೆಕಟ್ಟೆಗಳು ತುಂಬಿರುವುದು ನನ್ನ ಪುಣ್ಯವೇ ಸರಿ. ತಾಯಿ ಚಾಮುಂಡೇ ಶ್ವರಿ ಆಶೀರ್ವಾದದಿಂದ ಮಂಡ್ಯ ಜಿಲ್ಲೆ ಹಸಿರಿನಿಂದ ಕಂಗೊಳಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು. ಉತ್ತರ ಕರ್ನಾ ಟಕದ ಜನತೆ ಸಂಕುಚಿತ ಮನೋಭಾವ ಬಿಡಬೇಕು. ನಾನು ಹಳೇ ಮೈಸೂರು ಭಾಗದ ಮುಖ್ಯಮಂತ್ರಿಯಲ್ಲ. ಸಮಗ್ರ ಕರ್ನಾಟಕದ ಮುಖ್ಯಮಂತ್ರಿ ಎಂದರು.

ಜಿಲ್ಲೆಗೆ ಬಿಜೆಪಿ ಕೊಡುಗೆ ಏನು?: ಬಿಜೆಪಿಯವರು ಈ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಯಾವುದೇ ಸರ್ಕಾರಗಳು ಮಂಡ್ಯ ನಗರಕ್ಕೆ ಮೂಲ ಸೌಕರ್ಯ ನೀಡಿಲ್ಲ. ಕುಹಕದ ಮಾತುಗಳನ್ನು ಬಿಜೆಪಿಯವರು ಬಿಡಬೇಕು. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಯೋಜನೆ ರೂಪಿಸಲಾಗಿದೆ. ಈ ಜಿಲ್ಲೆಯಲ್ಲಿ ಹೊರ ವರ್ತುಲ ರಸ್ತೆ, ಜಿಲ್ಲಾ ಸಂಕಿರಣ, ಮೈಷು ಗರ್ ಉಳಿವು, ಆಸ್ಪತ್ರೆಯನ್ನು ಮೇಲ್ದರ್ಜೆ ಗೇರಿಸಲು ನಿರ್ಧರಿಸಲಾಗಿದೆ ಎಂದರು.

ಮಂಡ್ಯ ಮೈಷುಗರ್ ಕಾರ್ಖಾನೆಗೆ ಈಗಾಗಲೇ 20 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದೇನೆ. ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಬದ್ಧವಾಗಿದೆ. ಮಂಡ್ಯ ಜಿಲ್ಲೆಯ ಜನತೆಯ ಆಶೀರ್ವಾದ, ಅಭಿಮಾನದಿಂದ ಅಧಿಕಾರ ದಕ್ಕಿದೆ. ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಅಭೂತ ಪೂರ್ವ ಗೆಲುವಿಗೆ ನಾನು ಚಿರಋಣಿಯಾಗಿದ್ದೇನೆ. ನಿಮ್ಮ ಹೃದಯದಲ್ಲಿಟ್ಟಿರುವ ಅಭಿಮಾನಕ್ಕೆ ನಾನು ಎಂದೆಂದಿಗೂ ಋಣಿಯಾಗಿದ್ದೇನೆ ಎಂದು ಭಾವುಕರಾಗಿ ನುಡಿದರು.

ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮಂಡ್ಯ ನಗರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸ ಲಾಗಿದ್ದು, ಮುಖ್ಯಮಂತ್ರಿಗಳ ದೂರದೃಷ್ಠಿ ಯಿಂದ ಜಿಲ್ಲೆ ಅಭಿವೃದ್ಧಿ ಕಾಣಲಿದೆ ಎಂದರು.
ವೇದಿಕೆಯಲ್ಲಿ ಸಚಿವರಾದ ಡಿ.ಸಿ. ತಮ್ಮಣ್ಣ, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಾಸಕರಾದ ಎಂ.ಶ್ರೀನಿವಾಸ್, ಸುರೇಶ್ ಗೌಡ, ಡಾ.ಅನ್ನದಾನಿ, ನಾರಾಯಣ ಗೌಡ, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ರಾದ ಜಿ.ಬಿ.ಶಿವಕುಮಾರ್, ಪ್ರಭಾವತಿ ಜಯರಾಂ, ಕಲ್ಪನಾ ಸಿದ್ದರಾಜು, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಜಫ್ರುಲ್ಲಾಖಾನ್, ಜಿಪಂ ಅಧ್ಯಕ್ಷೆ ನಾಗರತ್ನ, ಜಿಲ್ಲಾಧ್ಯಕ್ಷ ಡಿ.ರಮೇಶ್ ಸೇರಿದಂತೆ ಮತ್ತಿತರರಿದ್ದರು.

Translate »