ಜೂ.1ರಿಂದ ಬಸ್ ದರ ಏರಿಕೆಯಾಗಲ್ಲ
ಮೈಸೂರು

ಜೂ.1ರಿಂದ ಬಸ್ ದರ ಏರಿಕೆಯಾಗಲ್ಲ

May 26, 2019

ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಳ ಬಗ್ಗೆ ಇದುವರೆಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಸದ್ಯಕ್ಕೆ ಬಸ್ ದರ ಹೆಚ್ಚಳ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.

ಬಸ್ ಪ್ರಯಾಣ ದರ ಹೆಚ್ಚಳ ಬಗ್ಗೆ ಈ ಹಿಂದೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರಸ್ತಾಪ ಕಳುಹಿಸಲಾಗಿತ್ತಾದರೂ ಅದರ ಬಗ್ಗೆ ಇನ್ನೂ ಚರ್ಚೆಯೇ ನಡೆದಿಲ್ಲ. ನಮ್ಮ ಹಂತದಲ್ಲಿಯೂ ಇನ್ನೂ ಚರ್ಚೆ ಯಾಗಿಲ್ಲ. ಪ್ರಯಾಣ ದರ ಹೆಚ್ಚಳ ಬಗ್ಗೆ ಮುಖ್ಯಮಂತ್ರಿಗಳು ಅನುಮತಿ ನೀಡಿಲ್ಲ. ಪ್ರಸ್ತಾವನೆ ಇನ್ನೂ ಚರ್ಚೆಯ ಹಂತ ದಲ್ಲಿಯೇ ಮುಖ್ಯಮಂತ್ರಿ ಅವರ ಬಳಿ ಯಲ್ಲಿಯೇ ಇದೆ ಎಂದರು.

ಜೂನ್ 1ರಿಂದ ಶೇ.20ರಷ್ಟು ಪ್ರಯಾಣ ದರ ಹೆಚ್ಚಳ ಎನ್ನುವುದು ಸುಳ್ಳು ಸುದ್ದಿ ಯಾಗಿದ್ದು, ಯಾರೋ ಈ ರೀತಿಯಾಗಿ ಸುಳ್ಳು ಸುದ್ದಿಯನ್ನು ಹರಡಿದ್ದಾರೆ ಎನ್ನು ವುದು ತಿಳಿಯಬೇಕಿದೆ. ಸದ್ಯಕ್ಕೆ ಬಸ್ ದರ ಹೆಚ್ಚಳ ಇಲ್ಲ ಎಂದರು.

Translate »